• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿಗೆ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಆಗಮನ

|
Google Oneindia Kannada News

ಬೆಂಗಳೂರು, ಆಗಸ್ಟ್ 25: ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಬೆಂಗಳೂರಿಗೆ ಆಗಮಿಸಿದ್ದಾರೆ.

   ಕೊನೆಗೂ Africa , Polioದಿಂದ ಮುಕ್ತ | Oneindia Kannada

   ಖಾಸಗಿ ಕಾರ್ಯಕ್ರಮದ ನಿಮಿತ್ತ ಕುಟುಂಬ ಸಮೇತರಾಗಿ ಬೆಂಗಳೂರಿಗೆ ಬಂದಿದ್ದಾರೆ.ಬಾಗಲೂರು ಸಮೀಪದ ತಮ್ಮ ನಿವಾಸದಲ್ಲಿ ಅವರು ವಾಸ್ತವ್ಯ ಹೂಡಿದ್ದಾರೆ.

   ರಾಜ್ಯ ಸರ್ಕಾರದ ಪರವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಅವರು ಏರ್‌ಪೋರ್ಟ್‌ಗೆ ತೆರಳಿ ಅವರನ್ನು ಬರಮಾಡಿಕೊಂಡಿದ್ದಾರೆ.ಸಿಎಂ ಯಡಿಯೂರಪ್ಪ ಸೂಚನೆ ಮೇರೆಗೆ ಸ್ವಾಗತ ಕೋರಿದ್ದಾರೆ, ಬುಧವಾರ ಕೆಂಪೇಗೌಡ ಏರ್‌ಪೋರ್ಟ್‌ನಿಂದ ಪ್ಯಾರಿಸ್ ಮತ್ತು ಇಂಗ್ಲೆಂಡ್‌ಗೆ ತೆರಳಲಿದ್ದಾರೆ.

   ಆಗಸ್ಟ್ 27 ರಂದು ಮತ್ತೆ ಬೆಂಗಳೂರಿನಿಂದ ಹೈದರಾಬಾದ್‌ಗೆ ಜಗನ್‌ಮೋಹನ್ ರೆಡ್ಡಿ ವಾಪಸಾಗಲಿದ್ದಾರೆ.ತಿರುಮಲದಲ್ಲಿ ಕರ್ನಾಟಕ ಭವನಕ್ಕೆ ಶಂಕುಸ್ಥಾಪನೆ ವಿಚಾರವನ್ನು ಪ್ರಸ್ತಾಪಿಸಿ ಎಸ್‌ಆರ್ ವಿಶ್ವನಾಥ್ ಮನವಿ ಸಲ್ಲಿಸಿದ್ದಾರೆ.

   ಮುಂದಿನ ತಿಂಗಳು ಸಾಧ್ಯವಾದರೆ ಶಂಕುಸ್ಥಾಪನೆ ನೆರವೇರಿಸೋಣ, ದಿನಾಂಕ‌ ನಿಗದಿಪಡಿಸಿ ಹೇಳುವುದಾಗಿ ಜಗನ್ ಮೋಹನ್ ರೆಡ್ಡಿ ಭರವಸೆ ನೀಡಿದ್ದಾರೆ.

   English summary
   Andhra Pradesh Chief Minister YS Jagan Mohan Reddy Arrived Bengaluru, He would see off his daughter YS Harsha reddy who is leaving for Paris on August 26.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X