ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶನಿವಾರ ಅರ್ಥ್ ಅವರ್ ಅಭಿಯಾನದಲ್ಲಿ ಪಾಲ್ಗೊಳ್ಳಿ

|
Google Oneindia Kannada News

ಬೆಂಗಳೂರು, ಮಾ. 29 : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜಾಗತಿಕ ತಾಪಮಾನವನ್ನು ತಗ್ಗಿಸುವ ಸಂದೇಶ ಸಾರುವ 'ಅರ್ಥ್ ಅವರ್ ಮರಳಿ ಬಂದಿದೆ. ಶನಿವಾರ ರಾತ್ರಿ ವಿವಿಧ ದೇಶಗಳು ಒಂದು ಗಂಟೆಗಳ ಕಾಲ ವಿದ್ಯುತ್ ದೀಪಗಳನ್ನು ಆರಿಸುವ ಮೂಲಕ ಅರ್ಥ್ ಅವರ್ ಆಚರಿಸಲಿವೆ.

ಭಾರತದಲ್ಲೂ ಆರ್ಥ್ ಅವರ್ ಆಚರಿಸಲಾಗುತ್ತಿದೆ. ಭಾರತೀಯ ಕಾಲಮಾನದ ಪ್ರಕಾಶ ಇಂದು ರಾತ್ರಿ 8.30ರಿಂದ 9.30ರವರೆಗೆ ಈ ಅಭಿಯಾನ ನಡೆಯಲಿದೆ. ಬೆಂಗಳೂರು ಸೇರಿದಂತೆ ಜಗತ್ತಿನ 7 ಸಾವಿರಕ್ಕೂ ಹೆಚ್ಚು ನಗರಗಳು ಈ ಅರ್ಥ್ ಅವರ್ ಅಭಿಯಾನದಲ್ಲಿ ಪಾಲ್ಗೊಳ್ಳಲಿವೆ.

Earth Hour

ಪರಿಸರ ಸಂರಕ್ಷಣೆಗಾಗಿ ಜನರು ಇಂದು ಒಂದು ಗಂಟೆಗಳ ಕಾಲ ವಿದ್ಯುತ್ ದೀಪಗಳನ್ನು ಆರಿಸುವ ಮೂಲಕ ಅರ್ಥ್ ಅವರ್ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಬೆಂಗಳೂರಿನ ಜನರಿಗೆ ಮನವಿ ಮಾಡಿದೆ. ರಾತ್ರಿ 8.30ರಿಂದ 9.30ರವರೆಗೆ ವಿದ್ಯುತ್ ದೀಪಗಳನ್ನು ಆರಿಸಿ ಎಂದು ಪ್ರಕಟಣೆಯಲ್ಲಿ ಕೋರಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಜಗತ್ತಿನ ಅನೇಕ ರಾಷ್ಟ್ರಗಳು ಎಂದಿನಂತೆ ಅರ್ಥ್ ಅವರ್ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದು, ನ್ಯೂಯಾರ್ಕ್‌ ನ ಎಂಪೈರ್ ಸ್ಟೇಟ್ ಬಿಲ್ಡಿಂಗ್, ಬರ್ಲಿನ್‌ನ ಬ್ರಂಡೆನ್‌ ಬರ್ಗ್ ಗೇಟ್, ಪ್ಯಾರಿಸ್‌ ನ ಐಫೆಲ್ ಟವರ್, ಮಾಸ್ಕೊದ ರೆಡ್ ಸ್ಕ್ವೆಯರ್, ಬ್ರಿಟನ್‌ ನ ಬಕ್ಕಿಂಗ್‌ಹ್ಯಾಮ್ ಪ್ಯಾಲೇಸ್, ಹೀಗೆ ಅನೇಕ ತಾಣಗಳಲ್ಲಿ ಅರ್ಥ್ ಅವರ್ ಜಾರಿಯಾಗಲಿದೆ.

ಅರ್ಥ್ ಅವರ್ ಅಭಿಯಾನವನ್ನು ಆರಂಭಿಸಿದ್ದು, ಆಸ್ಟ್ರೇಲಿಯಾದ 'ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್' (ಡಬ್ಲ್ಯೂಡಬ್ಲ್ಯೂಎಫ್) ಎಂಬ ಸ್ವಯಂ ಸೇವಾ ಸಂಸ್ಥೆ. 2007ರಲ್ಲಿ ಸಿಡ್ನಿಯಲ್ಲಿ ಆರಂಭವಾದ ಅಭಿಯಾನಕ್ಕೆ ಸದ್ಯ ಅಂತಾರಾಷ್ಟ್ರೀಯ ಮನ್ನಣೆ ದೊರಕಿದೆ. ಈ ವರ್ಷದ ಅಭಿಯಾನದಲ್ಲಿ ಸುಮಾರು 200 ಕೋಟಿ ಜನರನ್ನು ಸೇರಿಸಿಕೊಳ್ಳುವ ಗುರಿ ಹೊಂದಲಾಗಿದೆ.

2013ರಲ್ಲಿ ನಡೆದ ಅರ್ಥ್ ಅವರ್ ಅಭಿಯಾನದಲ್ಲಿ 154 ದೇಶಗಳ 7 ಸಾವಿರ ಪಟ್ಟಣಗಳು ಪಾಲ್ಗೊಂಡಿದ್ದವು. ನೀವು ಸಹ ಇಂದು ರಾತ್ರಿ 8.30ರಿಂದ 9.30ರ ವರೆಗೆ ವಿದ್ಯುತ್ ದೀಪಗಳನ್ನು ಆರಿಸುವ ಮೂಲಕ ಅರ್ಥ್ ಅವರ್ ಅಭಿಯಾನಲ್ಲಿ ಪಾಲ್ಗೊಳ್ಳಿ.

English summary
On March 29, Saturday between 8.30 pm and 9.30 pm, the world will celebrate Earth Hour. And this year's message is to make the switch to renewable energy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X