• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲಿನಲ್ಲಿ ವಾಟ್ಸಪ್ ಮೂಲಕ ಆಹಾರ ಬುಕ್ ಮಾಡುವುದು ಹೇಗೆ?

|
Google Oneindia Kannada News

ನವದೆಹಲಿ, ಆಗಸ್ಟ್ 31; ಭಾರತೀಯ ರೈಲ್ವೆ ಮೂಲಕ ದೂರ ಪ್ರಯಾಣ ಮಾಡುವ ಪ್ರಯಾಣಿಕರು ಆಹಾರದ ಬಗ್ಗೆ ಚಿಂತಿಸುತ್ತಾರೆ. ಆದರೆ ಜನಸ್ನೇಹಿ ಆಗುವತ್ತಾ ಹೆಜ್ಜೆ ಹಾಕಿರುವ ಭಾರತೀಯ ರೈಲ್ವೆ ವಾಟ್ಸಪ್ ಮೂಲಕವೂ ಮೆನು ನೋಡಿ, ಆಹಾರ ಬುಕ್ ಮಾಡುವ ವ್ಯವಸ್ಥೆ ಮಾಡಿದೆ.

ಐಆರ್‌ಸಿಟಿಸಿ ಸೋಮವಾರ ಇದಕ್ಕಾಗಿ ಝೂಪ್ (Zoop) ಅಪ್ಲಿಕೇಶನ್‌ ಜೊತೆಗಿನ ಒಪ್ಪಂದದ ಕುರಿತು ಘೋಷಣೆ ಮಾಡಿದೆ. ಈ ಆಪ್ ಮೂಲಕ ರೈಲು ಪ್ರಯಾಣಿಕರು ವಾಟ್ಸಪ್ ಮೂಲಕ ಊಟ, ಉಪಹಾರ ಆರ್ಡರ್ ಮಾಡಬಹುದಾಗಿದೆ.

ಆಹಾ!: ವಿಸ್ಟಾಡೋಮ್ ಕೋಚ್‌ನಲ್ಲಿ ಕುಳಿತು ನೋಡಿ ಪಶ್ಚಿಮ ಘಟ್ಟದ ಸೌಂದರ್ಯ ಆಹಾ!: ವಿಸ್ಟಾಡೋಮ್ ಕೋಚ್‌ನಲ್ಲಿ ಕುಳಿತು ನೋಡಿ ಪಶ್ಚಿಮ ಘಟ್ಟದ ಸೌಂದರ್ಯ

ರೈಲು ಪ್ರಯಾಣಿಕರು ಈ ಸೇವೆ ಪಡೆಯಲು ತಮ್ಮ ಟಿಕೆಟ್‌ನಲ್ಲಿರುವ ಪಿಎನ್‌ಆರ್ ಸಂಖ್ಯೆ ಬಳಕೆ ಮಾಡಬೇಕು. ರೈಲುಗಳಲ್ಲಿ ಆಹಾರ ಸರಬರಾಜು ಮಾಡಲು ಝೂಪ್ ಐಆರ್‌ಸಿಟಿಸಿ ಮತ್ತು ಜಿಯೋ ಹ್ಯಾಪ್ಟಿಕ್ ಜೊತೆ ಕೈ ಜೋಡಿಸಿದೆ.

ವಾರದಲ್ಲಿ ಆರು ದಿನ ಮೈಸೂರು ಮಾರ್ಗವಾಗಿ ಬೆಂಗಳೂರು-ಮಂಗಳೂರು ರೈಲು ಸಂಚಾರಕ್ಕೆ ರೈಲ್ವೆ ಸಚಿವಾಲಯ ಅನುಮತಿ ವಾರದಲ್ಲಿ ಆರು ದಿನ ಮೈಸೂರು ಮಾರ್ಗವಾಗಿ ಬೆಂಗಳೂರು-ಮಂಗಳೂರು ರೈಲು ಸಂಚಾರಕ್ಕೆ ರೈಲ್ವೆ ಸಚಿವಾಲಯ ಅನುಮತಿ

ವಾಟ್ಸಪ್ ಮೂಲಕ ಆಹಾರ ಬುಕ್ ಮಾಡಲು ಪ್ರಯಾಣಿಕರ ಯಾವುದೇ ಹೊಸ ಅಪ್ ಡೌಲ್ ಲೋಡ್ ಮಾಡಿಕೊಳ್ಳುವ ಅಗತ್ಯವಿಲ್ಲ. ಕೇವಲ ಚಾಟ್ ಮೂಲಕ ಮೆನು ನೋಡಿ ಬುಕ್ ಮಾಡಬಹುದಾಗಿದೆ, ಅದೂ ಸಹ ಸರಳ ವಿಧಾನದ ಮೂಲಕ. ಪ್ರಾಯೋಗಿಕವಾಗಿ ರೈಲ್ವೆ ಈ ಯೋಜನೆ ಜಾರಿಗೊಳಿಸಿದೆ.

ರೈಲ್ವೆ ಯೋಜನೆ ಪೂರ್ಣಗೊಂಡ ಬಳಿಕ ಬೆಂಗಳೂರಿನಿಂದ ಹೈದರಾಬಾದ್‌ಗೆ 3 ಗಂಟೆಯಲ್ಲಿ ತಲುಪಬಹುದು!ರೈಲ್ವೆ ಯೋಜನೆ ಪೂರ್ಣಗೊಂಡ ಬಳಿಕ ಬೆಂಗಳೂರಿನಿಂದ ಹೈದರಾಬಾದ್‌ಗೆ 3 ಗಂಟೆಯಲ್ಲಿ ತಲುಪಬಹುದು!

ಕುಳಿತಲ್ಲಿಯೇ ಪಡೆಯಿರಿ ಆಹಾರ

ಕುಳಿತಲ್ಲಿಯೇ ಪಡೆಯಿರಿ ಆಹಾರ

ದೂರ ಪ್ರಯಾಣ ಮಾಡುವ ರೈಲು ಪ್ರಯಾಣಿಕರು ಕುಳಿತಲ್ಲಿಯೇ ತಮ್ಮ ವಾಟ್ಸಪ್ ಮೂಲಕ ಮೆನು ನೋಡಿ ಆಹಾರ ಬುಕ್ ಮಾಡಬಹುದು. ಪಿಎನ್‌ಆರ್ ನಂಬರ್ ಆಧಾರದ ಮೇಲೆ ಬುಕ್ ಮಾಡಿದ ಆಹಾರ ನೀವು ಕುಳಿತ ಸೀಟಿಗೆ ಬಂದು ತಲುಪಲಿದೆ. ಯಾವುದೇ ಹೊಸ ಅಪ್ಲಿಕೇಶನ್, ಬೇರೆ ವೆಬ್ ಸೈಟ್‌ಗೆ ಹೋಗುವ ಅಗತ್ಯವಿಲ್ಲ. ಕೇವಲ ವಾಟ್ಸಪ್ ಚಾಟಿಂಗ್ ಮೂಲಕ ಆಹಾರ ಪಡೆಯಬಹುದು. ಹಣ ಪಾವತಿ ಮಾಡುವ ವ್ಯವಸ್ಥೆಯೂ ಸಹ ಸರಳವಾಗಿದೆ.

ಯಾವ ನಂಬರ್‌ಗೆ ಸಂಪರ್ಕಿಸಬೇಕು

ಯಾವ ನಂಬರ್‌ಗೆ ಸಂಪರ್ಕಿಸಬೇಕು

ರೈಲು ಪ್ರಯಾಣಿಕರು ತಮ್ಮ ಸ್ಮಾರ್ಟ್‌ಫೋನ್ ಮೂಲಕ ವಾಟ್ಸಪ್‌ನಲ್ಲಿ 91 7042062070 ನಂಬರ್‌ಗೆ ಚಾಟ್ ಮಾಡುವ ಮೂಲಕ ಆಹಾರ ಬುಕ್ ಮಾಡಬಹುದಾಗಿದೆ. ಈ ನಂಬರ್ ಝೂಪ್ ಅಪ್ಲಿಕೇಶನ್‌ಗೆ ಸೇರಿದೆ. ನಿಮ್ಮ ಆರ್ಡರ್‌ ಖಚಿತಗೊಂಡ ಬಳಿಕ ನೀವು ಕುಳಿತಿರುವ ಸೀಟಿಗೆ ಆಹಾರ ಬಂದು ತಲುಪಲಿದೆ.

ವೆಜ್ ಥಾಲಿ, ವೆಜ್/ ಚಿಕನ್ ಬಿರಿಯಾನಿ ವಿತ್ ರಾಯಿತಾ, ಸ್ಟಾಂಡರ್ಡ್/ ಜೈನ್ ಸ್ಪೆಷಲ್ ಥಾಲಿ ಸದ್ಯ ಮೆನುವಿನಲ್ಲಿ ಲಭ್ಯವಿದೆ. ಇದು ಪ್ರಾಯೋಗಿಕ ಸೇವೆ ಪ್ರಯಾಣಿಕರ ಪ್ರತಿಕ್ರಿಯೆ ಬಳಿಕ ಹೊಸ ಬಗೆಯ ಖಾದ್ಯಗಳು ಪಟ್ಟಿಗೆ ಸೇರ್ಪಡೆಗೊಳ್ಳಲಿವೆ.

ಎಲ್ಲೆಲ್ಲಿ ಲಭ್ಯವಿದೆ ಈ ಸೌಲಭ್ಯಗಳು

ಎಲ್ಲೆಲ್ಲಿ ಲಭ್ಯವಿದೆ ಈ ಸೌಲಭ್ಯಗಳು

ವಾಟ್ಸಪ್ ಮೂಲಕ ಆಹಾರ ಬುಕ್ ಮಾಡುವ ಸೇವೆ ಸದ್ಯ ವಿಜಯವಾಡ, ವಡೋದರಾ, ಮುರಾದಾಬಾದ್, ವಾರಂಗಲ್, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಕಾನ್ಪುರ, ಆಗ್ರಾ ಕಂಟೋನ್ಮೆಂಟ್, ತುಂಡ್ಲಾ ಜಂಕ್ಷನ್ ಸೇರಿದಂತೆ 100 ಎ1, ಎ ಮತ್ತು ಬಿ ದರ್ಜೆಯ ರೈಲು ನಿಲ್ದಾಣಗಳಲ್ಲಿ ಲಭ್ಯವಿದೆ.

ಈ ಸೇವೆಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದರೆ ಬೇರೆ ಬೇರೆ ನಿಲ್ದಾಣಗಳಲ್ಲಿಯೂ ಪರಿಚಯಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರ್ಡರ್ ಬಳಿಕ ಟ್ರಾಕ್ ಮಾಡಿ

ಆರ್ಡರ್ ಬಳಿಕ ಟ್ರಾಕ್ ಮಾಡಿ

ಆಹಾರ ಬುಕ್ ಮಾಡಿ, ಅದು ಖಚಿತವಾದ ಬಳಿಕ ಮೂರು ಕ್ಲಿಕ್‌ನಲ್ಲಿ ಸರಳವಾಗಿ ಹಣ ಪಾವತಿ ಮಾಡಲು ಝೂಪ್ ವ್ಯವಸ್ಥೆ ಮಾಡಿದೆ. ಅಲ್ಲದೇ ಬುಕ್ ಆದ ಆಹಾರದ ರಿಯಲ್ ಟೈಂ ಸ್ಟೇಟಸ್ ಪ್ರಯಾಣಿಕರ ಸ್ಮಾರ್ಟ್‌ಪೋನ್‌ಗಳಲ್ಲಿ ಲಭ್ಯವಿರಲಿದೆ.

ಆಹಾರದ ಗುಣಮಟ್ಟದ ವಿಚಾರಲ್ಲಿ ಯಾವುದೇ ರಾಜಿ ಇಲ್ಲ. ವಿಮಾನದಲ್ಲಿ ದೊರೆಯುವ ಗುಣಮಟ್ಟದ ಆಹಾರದಂತೆ ರೈಲಿನಲ್ಲಿಯೂ ಆಹಾರ ದೊರೆಯಬೇಕು ಎಂದು ಐಆರ್‌ಸಿಟಿಸಿ ಸೂಚನೆ ಕೊಟ್ಟಿದೆ.

English summary
Indian Railway Catering and Tourism Corporation Ltd. (IRCTC) now allowed railway passengers to book food through WhatsApp with the help of food delivery applications Zoop. How to book food through the messaging service WhatsApp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X