BMTC: ಉಚಿತ ಬಸ್ ಪ್ರಯಾಣದ ಹೊರೆ, ಆರ್ಥಿಕ ಸಂಕಷ್ಟದಲ್ಲಿ ಬಿಎಂಟಿಸಿ; ಸರ್ಕಾರದಿಂದ ₹850 ಕೋಟಿ ಪಾವತಿ ವಿಳಂಬ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) mhiL ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ 'ಶಕ್ತಿ ಯೋಜನೆ' ಕಾರಣದಿಂದಾಗಿ ಆರ್ಥಿಕವಾಗಿ ನಲುಗುವಂತಾಗಿದೆ. ಏಕೆಂದರೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಟಿಕೆಟ್ ಹಣವನ್ನು ರಾಜ್ಯ ಸರ್ಕಾರ ನೀಡುತ್ತದೆ. ಅದರಲ್ಲಿ ಸುಮಾರು 850 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ನಿಗಮವು ಸದ್ಯ ಹಣದ ಕೊರತೆ ಎದುರಿಸುತ್ತಿದೆ.
ವಿಧಾನಪರಿಷತ್ನಲ್ಲಿ ಎಂಎಲ್ಸಿ ಎಚ್.ಎಸ್. ಗೋಪಿನಾಥ್ಕೇಳಲಾದ ಮಹಿಳೆಯ ಉಚಿತ ಬಸ್ ಪ್ರಯಾಣ, ದರ ಮರುಪಾವತಿ ಕುರಿತು ಕೇಳಿದ ಪ್ರಶ್ನೆಗೆ ಸರ್ಕಾರ ನೀಡಿದ ಉತ್ತರದಲ್ಲಿ ಈ ಮಾಹಿತಿ, ಅಂಕಿ ಸಂಖ್ಯೆಗಳು ಲಭ್ಯವಾಗಿದೆ. ಮೂರು ವರ್ಷಗಳ ಹಿಂದೆ ಐದು ಗ್ಯಾರಂಟಿಗಳಲ್ಲಿ ಅನುಷ್ಠಾನಗೊಂಡ ಮೊದಲ ಯೊಜನೆ ಎಂದರೆ ಅದು 'ಶಕ್ತಿ ಯೋಜನೆ'. ಅಲ್ಲಿಂದ ಈವರೆಗೆ 680 ಕೋಟಿಗೂ ಅಧಿಕ ಮಹಿಳೆಯರು ಸಾರಿಗೆ ಬಸ್ಗಳಲ್ಲಿ ಓಡಾಡಿದ್ದಾರೆ. ಈ ಪೈಕಿ ಬಿಎಂಟಿಸಿಯು 217.62 ಕೋಟಿ ಟಿಕೆಟ್ಗಳನ್ನು ನೀಡಿದೆ.

ಸರ್ಕಾರದಿಂದ 850 ಕೋಟಿ ರೂ ಹಣ ಬಂದಿಲ್ಲ
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅವಕಾಶ ನೀಡಿದ ಬಿಎಂಟಿಸಿ ಸರ್ಕಾರದ ಕಡೆಯಿಂದ ಬರೋಬ್ಬರಿ 3,097.27 ಕೋಟಿ ರೂ. ಹಣ ಪಡೆಯಬೇಕಿದೆ. ಆದರೆ ಈವರೆಗೆ ರಾಜ್ಯ ಸರ್ಕಾರ ಕೇವಲ 2,247.35 ಕೋಟಿ ರೂ.ಗಳನ್ನು ಮರು ಪಾವತಿಸಿದೆ. ಉಳಿದ ಸುಮಾರು 850 ಕೋಟಿ ರೂ.ಗಳನ್ನು ಈವರೆಗೆ ನೀಡಿಲ್ಲ. ಇದರಿಂದ ಬಿಎಂಟಿಸಿಗೆ ಆರ್ಥಿಕ ಕೊರತೆ ಉಂಟಾಗಿದೆ. ಸದನಲ್ಲಿ ಈ ಬಗ್ಗೆ ದೊರೆತ ಅಂಕಿ ಅಂಶಗಳನ್ನು ನೋಡಿದರೆ ಶಕ್ತಿ ಯೋಜನೆಯಿಂದ ನಿಗಮ ತೊಂದರೆ ಅನುಭವಿಸುತ್ತಿರುವುದನ್ನು ಸರ್ಕಾರವೇ ಒಪ್ಪಿಕೊಂಡಂತಾಗಿದೆ.
ಹಣ ಬಾಕಿ ಪಾವತಿ ಆಗದ ಹಿನ್ನೆಲೆಯಲ್ಲಿ ಬಿಎಂಟಿಸಿ ಆರ್ಥಿಕ ಒತ್ತಡದಲ್ಲಿದೆ. ಶಕ್ತಿ ಯೋಜನೆ ಜಾರಿ ಮೊದಲೇ ಬಿಎಂಟಿಸಿ ನಿಗಮ ಕೋಟ್ಯಾಂತರ ರೂಪಾಯಿ ಹೊಣೆಗಾರಿಕೆ ಹೊಂದಿತ್ತು. ಇಂಧನ ಖರೀದಿಗೆ ಬಾಕಿ, ಭವಿಷ್ಯ ನಿಧಿ ಬಾಧ್ಯತೆ, ಸಿಬ್ಬಂದಿ ವೇತನ ಪರಿಷ್ಕರಣೆ, ನಿರ್ವಹಣೆ ವೆಚ್ಚಗಳು ಒಳಗೊಂಡು ಸುಮಾರು 1,383.86 ಕೋಟಿ ರೂ.ಗಳ ಹೊಣೆಗಾರಿಕೆ ಹೊಂದಿತ್ತು ಎಂದು ಮೂಲಗಳು ತಿಳಿಸಿವೆ.
ಇದರ ನಡುವೆ ಎಂದಿನಂತೆ ಬಿಎಂಟಿಸಿ ಬಸ್ಗಳು ನಗರಾದ್ಯಂತೆ ಸೇವೆ ನೀಡುತ್ತಿವೆ. ಹೀಗಿದ್ದರೂ ಸಹಿತ ಸರ್ಕಾರ ಕೋಟ್ಯಾಂತರ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಸರ್ಕಾರ ಪ್ರತಿ ತಿಂಗಳು ಮುಂಚಿತವಾಗಿ ಹಣ ಬಿಡುಗಡೆ ಮಾಡುತ್ತದೆ. ಬಿಎಂಟಿಸಿ ಸಂಸ್ಥೆಯ ಹಣಕಾಸು ಸ್ಥಿತಿಗತಿ ಸ್ಥಿರವಾಗಿಸಲು ಸರ್ಕಾರ ಮರುಪಾವತಿಗೆ ಆರ್ಥಿಕ ಬೆಂಬಲ ನೀಡುವುದು, 589.20 ಕೋಟಿ ರೂ. ಸಾಲ ಸಂಗ್ರಹಕ್ಕೆ ಅನುಮತಿ ನೀಡುವುದು ಸೇರಿ ಕೆಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಿದೆ.
ಬಿಎಂಟಿಸಿ ಹೊಸ ಬಸ್ ಖರೀದಿ, ಡೀಸೆಲ್ ಬಸ್ ಘೋಷಣೆ
ಅಗತ್ಯ ಹಣ ನೀಡಬಹುದಿತ್ತು. ಡೀಸೆಲ್ ಮತ್ತು ಎಲೆಕ್ಟ್ರಿಕ್ ಬಸ್ಗಳನ್ನು ನಿಗಮಕ್ಕೆ ಸೇರ್ಪಡೆಗೊಳಿಸುವ ಯೋಜನೆ ಪ್ರಗತಿಯಲ್ಲಿದೆ. ಪಿಎಂ ಇ-ಡ್ರೈವ್ ಅಡಿ 4,500 ಎಲೆಕ್ಟ್ರಿಕ್ ಬಸ್ಗಳ ಖರೀದಿಗೆ ಒಪ್ಪಿಗೆ, ಹೆಚ್ಚುವರಿ ಬಸ್ಗಳ ಪ್ಲೀಟ್ ವಿಸ್ತರಣೆಗೆ, ಆಧುನಿಕ ಸೌಲಭ್ಯ ಒದಗಿಸುವ ಸವಾಲುಗಳು ಸರ್ಕಾರದ ಮುಂದಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (2026-279 ಬಜೆಟ್ನಲ್ಲಿ ಹೆಚ್ಚುವರಿಯಾಗಿ 1,000 ಡೀಸೆಲ್ ಬಸ್ಗಳ ಸೇರ್ಪಡೆ ಬಗ್ಗೆ ಘೋಷಣೆ ಮಾಡಲಾಗಿದೆ. ಅದಕ್ಕೆಲ್ಲ ಕೋಟಿಗಟ್ಟಲೇ ಹಣ ವ್ಯಯಿಸಬೇಕಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಬಿಎಂಟಿಸಿ ಜೊತೆಗೆ ಕೆಎಸ್ಆರ್ಟಿಸಿ. ಎನ್ಡಬ್ಲುಕೆಆರ್ಟಿಸಿ ಮತ್ತು ಕೆಕೆಆರ್ಟಿಸಿ ಗಳಿಗೆ ನೀಡುವ ಹಣದ ಕುರಿತು ವಿಪಕ್ಷಗಳು ಸಾಕಷ್ಟು ಆರೋಪಿಸಿದ್ದವು. ಶಕ್ತಿಯಿಂದ ರಾಜ್ಯದ ಸಾರಿಗೆ ನಿಗಮಗಳು ಆರ್ಥಿಕ ಶಕ್ತಿ ಕಳೆದುಕೊಂಡಿವೆ ಎಂದು ದೂರಿದ್ದರು.
-
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral













Click it and Unblock the Notifications