ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ 'ಪ್ರಕೃತಿ ಚಿಕಿತ್ಸೆ': ಐಷಾರಾಮಿ ವಿಲ್ಲಾಗಳ ಮಾಲೀಕರು ಟ್ರ್ಯಾಕ್ಟರ್‌ನಲ್ಲಿ ಪ್ರಯಾಣ

|
Google Oneindia Kannada News

ಬೆಂಗಳೂರು ಸೆಪ್ಟೆಂಬರ್ 7: ಬೆಂಗಳೂರಿನಲ್ಲಿ ಮಳೆ ಪ್ರವಾಹದಿಂದಾಗಿ ಐಷಾರಾಮಿ ವಿಲ್ಲಾಗಳ ನಿವಾಸಿಗಳು ದೋಣಿ ಮತ್ತು ಟ್ರ್ಯಾಕ್ಟರ್‌ಗಳ ಮೂಲಕ ಕಚೇರಿಗಳಿಗೆ ತೆರಳುವ ದೃಶ್ಯಗಳು ಕಂಡು ಬಂದಿವೆ.

ಸಮಯ ಕೆಟ್ಟರೆ ಶ್ರೀಮಂತರೂ ಸಾಮಾನ್ಯರಾಗಿಬಿಡಬಹುದು ಎಂಬುದಕ್ಕೆ ಬೆಂಗಳೂರು ಪ್ರವಾಹವೇ ಸಾಕ್ಷಿ. ಕಳೆದ ಕೆಲ ದಿನಗಳಿಂದ ಸಂಜೆ ವೇಳೆ ಧಾರಾಕಾರ ಮಳೆಗೆ ಬೆಂಗಳೂರು ಪ್ರವಾಹಕ್ಕೆ ಸಿಲುಕಿದೆ. ಎಲ್ಲಿ ನೋಡಿದರಲ್ಲಿ ಮಳೆ ನೀರು ಆವರಿಸಿಬಿಟ್ಟಿದೆ. ಪ್ರತಿಷ್ಠಿತ ಕಾಲೋನಿಗಳು, ಪ್ರದೇಶಗಳು, ಕಚೇರಿಗಳಿರುವ ಸ್ಥಳ ರಸ್ತೆಗಳು ಸಂಪೂರ್ಣ ಜಲಾವೃತವಾಗಿ ಹೋಗಿದೆ. ಜಾಲಾವೃತಗೊಂಡ ರಸ್ತೆಗಳಲ್ಲಿ ಸಂಚರಿಸಲಾಗದೆ ಪರದಾಡುವಂತಾಗಿದೆ. ಇಷ್ಟು ಮಾತ್ರವಲ್ಲದೆ ಪ್ರತಿಷ್ಠಿತ ಬಿಲ್ಡಿಂಗ್‌ಗಳ ನೆಲಮಳಿಗೆಗಳಿಗೂ ನೀರು ನುಗ್ಗಿ ಮನೆಯಿಂದ ಹೊರಬಾರದಂತ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲ ದುಬಾರಿ ಕಾರುಗಳು ನೀರಿನಲ್ಲಿ ಮುಳುಗಿ ಹೋಗಿವೆ. ನಿಂತನಿಂತಲೇ ವಾಹನಗಳಿಗೆ ಕೆಸರು ಮೆತ್ತಿಕೊಂಡಿದೆ.

ಈ ನಡುವೆ ಐಷಾರಾಮಿ ವಿಲ್ಲಾಗಳ ನಿವಾಸಿಗಳು ತಮ್ಮ ಕೆಲಸದ ಸ್ಥಳಗಳಿಗೆ ತೆರಳಲು ಟ್ರ್ಯಾಕ್ಟರ್‌ ಹಾಗೂ ದೋಣಿಗಳನ್ನು ಅವಲಂಬಿಸಿರುವುದು ಕಂಡುಬಂದಿದೆ. ಹಲವೆಡೆ ವಾಹನ ಸಂಚಾರಕ್ಕೆ ಸಾಧ್ಯವಾಗದೇ ಪ್ರತಿಷ್ಠಿತ ಜನ ದೋಣಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ತೆರಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬರುತ್ತಿವೆ.

Bengaluru floods: Residents of luxury villas moved in boats and tractors

ತಲಾ 13 ಕೋಟಿ ರೂ.ವರೆಗೆ ವೆಚ್ಚ ಮಾಡಿ ಕಟ್ಟಿರುವ ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳು ಮತ್ತು ವಿಲ್ಲಾಗಳಲ್ಲಿ ವಾಸಿಸುವ ನಿವಾಸಿಗಳು ಪ್ರವಾಹಕ್ಕೆ ಬಿಬಿಎಂಪಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಆದರೆ ಇದೇ ಅಪಾರ್ಟ್ಮೆಂಟ್ ಮತ್ತು ವಿಲ್ಲಾ ಸಂಕೀರ್ಣಗಳು ಜಲಮೂಲಗಳ ಮೋರಿಗಳನ್ನು ಅತಿಕ್ರಮಿಸಿರುವುದರಿಂದ ನೆಲಸಮ ಮಾಡಲು ಪಟ್ಟಿಮಾಡಲಾಗಿದೆ.

ಐಷಾರಾಮಿ ವಿಲ್ಲಾ ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ಮಳೆ ನೀರು

ಮುನ್ನೆಚ್ಚರಿಕೆಯಾಗಿ ಬಿಬಿಎಂಪಿ ದಿವ್ಯಶ್ರೀ ಮತ್ತು ಎಪ್ಸಿಲಾನ್ ಅಪಾರ್ಟ್‌ಮೆಂಟ್‌ಗಳಲ್ಲಿ ಮಣ್ಣು ತೆಗೆಯುವ ಯಂತ್ರಗಳನ್ನು ನಿಯೋಜಿಸಿ ಚರಂಡಿಗೆ ಅಡ್ಡಲಾಗಿರುವ ಸ್ಲ್ಯಾಬ್‌ಗಳನ್ನು ಒಡೆದು ಹಾಕಿದೆ. "ದಿವ್ಯಶ್ರೀ ಅಪಾರ್ಟ್‌ಮೆಂಟ್‌ನಲ್ಲಿ ಸುಮಾರು 500 ಅಡಿ ಅತಿಕ್ರಮಣ ನೀರನ್ನು ತೆಗೆಯಲಾಗಿದ್ದು, ಯಮಲೂರಿನ ಎಪ್ಸಿಲಾನ್ ವಸತಿ ವಿಲ್ಲಾಗಳಲ್ಲಿ 20 ಅಡಿ ಅತಿಕ್ರಮಣವನ್ನು ತೆಗೆಯಲಾಗಿದೆ. ಈಗ ಪರಿಸ್ಥಿತಿ ಸುಧಾರಿಸಿದೆ' ಎಂದು ಮಹಾದೇವಪುರ ವಲಯದ ವಿಶೇಷ ಆಯುಕ್ತ ಡಾ.ತ್ರಿಲೋಕ್ ಚಂದ್ರ ಅವರು ಹೇಳಿದರು.

Bengaluru floods: Residents of luxury villas moved in boats and tractors

ವರದಿಗಳ ಪ್ರಕಾರ, ದಿವ್ಯಶ್ರೀಯಲ್ಲಿರುವ ಒಂದು ಫ್ಲಾಟ್ 2.5 ರಿಂದ 7 ಕೋಟಿ ರೂ. ಆಗಿದೆ. "ಅದರ ಪ್ರಾರಂಭದ ಸಮಯದಲ್ಲಿ, ಆಸ್ತಿಯ ಬೆಲೆ ಸುಮಾರು 2 ಕೋಟಿ ರೂಪಾಯಿಗಳು ಇದ್ದು ಈಗ ಅದು 8 ಕೋಟಿ ರೂಪಾಯಿಗಳಿಗೆ ಏರಿದೆ. ಇಷ್ಟು ಹಣ ಕೊಟ್ಟರೂ ನೀರು ತುಂಬಿಕೊಂಡಿದೆ' ಎನ್ನುತ್ತಾರೆ ಇಲ್ಲಿನ ನಿವಾಸಿಯೊಬ್ಬರು.

ಬೆಳಗಾವಿಯಿಂದ SDRF ತಂಡ

ಅಂತೆಯೇ, 300 ಕ್ಕೂ ಹೆಚ್ಚು ವಿಲ್ಲಾಗಳನ್ನು ಒಳಗೊಂಡಿರುವ ಆದರ್ಶ್ ಪಾಮ್ ರಿಟ್ರೀಟ್ ಕೂಡ ಭಾರಿ ಮಳೆ, ಕೆರೆಗಳ ಒಡೆದು ಮತ್ತು ಚರಂಡಿಗಳು ತುಂಬಿ ಹರಿಯುವ ಕಾರಣದಿಂದ ಜಲಾವೃತಗೊಂಡಿದೆ. ರಾಮಗೊಂಡನಹಳ್ಳಿಯ TZ ಅಪಾರ್ಟ್‌ಮೆಂಟ್‌ನಲ್ಲಿ, BBMP ದೋಣಿಗಳನ್ನು ನಿಯೋಜಿಸಬೇಕಾಗಿತ್ತು. BBMP ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆ ಅಧಿಕಾರಿಗಳೊಂದಿಗೆ ಸಹಾಯಕ್ಕಾಗಿ ಬೆಳಗಾವಿಯಿಂದ SDRF ತಂಡವನ್ನು ಕರೆಸಲಾಗಿದೆ.

ಶೋಭಾ ಪಲ್ಲಾಡಿಯಂ ಮತ್ತು ಇತರ ಪ್ರದೇಶಗಳಿಂದ ನಿವಾಸಿಗಳನ್ನು ದೋಣಿಯಿಂದ ಕರೆದೊಯ್ಯಲು ಯಮಲೂರು-ಬೋರ್‌ವೆಲ್ ರಸ್ತೆಯಲ್ಲಿ ತಂಡಗಳನ್ನು ನಿಯೋಜಿಸಲಾಗಿದೆ. ಈ ಅಪಾರ್ಟ್‌ಮೆಂಟ್ ಪಕ್ಕದ ಚರಂಡಿ ಬಹುತೇಕ ತುಂಬಿದ್ದು, ಮುಖ್ಯರಸ್ತೆ 3 ಅಡಿ ಆಳದ ನೀರಿನಲ್ಲಿದೆ.

ಮಾರತ್ತಹಳ್ಳಿಯ ದೀಪಾ ನರ್ಸಿಂಗ್ ಹೋಮ್ ಬಳಿಯ ನಿವಾಸಿಗಳು ಮನೆಯಿಂದ ಹೊರಬರಲು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ. ಆ ಪ್ರದೇಶದಲ್ಲಿ ವಿದ್ಯುತ್ ಇಲ್ಲ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ದುಬಾರಿ ಕಾರುಗಳು ಜಲಾವೃತ

ಬೆಂಗಳೂರಿನಲ್ಲಿ ಉಂಟಾದ ಪ್ರವಾಹ ಐಷಾರಾಮಿ ಕಾರುಗಳನ್ನು ಮುಳುಗಿಸಿದೆ. ಬೆಂಟ್ಲಿಯಿಂದ ಲೆಕ್ಸಸ್, ಆಡಿ ಕ್ಯೂ5, ಮರ್ಸಿಡಿಸ್ ಬೆಂಜ್ ಮತ್ತು ಇತರ ಕಾರುಗಳು ಮುಳುಗಿವೆ. ಅನಾಕಾಡೆಮಿಯ ಸಿಇಒ ಗೌರವ್ ಮುಂಜಾಲ್, ಅವರ ಕುಟುಂಬ ಮತ್ತು ಅವರ ಸಾಕುಪ್ರಾಣಿಗಳನ್ನು ಮಂಗಳವಾರ ಟ್ರ್ಯಾಕ್ಟರ್‌ನಲ್ಲಿ ಸ್ಥಳಾಂತರಿಸಲಾಯಿತು.

English summary
Residents of luxury villas have been seen moving to offices in boats and tractors due to floods in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X