ಬೆಳಿಗ್ಗೆ ನಿಂಬೆ ಹಣ್ಣಿನ ರಸ ಕುಡಿಯುತ್ತಿದ್ದೀರಾ? ಲಾಭಗಳ ಜೊತೆ ಈ ಅಪಾಯಗಳೂ ಇವೆ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣಿನ ರಸ ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸ ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾದ ಪಾನೀಯ ಆಗಿದೆ. ನಿಂಬೆಹಣ್ಣಿನಲ್ಲಿ ಪೋಷಕಾಂಶಗಳು ಅಧಿಕವಾಗಿರುವುದರಿಂದ, ಇದು ಆರೋಗ್ಯಕ್ಕೆ ಹಲವಾರು ಲಾಭಗಳನ್ನು ನೀಡುತ್ತದೆ ಎಂದು ನಂಬಲಾಗುತ್ತದೆ. ಆದರೆ ತಜ್ಞರ ಪ್ರಕಾರ, ಇದನ್ನು ಸರಿಯಾದ ರೀತಿಯಲ್ಲಿ ಮತ್ತು ಮಿತವಾಗಿ ಸೇವಿಸುವುದು ಅತ್ಯಂತ ಮುಖ್ಯವಾಗಿದೆ.

ತೂಕ ಇಳಿಕೆಗೆ ಸಹಾಯಕ

ನಿಂಬೆ ಹಣ್ಣಿನ ರಸ ಮತ್ತು ಜೇನುತುಪ್ಪ ಬೆರೆಸಿದ ಬೆಚ್ಚಗಿನ ನೀರನ್ನು ಬೆಳಿಗ್ಗೆ ಕುಡಿಯುವುದರಿಂದ ದೇಹವು ನಾವು ಸೇವಿಸಿದ ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ ಕ್ರಿಯೆ ಹೆಚ್ಚು ಮಾಡುತ್ತದೆ. ಇದರಿಂದ ಕೊಬ್ಬು ಕರಗಿಸುವ ಪ್ರಕ್ರಿಯೆ ಹೆಚ್ಚಾಗುತ್ತದೆ ಮತ್ತು ತೂಕ ಇಳಿಕೆಗೆ ಇದು ಸಹಾಯವಾಗುತ್ತದೆ.

Lemon Water in Morning

ಸಕ್ಕರೆ, ಉಪ್ಪು ಸೇರಿಸಬೇಕೆ?

ಕೆಲವರು ನಿಂಬೆ ಹಣ್ಣಿನ ರಸಕ್ಕೆ ಸಕ್ಕರೆ ಅಥವಾ ಉಪ್ಪು ಸೇರಿಸುತ್ತಾರೆ. ಆದರೆ ತೂಕ ಇಳಿಸಲು ಬಯಸುವವರು ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕಾಗುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ ಉಪ್ಪು ಬೆರೆಸುವುದು ಕೂಡ ಬೇಡ. ನಿರ್ಜಲೀಕರಣ (dehydration) ಆಗಿರುವ ಸಂದರ್ಭಗಳಲ್ಲಿ ಮಾತ್ರ ಉಪ್ಪು ಸೇರಿಸಬಹುದು.

ನಿಂಬೆ ಹಣ್ಣಿನ ರಸ ದಿನಕ್ಕೆ ಎಷ್ಟು ಸಾರಿ ಕುಡಿಯಬೇಕು?

ತಜ್ಞರ ಪ್ರಕಾರ ದಿನಕ್ಕೆ ಒಂದು ಅಥವಾ ಎರಡು ಗ್ಲಾಸ್‌ಗಳಷ್ಟು ಮಾತ್ರ ನಿಂಬೆ ಹಣ್ಣಿನ ರಸವನ್ನು ಕುಡಿಯುವುದು ಒಳ್ಳೆಯದು. ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.

ಇನ್ನಿತರ ಆರೋಗ್ಯಕ್ಕೆ ಆಗುವ ಲಾಭಗಳು ಈ ರೀತಿ ಇವೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ದೇಹವನ್ನು ಹೈಡ್ರೇಟ್ ಮಾಡುತ್ತದೆ
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಚರ್ಮದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ಗಮನಿಸಬೇಕಾದ ಮುಖ್ಯ ಅಂಶಗಳು

ಶುದ್ಧ ನಿಂಬೆ ಹಣ್ಣಿನ ರಸವನ್ನು ನೇರವಾಗಿ ಕುಡಿಯಬಾರದು
ಇದು ಹಲ್ಲಿನ ಮೇಲಿನ ಪದರವನ್ನು ಹಾನಿಗೊಳಿಸಬಹುದು
ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು
ಉಪಾಹಾರದ 40 ನಿಮಿಷಗಳ ನಂತರ ಕುಡಿಯುವುದು ಉತ್ತಮ

ಯಾವಾಗ ಕುಡಿಯಬೇಕು?

ನಿಂಬೆ ಹಣ್ಣಿನ ರಸವನ್ನು ಊಟಕ್ಕೂ ಮೊದಲು ಅಥವಾ ತಕ್ಷಣ ನಂತರ ಕುಡಿಯಬಾರದು. ಇದರಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆ ಮೇಲೆ ಪರಿಣಾಮ ಬೀರುತ್ತದೆ.

ನಿಂಬೆ ಹಣ್ಣಿನ ರಸ ಆರೋಗ್ಯಕರ ಪಾನೀಯವಾದರೂ, ಅದನ್ನು ಮಿತವಾಗಿ ಮತ್ತು ಸರಿಯಾದ ವಿಧಾನದಲ್ಲಿ ಸೇವಿಸುವುದು ಮುಖ್ಯ. ತಜ್ಞರು ನೀಡಿದ ಮಾರ್ಗಸೂಚಿಗಳನ್ನು ಪಾಲಿಸಿದರೆ ಮಾತ್ರ ಇದರ ಸಂಪೂರ್ಣ ಪ್ರಯೋಜನಗಳನ್ನು ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+