ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದು ಹೊಸ ರೀತಿ ಬ್ಲ್ಯಾಕ್ ಮೇಲ್, ಭಾರತದ ಮೊದಲ ಪ್ರಕರಣ ಬೆಂಗ್ಳೂರಲ್ಲಿ

|
Google Oneindia Kannada News

ಬೆಂಗಳೂರು, ಜುಲೈ 27: ನಿಮಗೆ ಪೋಲಿ ಸಿನಿಮಾ- ವಿಡಿಯೋ ನೋಡುವ ಅಭ್ಯಾಸ ಇರುವುದು ನಮಗೆ ಗೊತ್ತಿದೆ ಅಂತ ಯಾರಾದರೂ ಇಮೇಲ್ ಕಳಿಸಿದರೆ ನೀವೇನು ಮಾಡ್ತೀರಿ? ಅದರಲ್ಲೂ ಸಾಕ್ಷಿ ಅನ್ನೋ ಹಾಗೆ ಆ ಮೇಲ್ ನಲ್ಲೇ ನಿಮ್ಮ ಹಳೇ ಪಾಸ್ ವರ್ಡ್ ವೊಂದನ್ನು ಹಾಕಿದ್ದರೆ ಏನು ಮಾಡ್ತೀರಿ?

ಇಂಥ ಇಮೇಲ್ ಗಳೆಲ್ಲ ನೇರವಾಗಿ ಬ್ಲ್ಯಾಕ್ ಮೇಲ್ ಉದ್ದೇಶಕ್ಕೆ ಬರುತ್ತವೆ. ಒಂದಿಷ್ಟು ಹಣ ಕೊಡಿ ಅಥವಾ ನಿಮ್ಮ ಇಮೇಲ್ ಪಟ್ಟಿಯಲ್ಲಿರುವ ಎಲ್ಲರಿಗೆ ಈ ಅಭ್ಯಾಸದ ಬಗ್ಗೆ ತಿಳಿಸ್ತೀವಿ ಎಂದು ಧಮಕಿ ಹಾಕಿಬಿಟ್ಟರೆ ನೆಮ್ಮದಿ ಹಾರಿಹೋಗಿರುತ್ತದೆ.

ಉದ್ಯಮಿಯನ್ನು ಬ್ಲಾಕ್ ಮೇಲ್ ಮಾಡಿದ ನಕಲಿ ಪತ್ರಕರ್ತರ ಬಂಧನಉದ್ಯಮಿಯನ್ನು ಬ್ಲಾಕ್ ಮೇಲ್ ಮಾಡಿದ ನಕಲಿ ಪತ್ರಕರ್ತರ ಬಂಧನ

ಇಂಥದೇ ಇಮೇಲ್ ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಬಂದಿದೆ. ಬೇಡಿಕೆ ಇಟ್ಟಿದ್ದು 2,200 ಡಾಲರ್ ಗೆ. ಒಂದು ದಿನ ಕಾಲಾವಕಾಶ ಕೊಡ್ತೀವಿ. ಬಿಟ್ ಕಾಯಿನ್ ಅಥವಾ ಕ್ರಿಪ್ಟೋಕರೆನ್ಸಿಯಲ್ಲಿ ಪಾವತಿ ಮಾಡಬೇಕು ಎಂಬ ಸೂಚನೆ ನೀಡಲಾಗಿತ್ತು.

Bengaluru techie gets threats from cyber blackmailers

ಅಂಥ ವಿಡಿಯೋಗಳು ಬರುವ ವೆಬ್ ಸೈಟ್ ಗಳಿಗೆ ಬೆಂಗಳೂರಿನ ವ್ಯಕ್ತಿ ಮಾಲ್ ವೇರ್ ಹಾಕಿದ್ದಾರೆ. ಏಕೆಂದರೆ ಅಂಥ ಒಂದೇ ವೆಬ್ ಸೈಟ್ ಗೆ ಪದೇಪದೇ ಭೇಟಿ ನೀಡುತ್ತಿದ್ದರೆ, ವಿಡಿಯೋ ನೋಡುವ ಅವಧಿಯಲ್ಲೇ ಬಳಸುತ್ತಿರುವ ಡಿವೈಸ್ ನಲ್ಲಿರುವ ಎಲ್ಲ ಮಾಹಿತಿಗಳನ್ನು ಅಂದರೆ ಮೆಸೆಂಜರ್, ಫೇಸ್ ಬುಕ್ ಮತ್ತು ಇಮೇಲ್ ಗಳನ್ನು ಬಸಿದುಕೊಂಡಿರುತ್ತದೆ.

ಮಂತ್ರಿಯ ಲೈಂಗಿಕ ಸಿಡಿ ನನ್ನ ಬಳಿಯಿದೆ : ವಿನೋದ್ ವರ್ಮಾ ಮಂತ್ರಿಯ ಲೈಂಗಿಕ ಸಿಡಿ ನನ್ನ ಬಳಿಯಿದೆ : ವಿನೋದ್ ವರ್ಮಾ

ಅಂಥ ಇಮೇಲ್ ಗಳನ್ನು ಬ್ಲ್ಯಾಕ್ ಮೇಲ್ ಸ್ಕ್ಯಾಮ್ ಎನ್ನಲಾಗುತ್ತದೆ. ಇತ್ತೀಚೆಗೆ ಇಂಥ ದೂರುಗಳು ಜಗತ್ತಿನಾದ್ಯಂತ ನಾನಾ ಕಾನೂನು ಸಂಸ್ಥೆಗಳಿಂದ ಕೇಳಿಬರುತ್ತಿವೆ. ಅಂತಹ ಪ್ರಕರಣಗಳ ಪೈಕಿ ಭಾರತದಲ್ಲಿ ಮೊದಲು ಕಂಡುಬಂದಿರುವುದು ಬೆಂಗಳೂರಿನಲ್ಲಿ.

ಆದರೆ, ಈ ಬಗ್ಗೆ ಬೆಂಗಳೂರಿನ ವ್ಯಕ್ತಿ ತನ್ನ ಸಂಬಂಧಿಕರು, ಸ್ನೇಹಿತರು ಮತ್ತು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಲ್ಯಾಪ್ ಟಾಪ್ ನಲ್ಲಿ ನಾನು ಅಂಥ ವಿಡಿಯೋಗಳನ್ನು ನೋಡುವುದಿಲ್ಲ ಅಂತ ಕೂಡ ಹೇಳಿದ್ದಾರೆ. ಆದರೆ ಅವರ ನಿಜವಾದ ಚಿಂತೆ ಏನೆಂದರೆ, ತನ್ನ ಹಳೆ ಪಾಸ್ ವರ್ಡ್ ಬ್ಲ್ಯಾಕ್ ಮೇಲರ್ ಗೆ ತಿಳಿದಿದ್ದಾದರೂ ಹೇಗೆ ಎಂಬ ಬಗ್ಗೆ.

English summary
A Bengaluru techie got an email threatening to expose his porn viewing habits to his entire contact list. Except, Victim says, he’s never watched porn on his laptop.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X