ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ

ಹಾಸನ: ಮದುವೆ ಎಂದರೆ ಎರಡು ಜೀವಗಳ, ಎರಡು ಕುಟುಂಬಗಳ ಹೊಸ ಸಂಬಂಧದ ಆರಂಭ. ಆದರೆ ಇಲ್ಲೊಂದು ಕಡೆ ಮದುವೆ ಮಂಟಪದಲ್ಲಿ, ಇನ್ನೇನು ಮಾಂಗಲ್ಯ ಧಾರಣೆಗೆ ಕೆಲವೇ ನಿಮಿಷಗಳಿರುವಾಗ ವಧು ದಿಢೀರ್ ಎಂದು ಮದುವೆಯನ್ನು ನಿಲ್ಲಿಸಿದ ಘಟನೆ ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ನಡೆದಿದೆ. ವಧು ಪಲ್ಲವಿ ತಾನು ಬೇರೊಬ್ಬನನ್ನು ಪ್ರೀತಿಸುತ್ತಿದ್ದು, ಈ ಮದುವೆ ತನಗೆ ಇಷ್ಟವಿಲ್ಲ ಎಂದು ಹೇಳುವ ಮೂಲಕ ನೆರೆದಿದ್ದ ಅತಿಥಿಗಳು ಹಾಗೂ ಎರಡೂ ಕುಟುಂಬದವರನ್ನು ದಂಗಾಗಿಸಿದ್ದಾಳೆ. ಈ ಘಟನೆಯು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ವರನ ಪ್ರಬುದ್ಧ ನಡೆಯ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹಾಸನ ಜಿಲ್ಲೆಯ ಕಲ್ಯಾಣ ಮಂಟಪವೊಂದರಲ್ಲಿ ಪಲ್ಲವಿ ಹಾಗೂ ವೇಣುಗೋಪಾಲ ಅವರ ಮದುವೆ ಅದ್ದೂರಿಯಾಗಿ ನಿಶ್ಚಯವಾಗಿತ್ತು. ಮದುವೆಯ ಬಹುತೇಕ ಸಂಪ್ರದಾಯಗಳು ಮುಗಿದು, ಮಾಂಗಲ್ಯ ಧಾರಣೆಗೆ ಕೇವಲ ಐದು ನಿಮಿಷಗಳು ಮಾತ್ರ ಬಾಕಿ ಇದ್ದವು. ಈ ವೇಳೆ ಯಾರಿಗೋ ಕರೆ ಮಾಡಿದ ಪಲ್ಲವಿ, ತನಗೆ ಈ ಮದುವೆ ಇಷ್ಟವಿಲ್ಲ ಎಂದು ಹೇಳಿ ಕೋಣೆಯೊಂದರಲ್ಲಿ ತನ್ನನ್ನು ತಾನು ಲಾಕ್ ಮಾಡಿಕೊಂಡಳು. ಬಳಿಕ ಆಕೆ, ತಾನು ಬೇರೊಬ್ಬ ಯುವಕನನ್ನು ಗಾಢವಾಗಿ ಪ್ರೀತಿಸುತ್ತಿರುವುದಾಗಿ ಹಾಗೂ ಆತ ಬೇರೆ ಜಾತಿಗೆ ಸೇರಿರುವ ಕಾರಣ ಈ ವಿಚಾರವನ್ನು ಮನೆಯಲ್ಲಿ ಮುಂಚಿತವಾಗಿ ಹೇಳಲು ಸಾಧ್ಯವಾಗಲಿಲ್ಲ, ಭಯವಾಗಿತ್ತು ಎಂದು ತನ್ನ ಕುಟುಂಬದವರ ಮುಂದೆ ಅಳಲು ತೋಡಿಕೊಂಡಿದ್ದಾಳೆ.

Hassan

ಮಗಳ ಈ ದಿಢೀರ್ ನಿರ್ಧಾರದಿಂದ ಕಂಗೆಟ್ಟ ಪೋಷಕರು, ಸಂಬಂಧಿಕರು ಹಾಗೂ ಸ್ನೇಹಿತರು ಆಕೆಗೆ ಎಷ್ಟೇ ಬುದ್ಧಿವಾದ ಹೇಳಿದರೂ, ಆಕೆ ತನ್ನ ನಿರ್ಧಾರದಿಂದ ಸ್ವಲ್ಪವೂ ಹಿಂದೆ ಸರಿಯಲಿಲ್ಲ. ಮಂಟಪದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಈ ಸಂದರ್ಭದಲ್ಲಿ ವರ ವೇಣುಗೋಪಾಲ ಅವರು ತೋರಿದ ಪ್ರಬುದ್ಧತೆ ಮತ್ತು ಅದ್ಭುತ ಸಂಯಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪರಿಸ್ಥಿತಿಯನ್ನು ಅರಿತ ವರ ವೇಣುಗೋಪಾಲ, "ಪರಸ್ಪರ ಪ್ರೀತಿ ಮತ್ತು ಒಪ್ಪಿಗೆ ಇಲ್ಲದೆ ಯಾರನ್ನೂ ಮದುವೆಯಾಗಲು ನಾನು ಒತ್ತಾಯಿಸುವುದಿಲ್ಲ. ಆಕೆಗೆ ಇಷ್ಟವಿಲ್ಲದಿದ್ದ ಮೇಲೆ ಬಲವಂತವಾಗಿ ಮದುವೆಯಾದರೆ ಮುಂದಿನ ದಾಂಪತ್ಯ ಜೀವನವೂ ನೆಮ್ಮದಿಯಾಗಿರುವುದಿಲ್ಲ" ಎಂದು ಹೇಳಿ ಅತ್ಯಂತ ಸಜ್ಜನಿಕೆಯಿಂದ ಮದುವೆಯಿಂದ ಹಿಂದೆ ಸರಿದರು.

ಸಾಮಾಜಿಕ ಜಾಲತಾಣಗಳಲ್ಲಿ ವರನಿಗೆ ಭಾರಿ ಪ್ರಶಂಸೆ

ಈ ಸುದ್ದಿಯನ್ನು ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ವರ ಹಾಗೂ ವಧುವಿನ ನಿರ್ಧಾರದ ಬಗ್ಗೆ ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ವಿಶೇಷವಾಗಿ ನೆಟ್ಟಿಗರು ವರನ ತಾಳ್ಮೆಯನ್ನು ಕೊಂಡಾಡುತ್ತಿದ್ದಾರೆ. "ವರನ ಪ್ರಬುದ್ಧತೆಗೆ ನಮ್ಮದೊಂದು ಹ್ಯಾಟ್ಸ್ ಆಫ್. ಬಲವಂತದ ಮದುವೆಗಿಂತ, ವಾಸ್ತವವನ್ನು ಒಪ್ಪಿಕೊಂಡು ಹಿಂದೆ ಸರಿದ ಆತನಿಗೆ ದೊಡ್ಡ ಸೆಲ್ಯೂಟ್! Respect for that groom!" ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

"ಕೊನೆ ಗಳಿಗೆಯಲ್ಲಾದರೂ ವಧು ಸತ್ಯ ಹೇಳುವ ಧೈರ್ಯ ಮಾಡಿದಳಲ್ಲ, ಅದರಿಂದ ಮೂವರ ಭವಿಷ್ಯ ಉಳಿಯಿತು. ಇದು ಸ್ವಲ್ಪ ತಡವಾದರೂ ಅತ್ಯಂತ ಸರಿಯಾದ ನಿರ್ಧಾರ" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. "ಯಾವುದೇ ಪೋಷಕರು ಸಮಾಜದ ಬಗ್ಗೆ ಯೋಚಿಸುವ ಬದಲು, ಮುಂಚೆಯೇ ತಮ್ಮ ಮಕ್ಕಳ ಇಷ್ಟ-ಕಷ್ಟಗಳನ್ನು ಅರಿತುಕೊಳ್ಳುವುದು ಉತ್ತಮ. ಇದರಿಂದ ಇಂತಹ ಮುಜುಗರದ ಸನ್ನಿವೇಶಗಳನ್ನು ತಪ್ಪಿಸಬಹುದು" ಎಂದು ಹಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಈ ಘಟನೆಯು ಇಂದಿನ ಯುವಜನತೆ ಮತ್ತು ಪೋಷಕರಿಗೆ ಒಂದು ದೊಡ್ಡ ಪಾಠವಾಗಿದೆ. ಮದುವೆಯಂತಹ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕುಟುಂಬದಲ್ಲಿ ಮುಕ್ತ ಸಂವಹನ ಹಾಗೂ ಪರಸ್ಪರ ಅರ್ಥಮಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಇದು ಸಾಬೀತುಪಡಿಸಿದೆ. ಅಂತಿಮವಾಗಿ ಇಬ್ಬರೂ ತಮ್ಮ ಮುಂದಿನ ಬದುಕಿನತ್ತ ಹೊಸ ಹೆಜ್ಜೆ ಹಾಕಲು ಈ ನಿರ್ಧಾರ ಸಹಾಯ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+