ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಮಿಳು ಸಿನಿಮಾ ನೋಡಿ ರಾಬರಿ ಮಾಡಿದವರು ಸಿಕ್ಕಿಬಿದ್ರು

|
Google Oneindia Kannada News

ಬೆಂಗಳೂರು, ಅಕ್ಟೋಬರ್. 27: ಜೂಜು, ಕ್ರಿಕೆಟ್ ಬೆಟ್ಟಿಂಗ್, ಸಿಗರೇಟು, ಮದ್ಯ ಮತ್ತು ಇತರೇ ಚಟಗಳಿಗೆ ದಾಸರಾಗಿದ್ದವರಿಗೆ ಎಷ್ಟು ಹಣವಿದ್ದರೂ ಸಾಕಾಗುತ್ತಿರಲಿಲ್ಲ. ಸುಲಭವಾಗಿ ಹಣ ಮಾಡಲು ಹುಡುಕಿದ್ದು ಆಭರಣದ ಅಂಗಡಿ ಲೂಟಿ ಮಾರ್ಗ, ಅದಕ್ಕೆ ಪ್ರೇರಣೆ ತೆಗೆದುಕೊಂಡಿದ್ದು ತಮಿಳು ಪತ್ರಿಕೆಯ ವರದಿ ಮತ್ತು ಸಿನಿಮಾವೊಂದರಿಂದ.

ದರೋಡೆ ಮಾಡಲು, ಕಳ್ಳತನ ಮಾಡಲು ಕಳ್ಳರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿರುತ್ತಾರೆ. ಪುಸ್ತಕಗಳಿಂದ, ಪತ್ತೇದಾರಿ ಕಾದಂಬರಿಗಳಿಂದ, ಸಿನಿಮಾಗಳಿಂದ, ಪತ್ರಿಕಾ ವರದಿಗಳಿಂದಲೂ ಕಳ್ಳತನ ಮಾಡಲು ಯೋಜನೆ ರೂಪಿಸುತ್ತಾರೆ ಎಂದರೆ ನೀವು ನಂಬಲೇಬೇಕು.

Bengaluru: Manappuram Finance heist inspired by Tamil film

ಇದೇ ರೀತಿ ಮರಿಯಪ್ಪನಪಾಳ್ಯ ಹತ್ತಿರದ ಉಳ್ಳಾಲ ರಸ್ತೆಯಲ್ಲಿರುವ ಮಣಪ್ಪುರಂ ಆಭರಣದ ಅಂಗಡಿಯಲ್ಲಿ ಕಳ್ಳತನ ಮಾಡಿದ್ದವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕೃತ್ಯಕ್ಕೆ ತಮಿಳು ಪತ್ರಿಕೆಯ ವರದಿ ಮತ್ತು ತಮಿಳು ಸಿನಿಮಾ ಪ್ರೇರಣೆಯಾಯಿತು ಎಂದು ಹೇಳಿಕೆ ನೀಡಿದ್ದಾರೆ.[ಬೆಂಗಳೂರು: ಉದ್ಯಮಿಗೆ ಕಾರ್ ಬಾನೆಟ್ ತೋರಿಸಿ 15 ಲಕ್ಷ ದೋಚಿದ!]

ದರೋಡೆಕೋರರಾದ ಚೂಡಸಂದ್ರ ಕ್ರಾಸ್‌ನ ಕೊಳಚೆ ನಿರ್ಮೂಲನ ಮಂಡಳಿ ಕೊಳಗೇರಿಯ ನಿವಾಸಿಯಾದ ಎ.ಧನಶೇಖರ್‌, ಸುರೇಶ ಅಲಿಯಾಸ್‌ ಭಕ್ಷಿ ಗಾರ್ಡನ್‌, ಮೋಹನ್‌, ಎಸ್‌.ಸುರೇಶ್‌ ಅಲಿಯಾಸ್‌ ವಿಎಸ್‌ಟಿ ಸುರೇಶ್‌, ಎಂ.ರಾಮಕುಮಾರ್‌ ಅಲಿಯಾಸ್‌ ಸ್ಲಂ ಹಾಗೂ ವಿನೋದ್‌ ಕುಮಾರ್‌ ಎಂಬುವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಉಳಿದ ಇಬ್ಬರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆಸಲಾಗಿದ್ದು, ಬಂಧಿತರಿಂದ 4 ಕೋಟಿ ರೂ. ಮೌಲ್ಯದ ಸುಮಾರು 13 ಕೆ.ಜಿ.ಚಿನ್ನಾಭರಣ, 1.5 ಲಕ್ಷ ರೂ ನಗದು,ಮೊಬೈಲ್‌ ಹಾಗೂ ಬೈಕ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ವಿಪರೀತ ಸಾಲ ಮಾಡಿಕೊಂಡಿದ್ದವರಿಗೆ ತಮಿಳು ಪತ್ರಿಕೆಯಲ್ಲಿ ಪ್ರಕಟವಾದ ದಿಂಡಿಗಲ್‌ ನಗರದ ಮಣಪ್ಪುರಂ ಗೋಲ್ಡ್‌ ಲೋನ್‌ ಕಳ್ಳತನದ ವರದಿ ಕಣ್ಣಿಗೆ ಬಿದ್ದಿದೆ. ದರೋಡೆ ಆಧಾರಿತ ಕತೆ ಹೊಂದಿರುವ ' ಸಿಗರಂ ತೋಡು' ಸಿನಿಮಾವನ್ನು ನಾಲ್ಕಾರು ಸಾರಿ ನೋಡಿದ್ದರು. ನಂತರ ಮರಿಯಪ್ಪನಪಾಳ್ಯ ಹತ್ತಿರದ ಉಳ್ಳಾಲ ರಸ್ತೆಯಲ್ಲಿರುವ ಮಣಪ್ಪುರಂ ಕಚೇರಿಯನ್ನು ದರೋಡೆ ಮಾಡಲು ಸ್ಕೆಚ್ ಹಾಕಿಕೊಂಡರು.[ಗಾಡಿ ಪಂಚರ್ ಎಂದು ಕೆಳಕ್ಕೆ ಬಗ್ಗಿದರೆ 15 ಲಕ್ಷ ರು. ಮಂಗಮಾಯ!]

Bengaluru: Manappuram Finance heist inspired by Tamil film

ದರೋಡೆ ಮಾಡಿದ್ದು ಹೇಗೆ?: ದರೋಡೆ ನಡೆಸಲು ನಿರ್ಧರಿಸಿದ ನಂತರ ಸುರೇಶ್‌ ಹಾಗೂ ಧನಶೇಖರ್‌ ಮಣಪ್ಪುರಂ ಕಚೇರಿಗೆ ಗ್ರಾಹಕರ ಸೋಗಿನಲ್ಲಿ ತೆರಳಿ ಅಲ್ಲಿನ ಚಲನವಲನದ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದ್ದರು. ನಂತರ ಪೂರ್ವನಿಯೋಜಿತ ಸಂಚು ಕಾರ್ಯಗತಗೊಳಿಸಲು ಅ.16ರಂದು ಆರೋಪಿಗಳು ಮುಂದಾದರು ಎಂದು ಪೊಲೀಸ್ ಆಯುಕ್ತ ಎನ್‌.ಎಸ್‌.ಮೇಘರಿಕ್‌ ವಿವರಿಸಿದ್ದಾರೆ.

ನ್ಯಾಷನಲ್‌ ಮಾರ್ಕೆಟ್‌ಗೆ ತೆರಳಿ ಧನಶೇಖರ್‌ ಹಾಗೂ ಸುರೇಶ್‌, ರೈಡರ್‌ ಮಂಕಿ ಕ್ಯಾಪ್ ಮತ್ತು ಮಾರಕಾಸ್ತ್ರ ಖರೀದಿ ಮಾಡಿದ್ದಾರೆ. ಆರ್‌ಪಿಸಿ ಲೇಔಟ್‌ ಹತ್ತಿರದ ಮೆಡಿಕಲ್‌ ಸ್ಟೋರ್‌ನಲ್ಲಿ ಸರ್ಜಿಕಲ್‌ ಗ್ಲೌಸ್‌ ಗಳನ್ನು ಕೊಂಡಿದ್ದರು. ಅಲ್ಲಿಂದ ಬಾರ್‌ಗೆ ತೆರಳಿ ಮದ್ಯಪಾನ ಮಾಡಿ, ಮುಸುಕುಧಾರಿಗಳಾಗಿ 3 ಬೈಕ್‌ಗಳಲ್ಲಿ ಮಣಪ್ಪುರಂ ಗೋಲ್ಡ್‌ ಲೋನ್‌ ಸಂಸ್ಥೆ ಕಚೇರಿ ಬಳಿ ತೆರಳಿದ್ದರು. ಮೂವರು ಬೈಕ್‌ಗಳಲ್ಲಿ ಕುಳಿತು ಹೊರಗಿನ ಚಲನ ವಲನದ ಮೇಲೆ ನಿಗಾವಹಿಸಿದ್ದರು. ಇನ್ನುಳಿದ ಪರಮಶಿವಂ, ಸುರೇಶ್‌, ಮೋಹನ ಹಾಗೂ ಧನಶೇಖರ್‌, ಮಣಪ್ಪುರಂ ಕಚೇರಿಗೆ ನುಗ್ಗಿ ಸಿಬ್ಬಂದಿಯನ್ನು ಕಟ್ಟಿಹಾಕಿದರು. ದರೋಡೆ ಮಾಡಿಕೊಂಡು ಬಂದವರು ಹೊರಗೆ ಬಂದು ಬೈಕ್ ಏರಿ ಪರಾರಿಯಾಗಿದ್ದರು.

ಪೊಲೀಸರ ಕೈಗೆ ಸಿಕ್ಕಿದ್ದು ಹೇಗೆ?
ಕೃತ್ಯ ನಡೆದ ವೇಳೆ ಸಿಬ್ಬಂದಿ ಜತೆ ಆರೋಪಿಗಳು ತಮಿಳು ಮಿಶ್ರಿತ ಕನ್ನಡದಲ್ಲಿ ಸಂಭಾಷಿಸಿದ್ದರು. ಈ ಸಂಗತಿ ತಿಳಿದ ಪೊಲೀಸರು, ಸ್ಥಳೀಯರೇ ಈ ಕೃತ್ಯಎಸಗಿರುವ ಬಗ್ಗೆ ಅನುಮಾನಗೊಂಡು ತನಿಖೆ ಮುಂದುವರೆಸಿದರು. ಅಲ್ಲದೆ, ಮೊಬೈಲ್‌ ಕರೆಗಳ ಕುರಿತು ಮಾಹಿತಿ ಸಹ ಸಂಗ್ರಹಿಸಿದರು. ಆಗ ಸುರೇಶ್‌ನ ಮೊಬೈಲ್‌ ಸಂಖ್ಯೆ ಮರಿಯಪ್ಪನ ಪಾಳ್ಯದ ವ್ಯಾಪ್ತಿಯಲ್ಲಿ ಸಂಪರ್ಕದಲ್ಲಿದ್ದದ್ದು ಗೊತ್ತಾಗಿದೆ. ಅಲ್ಲದೇ ಕೊಳಚೆ ಪ್ರದೇಶದ ಯುವಕರ ಬೇಕಾಬಿಟ್ಟಿ ಹಣ ವ್ಯವಯಿಸುತ್ತಿರುವ ಸಂಗತಿಯೂ ತಿಳಿದು ಬಂದಿದೆ. ಇದೆಲ್ಲವನ್ನು ಆಧರಿಸಿ ಯುವಕರನ್ನು ವಶಕ್ಕೆ ಪಡೆದ ಪೊಲೀಸರಿಗೆ ಒಂದೊಂದೆ ಸಂಗತಿ ಗೊತ್ತಾಗಿದೆ.

English summary
Bengaluru: Seven men barged into the office of Manappuram Finance Ltd in Jnana Ganga Nagar in western Bengaluru, threatened the staff with lethal weapons and fled with 15.8 kg of gold jewellery and Rs two lakh in cash, the police said. Six of whom have been arrested, had targeted the gold loan company after watching a Tamil movie and reading a news report about a similar heist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X