Krunal Pandya: ವಿರಾಟ್ ಕೊಹ್ಲಿ - 2026ರ ಆರ್‌ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್
Krunal Pandya: ರಾಯಲ್ ಚಾಲೆಂಜರ್ಸ್ ಬೆಂಗಳೂರು (Rcb) ಪುರುಷರ ತಂಡವು ಸುದೀರ್ಘ 18 ವರ್ಷಗಳ ಕಾಯುವಿಕೆಯ ನಂತರ ಐಪಿಎಲ್ ಕಪ್ ಎತ್ತಿಹಿಡಿದಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಐಪಿಎಲ್‌ನಲ್ಲಿ ತನ್ನದೇ ಹವಾ ಇದೆ. ಅಪಾರವಾದ ಅಭಿಮಾನ ಬಳಗವಿದೆ. ಇನ್ನು 2025ರಲ್ಲಿ ಆರ್‌ಸಿಬಿ ತಂಡವು ಕಪ್ ಗೆದ್ದ ಮೇಲೆ ಹಾಗೂ ಈಗ ಹೇಗಿದೆ ಎನ್ನುವ ಬಗ್ಗೆ RCB ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯ ಅವರು ವಿವರಿಸಿದ್ದಾರೆ. 2025ರ ಪ್ರಶಸ್ತಿ ಗೆದ್ದ ತಂಡಕ್ಕೂ ಈ ಸೀಸನ್‌ನ ತಂಡಕ್ಕೂ ಇರುವ ವ್ಯತ್ಯಾಸವೇನು ಅಂತ ಅವರು ವಿವರಿಸಿದ್ದಾರೆ.
2025ರ ಸೀಸನ್ ಪ್ರಶಸ್ತಿ ವಿಜೇತ ತಂಡಕ್ಕೂ ಈಗ ಇರುವುದಕ್ಕೂ ಏನು ವ್ಯತ್ಯಾಸವಾಗಿದೆ ಎನ್ನುವುದನ್ನು ಆರ್‌ಸಿಬಿ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯ ಅವರು ಸೊಗಸಾಗಿ ವಿವರಿಸಿದ್ದಾರೆ. ಕಳೆದ ವರ್ಷದ ವರೆಗೂ ಆರ್‌ಸಿಬಿ ಆಟಗಾರರು ಹಾಗೂ ಆರ್‌ಸಿಬಿ ಅಭಿಮಾನಿಗಳಿಗೂ ನಾವು ಐಪಿಎಲ್ ಕಪ್ ಗೆಲ್ಲಲೇಬೇಕು ಎನ್ನುವುದೇ ಮುಖ್ಯ ಉದ್ದೇಶವಾಗಿತ್ತು. ಇದಾದ ನಂತರ ಹಾಗೂ 2026ನೇ ಸೀಸನ್‌ನಲ್ಲಿ ಆರ್‌ಸಿಬಿ ಆಟಗಾರರ ಮನಸ್ಥಿತಿ ಹೇಗಿದೆ ಹಾಗೂ ಆ ಸುದೀರ್ಘ 18 ವರ್ಷಗಳ ಒತ್ತಡ ಕಡಿಮೆಯಾಗಿದೆಯೇ ಎನ್ನುವ ಬಗ್ಗೆ ಕೃನಾಲ್ ಪಾಂಡ್ಯ ಅವರು ಮಾತನಾಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಳೆದ ವರ್ಷಕ್ಕಿಂತ ಈಗ ವಾತಾವರಣ ಹೆಚ್ಚು ಶಾಂತವಾಗಿದೆ. ಅಲ್ಲದೆ ಈ ಋತುವಿನಲ್ಲಿ ಆಟಗಾರರು ತಮ್ಮ ಜವಾಬ್ದಾರಿಗಳ ಅಥವಾ ತಂಡದಲ್ಲಿ ತಮ್ಮ ಸ್ಥಾನದ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಹೊಂದಿದ್ದಾರೆ ಎಂದು ಕೃನಾಲ್ ಪಾಂಡ್ಯ ಹೇಳಿದ್ದಾರೆ. 2025ರಲ್ಲಿ ಆರ್‌ಸಿಬಿ 18 ವರ್ಷಗಳಲ್ಲಿ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದಿತ್ತು. ಅಹಮದಾಬಾದ್‌ನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು, ಆರ್‌ಸಿಬಿ ಆರು ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.
Krunal Pandya: ಆರ್‌ಸಿಬಿ ತಂಡ ಈ ವರ್ಷ ಹೇಗಿದೆ
ಇನ್ನು ಈ ವರ್ಷ ಆರ್‌ಸಿಬಿ ತಂಡವು ಹೆಚ್ಚು ಶಾಂತ ವಾತಾವರಣವಿದೆ ಎಂದು ನಾನು ಭಾವಿಸುತ್ತೇನೆ. ಕಳೆದ ವರ್ಷ, ಇದು ಹೊಸ ತಂಡವಾಗಿತ್ತು ಮತ್ತು ಎಲ್ಲರೂ ಪರಸ್ಪರ ತಿಳಿದುಕೊಂಡೆವು. ಈ ವರ್ಷ, ಅನೇಕ ಆಟಗಾರರು ತಮ್ಮ ಪಾತ್ರಗಳನ್ನು ಮತ್ತು ಪರಸ್ಪರರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಕೃನಾಲ್ ಪಾಂಡ್ಯ ಅವರು ಫ್ರಾಂಚೈಸಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾನು ದೊಡ್ಡ ಸಂದರ್ಭಗಳಲ್ಲಿ ತೊಡಗಿದಾಗ, ದೇವರು ನಿಮ್ಮನ್ನು ಇಲ್ಲಿಗೆ ಕರೆತಂದಿದ್ದರೆ, ಅದರ ಹಿಂದೆ ಒಂದು ಕಾರಣವಿದೆ ಎಂದು ನನಗೆ ಅನಿಸುತ್ತದೆ. ಕೆಲವೊಮ್ಮೆ ಈ ದೊಡ್ಡ ಸಂದರ್ಭಗಳು ನಿಜವಾಗಿಯೂ ನನಗಾಗಿಯೇ ಬಂದಿದೆ ಎಂದು ನಾನು ಭಾವಿಸುತ್ತೇನೆ. ನಾನು ಒತ್ತಡವನ್ನು ಅನುಭವಿಸುತ್ತೇನೆ, ಆದರೆ ನಾನು ಹೇಗೆ ಶಾಂತವಾಗಿರಬಹುದು ಮತ್ತು ಪ್ರಸ್ತುತ ಕ್ಷಣದಲ್ಲಿ ಅಗತ್ಯವಿರುವುದನ್ನು ಹೇಗೆ ಮಾಡಬಹುದು ಎಂಬುದರ ಬಗ್ಗೆಯೂ ನಾನು ಯೋಚಿಸುತ್ತೇನೆ ಎಂದಿದ್ದಾರೆ.
Krunal Pandya:
ಆರ್‌ಸಿಬಿ ಐಕಾನ್ ವಿರಾಟ್ ಕೊಹ್ಲಿ ಕ್ರಿಕೆಟ್‌ನ ಯಾವುದೇ ಯುಗದಲ್ಲಿ ಶ್ರೇಷ್ಠ ಆಟಗಾರರಲ್ಲಿ ಸುಲಭವಾಗಿ ಸ್ಥಾನ ಪಡೆಯುತ್ತಾರೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ವಿರಾಟ್ ಕೊಹ್ಲಿ ಒಬ್ಬರು ಶ್ರೇಷ್ಠ ಉದಾಹರಣೆ. ನೀವು ಆ ಹಸಿವನ್ನು ನೋಡಬಹುದು; ಆ ಉತ್ಸಾಹವನ್ನು ಅವರು ಆಟವನ್ನು ಹೇಗೆ ನೋಡುತ್ತಾರೆ ಮತ್ತು ಆ ಗೆಲುವನ್ನು ಅವರು ಎಷ್ಟು ಬಯಸುತ್ತಾರೆ ಎನ್ನುವುದು ಕ್ರೀಡಾಂಗಣದಲ್ಲಿ ತಿಳಿಯುತ್ತದೆ. ವಿರಾಟ್ ಕೊಹ್ಲಿ ಯಾವುದೇ (ಬೇರೆ ಯಾವುದಾದರೂ) ಪೀಳಿಗೆಯಲ್ಲಿ ಜನಿಸಿದಿದ್ದರೆ, ಅವರು ಇನ್ನೂ ಶ್ರೇಷ್ಠರಲ್ಲಿ ಒಬ್ಬರಾಗಿರುತ್ತಿದ್ದರು. ಅವರು ಬೇರೆ ಯಾರೊಂದಿಗೂ ಸ್ಪರ್ಧಿಸುತ್ತಿಲ್ಲ ಎಂದೂ ಹೇಳಿದ್ದಾರೆ.












Click it and Unblock the Notifications