ಶನಿವಾರ ಮತ್ತು ಭಾನುವಾರದ 47 ಉಪನಗರ ರೈಲುಗಳು ರದ್ದು!

ಬೆಂಗಳೂರು, ಸೆಪ್ಟೆಂಬರ್‌ 03: ಶನಿವಾರ ಮತ್ತು ಭಾನುವಾರದಂದು ಬರೋಬ್ಬರಿ 47 ಪ್ರಯಾಣಿಕ ರೈಲುಗಳನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ. ಹೀಗಾಗಿ ಸಾವಿರಾರು ಜನರ ಪ್ರಯಾಣ ಯೋಜನೆಗಳು ರದ್ದಾದ್ದರಿಂದ ವ್ಯಾಪಕ ಟೀಕೆಗೂ ಗುರಿಯಾಗಿದೆ.

ಬಹುತೇಕ ರೈಲುಗಳು ಬೆಂಗಳೂರು ಮತ್ತು ಅದರ ಉಪನಗರ ಪ್ರದೇಶಗಳ ನಡುವೆ ಚಲಿಸುವ ರೈಲುಗಳಾಗಿವೆ. ಧರ್ಮಾವರಂ, ಜಲಾರ್‌ಪೇಟ್ಟೈ, ಮಾರಿಕುಪ್ಪಂ, ತುಮಕೂರು, ರಾಮನಗರ, ಕುಪ್ಪಂ, ಬಂಗಾರಪೇಟೆ ಹಾಗೂ ವೈಟ್‌ಫೀಲ್ಡ್‌ನಂತಹ ನಗರದ ಹೊರವಲಯಕ್ಕೆ ಈ ರೈಲುಗಳು ಸಂಚರಿಸುತ್ತಿದ್ದವು. ಉಳಿದಂತೆ ಪ್ರಯಾಣಿಕರ ಜನಪ್ರಿಯ ರೈಲುಗಳಾದ ತುಮಕೂರು-ಶಿವಮೊಗ್ಗ ಎಕ್ಸ್‌ಪ್ರೆಸ್ ಮತ್ತು ಹುಬ್ಬಳ್ಳಿ-ಅರಸಿಕೆರೆ, ಚಾಮರಾಜನಗರ-ಮೈಸೂರು, ಹೊಸಪೇಟೆ-ಹುಬ್ಬಳ್ಳಿ, ಹುಬ್ಬಳ್ಳಿ-ಸೋಲಾಪುರ ಮತ್ತು ಇತರ ಮಾರ್ಗಗಳ ರೈಲುಗಳನ್ನು ಸಹ ರದ್ದುಗೊಳಿಸಲಾಗಿದೆ.

ಶುಕ್ರವಾರ ತಡರಾತ್ರಿಯ ಈ ಪ್ರಕಟಣೆ ಹೊರಡಿಲಾಗಿದೆ. ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಟ್ವಿಟ್ಟರ್‌ನಲ್ಲಿ ಮಾಡಿದ ಪ್ರಕಟಣೆಗೆ ಪ್ರತಿಕ್ರಿಯಿಸಿದ ಆದಿತ್ಯ ಜೋಶಿ ಎಂಬುವವರು, ವಾರದ ರಜೆಯ ನಂತರ ಬೆಂಗಳೂರಿಗೆ ಮರಳುವ ಬಹಳಷ್ಟು ಜನರಿಗೆ ಈ ಕ್ರಮವು ಅನಾನುಕೂಲತೆಯನ್ನುಂಟು ಮಾಡುತ್ತದೆ ಎಂದು ಹೇಳಿದರು.

47 suburban trains on Saturday and Sunday are cancelled!, know more

ಇದು ತುಂಬಾ ಕೆಟ್ಟ ಸಮಯ! ಎಲ್ಲರೂ ಸ್ಥಳೀಯ ಸ್ಥಳಗಳಿಂದ ಬೆಂಗಳೂರಿಗೆ ಹಿಂತಿರುಗುತ್ತಿದ್ದಾರೆ ಮತ್ತು ನೀವು ಇದ್ದಕ್ಕಿದ್ದಂತೆ ಎಲ್ಲವನ್ನೂ ರದ್ದುಗೊಳಿಸುತ್ತೀರಾ? ಇದನ್ನು ನೀವು ಸೋಮವಾರದ ನಂತರ ಜಾರಿಗೊಳಿಸಿದ್ದರೆ ಸೂಕ್ತವಾಗಿರುತ್ತಿತ್ತು ಎಂದು ಅವರು ಹೇಳಿದರು.

ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ ಶ್ಯಾಮ್, ಈ ನಿರ್ಧಾರವು ಪ್ರಯಾಣಿಕರ ಮೇಲೆ ರೈಲ್ವೆಗೆ ಯಾವುದೇ ಕಾಳಜಿಯಿಲ್ಲ ಎಂಬುದನ್ನು ತೋರಿಸುತ್ತದೆ. ರೈಲ್ವೆಯಲ್ಲಿ ಪ್ರಯಾಣಿಸುವ ಜನರು ಹೆಚ್ಚಾಗಿ ಬಡವರು. ಅವರು ತಮ್ಮ ಪ್ರಯಾಣ ಯೋಜನೆಯನ್ನು ಸಾಮಾನ್ಯವಾಗಿ ವಾರಗಳ ಮುಂಚೆಯೇ ಯೋಜಿಸಿಟ್ಟಿರುತ್ತಾರೆ. ರೈಲ್ವೆಯ ಸಂಪೂರ್ಣ ನಿರ್ಲಕ್ಷ್ಯವು ಕೊನೆಯ ಕ್ಷಣದಲ್ಲಿ ರದ್ದತಿಯನ್ನು ಘೋಷಿಸಿದ ರೀತಿಯಲ್ಲಿ ಗೋಚರವಾಗುತ್ತದೆ. ಇದರ ಪರಿಣಾಮವಾಗಿ ಅವರು ಬಸ್‌ಗಳಿಗಾಗಿ ದೊಡ್ಡ ಪ್ರಮಾಣದ ಹಣವನ್ನು ಹೊಂದಿಸಬೇಕಾಗುತ್ತದೆ ಎಂದರು.

47 suburban trains on Saturday and Sunday are cancelled!, know more

ಪತ್ರಿಕಾ ಪ್ರಕಟಣೆಯು ರೈಲುಗಳ ರದ್ದತಿಗೆ ಯಾವುದೇ ಕಾರಣವನ್ನು ಒದಗಿಸದಿದ್ದರೂ, ಗೂಡ್ಸ್ ರೈಲು ವ್ಯವಸ್ಥಾಪಕರ ಹುದ್ದೆಯನ್ನು ಭರ್ತಿ ಮಾಡಲು ರೈಲ್ವೆ ಪರೀಕ್ಷೆ ನಡೆಯುತ್ತಿರುವುದರಿಂದ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಡಿಆರ್‌ಎಂ ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+