Get Updates
Get notified of breaking news, exclusive insights, and must-see stories!

SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ

ಬೆಂಗಳೂರು; ನೈಋತ್ಯ ರೈಲ್ವೆಯು ಗುಡ್ ಫ್ರೈಡೆ ಮತ್ತು ಈಸ್ಟರ್ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ನಿವಾರಣೆ ಸಲುವಾಗಿ ಏಪ್ರಿಲ್ ಮೊದಲ ವಾರದ ಬೆಂಗಳೂರು ಎಸ್‌ಎಂವಿಟಿ ನಿಲ್ದಾಣದಿಂದ ಬೆಳಗಾವಿ ನಿಲ್ದಾಣ ಹಾಗೂ ಹುಬ್ಬಳ್ಳಿ-ಕೊಲ್ಲಂ ವರೆಗೆ ಒಂದು ಸುತ್ತಿನ ವಿಶೇಷ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ನಡೆಸಲು ನಿರ್ಧರಿಸಿದೆ.

ಈ ರೈಲುಗಳು ಏಪ್ರಿಲ್ 2 ರಿಂದ 5ರವರೆಗೆ ಸಂಚಾರ ನಡೆಸಲಿವೆ. ಬೆಂಗಳೂರು ಎಸ್‌ಎಂವಿಟಿ ರೈಲು- ಬೆಳಗಾವಿ ರೈಲು (06503) ಏಪ್ರಿಲ್ 2 ಗುರುವಾರ ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಹೊರಡುತ್ತದೆ. ಮರುದಿನ ಬೆಳಗ್ಗೆ 7:35ಕ್ಕೆ ಬೆಳಗಾವಿ ತಲುಪಲಿದೆ. ಮರಳಿ ಅದೇ ದಿಕ್ಕಿನಲ್ಲಿ ಬೆಳಗಾವಿ-ಬೆಂಗಳೂರು ಎಸ್‌ಎಂವಿಟಿ ರೈಲು (06504) ಏಪ್ರಿಲ್ 5ರಂದು ಭಾನುವಾರ ಸಂಜೆ 5:30 ಗಂಟೆಗೆ ಪ್ರಯಾಣ ಆರಂಭಿಸಿ ಏಪ್ರಿಲ್ 6ರಂದು ಬೆಳಗ್ಗೆ 5 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.

Trains Special 1 Trip Service

ರೈಲು ನಿಲುಗಡೆ ನಿಲ್ದಾಣಗಳು

ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಎಸಿ ತ್ರಿ ಟೈರ್, ಎಸಿ ಟು ಟೈರ್, ನಾನ್ ಎಸಿ ಸ್ಲೀಪರ್ ಹಾಗೂ ಜನರಲ್ ಸೇರಿ ಒಟ್ಟು 19 ಬೋಗಿಗಳನ್ನು ಹೊಂದಿರಲಿದೆ. ಎರಡು ಸಂಚಾರ ದಿಕ್ಕುಗಳಲ್ಲಿ ಈ ರೈಲು 'ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ.

New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ

ಹುಬ್ಬಳ್ಳಿ-ಕೊಲ್ಲಂ ವಿಶೇಷ ರೈಲು ಸೇವೆ

ಎಸ್‌ಎಸ್‌ಎಸ್‌ ಹುಬ್ಬಳ್ಳಿಯಿಂದ ಕೊಲ್ಲಂವರೆಗೆ ಒಂದು ಟ್ರಿಪ್ ವಿಶೇಷ ರೈಲು (07347) ಕಾರ್ಯಾಚರಣೆ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಏಪ್ರಿಲ್ 2ರಂದು ಗುರುವಾರ ಸಂಜೆ 7;5ಕ್ಕೆ ಹುಬ್ಬಳ್ಳಿಯಿಂದ ಹೊರಟು, ಮಾರನೇ ದಿನ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಕೊಲ್ಲಂ ನಿಲ್ದಾಣ ಸೇರುತ್ತದೆ.

ಮರಳಿ ಅದೇ ದಿನಕ್ಕಿನಲ್ಲಿ ಕೊಲ್ಲಂ-ಹುಬ್ಬಳ್ಳಿ ರೈಲು (07348) ಏಪ್ರಿಲ್ 3ರಂದು ಶುಕ್ರವಾರ ರಾತ್ರಿ 10.45ಗಂಟೆಗೆ ಹೊರಟು ಮಾರನೇ ದಿನ ಬೆಳಗ್ಗೆ 10.40ಕ್ಕೆ ಹುಬ್ಬಳ್ಳಿಗೆ ಬಂದು ಸೇರಲಿದೆ. ಈ ರೈಲಿನಲ್ಲಿ ಒಟ್ಟು 17 ಬೋಗಿಗಳು ಇರಲಿವೆ.

ಈ ರೈಲು ಎರಡು ದಿಕ್ಕಿನಲ್ಲಿ ಎಸ್‌ಎಂಎಂ‌ ಹಾವೇರಿ, ರಾಣಿಬೆನ್ನೂರು, ಹರಿಹರ, ಬೀರೂರು, ಅರಸಿಕೆರೆ, ತುಮಕೂರು ಎಸ್‌ಎಂವಿಟಿ, ಕೆ.ಆರ್‍‌.ಪುರಂ, ಬಂಗಾರಪೇಟೆ, ಇರೋಡ್, ತಿರಪುರ, ಪಲ್ಲಕ್ಕಾಡ್, ಕೊಟ್ಟಾಯಂ, ಆಲುವಾ, ಚೆಂಗಾನೂರು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೈಲಿನ ಹೆಚ್ಚಿನ ಮಾಹಿತಿ, ವೇಳಾಪಟ್ಟಿಗಾಗಿ ಭಾರತೀಯ ರೈಲ್ವೆ ಇಲಾಖೆ ಅಧಿಕೃತ ವೆಬ್‌ಸೈಟ್ indianrail.gov.in ಗೆ ಅಥವಾ ಸಹಾಯವಾಣಿ ಸಂಖ್ಯೆ 139ಗೆ ಕರೆ ಮಾಡಬಹುದೆಂದು ತಿಳಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+