Helicopter Crash: ಹನಿಮೂನ್‌ಗೆ ತೆರಳುತ್ತಿದ್ದ ನವ ಜೋಡಿ ಬಾಳಲ್ಲಿ ದುರಂತ: ಪತ್ನಿ ಮಡಿಲಲ್ಲೇ ಪ್ರಾಣಬಿಟ್ಟ ಪೈಲಟ್

Helicopter Crash: ಮದುವೆಯಾದ ಕೆಲವೇ ಗಂಟೆಗಳಲ್ಲಿ ಪತ್ನಿ ಮಡಿಲಲ್ಲೇ ಪೈಲಟ್‌ವೊಬ್ಬರು ಪ್ರಾಣಬಿಟ್ಟಿರುವ ದಾರುಣ ಘಟನೆ ಅಮೆರಿಕಾದಲ್ಲಿ ನಡೆದಿದೆ. ಭಾರತೀಯ ಮೂಲದ ನವವಿವಾಹಿತ ಅಮೆರಿಕಾದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟಿದ್ದಾರೆ. ಅಮೆರಿಕಾದ ಜಾರ್ಜಿಯಾದಲ್ಲಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ನವ ವಿವಾಹಿತರು ಈ ದುರಂತವನ್ನು ಎದುರಿಸಿದ್ದಾರೆ. ಬಾಳಿನ ಸಿಹಿ ಕ್ಷಣಗಳನ್ನು ಕಳೆಯುವಾಗಲೇ ಭಾರೀ ದುರಂತವೊಂದು ಅವರ ಬಾಳಿನಲ್ಲಿ ಅಪ್ಪಳಿಸಿದೆ. ಹೊಸ ಜೀವನಕ್ಕೆ ಕಾಲಿಟ್ಟ ಖುಷಿಯಲ್ಲೇ ನವ ವಿವಾಹಿತರು ಮಧುಚಂದ್ರಕ್ಕೆ ತೆರಳುತ್ತಿದ್ದರು. ಆದರೆ ಹೆಲಿಕಾಪ್ಟರ್‌ ಅಮೆರಿಕದ ಡಾಸನ್‌ವಿಲ್ಲೆ ವಿವಾಹ ಸ್ಥಳದ ಸಮೀಪದಲ್ಲಿಯೇ ಇರುವ ಕಾಡಿನಲ್ಲಿ ಅಪಘಾತಕ್ಕೀಡಾಗಿದೆ. ಅಲ್ಲದೆ ಮದುವೆಯಾದ ಕೆಲವು ಗಂಟೆಗಳಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ವಿವಾಹವಾದ ಕೆಲವೇ ಗಂಟೆಗಳಲ್ಲಿ ಹೆಲಿಕಾಪ್ಟರ್‌ ದುರಂತಕ್ಕೆ ಸಂಭವಿಸಿದೆ. ಈ ದುರಂತದಲ್ಲಿ ವರ ಮೃತಪಟ್ಟಿದ್ದು, ವಧು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾರತದ ಕೇರಳ ಮೂಲದ 26 ವರ್ಷದ ಡೇವ್ ಫಿಜಿ ಅಮೆರಿಕಾದಲ್ಲಿ ಡೆಲ್ಟಾ ಏರ್ ಲೈನ್ಸ್ ಪೈಲಟ್ ಕೆಲಸ ಮಾಡುತ್ತಿದ್ದರು.

Helicopter Crash

ಅಮೆರಿಕಾದಲ್ಲಿ ನರ್ಸ್ ಆಗಿರುವ ಜೆಸ್ನಿ ಎನ್ನುವವರನ್ನು ಡಾಸನ್‌ವಿಲ್ಲೆಯಲ್ಲಿ ಮೇ.29ರ ಶುಕ್ರವಾರ ವಿವಾಹವಾಗಿದ್ದರು. ಈ ಜೋಡಿ ವಿವಾಹ ಸಂಭ್ರಮದಲ್ಲಿರುವಾಗಲೇ ಬಾಳಿನಲ್ಲೇ ಮರೆಯಲಾಗದ ದುರಂತ ಸಂಭವಿಸಿದೆ. ರಾಬಿನ್ಸನ್ R66 ಹೆಲಿಕಾಪ್ಟರ್‌ ಮೂಲಕ ಇಬ್ಬರು ಜೋಡಿಯು ಹನಿಮೂನ್‌ಗೆ ತೆರಳುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಹನಿಮೂನ್‌ಗೆ ಡೆಕಾಲ್ಬ್-ಪೀಚ್‌ಟ್ರೀ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆದರೆ, ಹೆಲಿಕಾಪ್ಟರ್‌ ಹಾರಾಟ ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲೇ ಮದುವೆ ಸ್ಥಳದಿಂದ ಸ್ವಲ್ಪ ದೂರದಲ್ಲಿರುವ ಮೌಂಟ್ ವೆರ್ನಾನ್ ಡ್ರೈವ್ ಸಮೀಪದ ಡಾಸನ್ ಕೌಂಟಿಯ ಎಂಬ ಅರಣ್ಯ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ.

ಹೆಲಿಕಾಪ್ಟರ್‌ ದುರಂತಕ್ಕೆ ಕಾರಣ ಇನ್ನಷ್ಟೇ ಪತ್ತೆಯಾಗಬೇಕು

ಇನ್ನು ಈ ಹೆಲಿಕಾಪ್ಟರ್‌ ದುರಂತಕ್ಕೆ ಕಾರಣ ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಪತನವಾದ ಹೆಲಿಕಾಪ್ಟರ್‌ ಪತ್ತೆ ಹಚ್ಚುವುದಕ್ಕೆ ರಕ್ಷಣಾ ತಂಡಗಳು ಸತತ 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿವೆ. ದುರಂತದಲ್ಲಿ ಪೈಲಟ್ ಮತ್ತು ನವವಿವಾಹಿತ ವರ ಸಾವನ್ನಪ್ಪಿದ್ದಾರೆ. ಅಲ್ಲದೆ ವಧು ಜೆನ್ಸಿ ಅವರು ಗಾಯಗೊಂಡಿದ್ದಾರೆ. ದುರಂತದಿಂದ ಪಾರಾಗಿದ್ದಾರೆ. ಇನ್ನು ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ಅಪಘಾತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದೆ. ಹೆಲಿಕಾಪ್ಟರ್‌ ದುರಂತಕ್ಕೆ ನಿಖರವಾದ ಕಾರಣ ಇನ್ನಷ್ಟೇ ತಿಳಿಯಬೇಕಾಗಿದೆ ಎಂದು ಅಟ್ಲಾಂಟಾ ನ್ಯೂಸ್ ಫಸ್ಟ್ ವರದಿ ಮಾಡಿದೆ.

Helicopter Crash: ನವವಿವಾಹಿತ ಪತ್ನಿಯ ಮಡಿಲಲ್ಲೇ ಪ್ರಾಣಬಿಟ್ಟ ವರ

ಇನ್ನು ವಿಮಾನ ದುರಂತ ಸಂಭವಿಸಿದಾಗ ವಧು - ವರಳ ಮಡಿಲಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ಮದುವೆಯಾದ ಕೆಲವೇ ಕ್ಷಣಗಳಲ್ಲಿ ಈ ಭೀಕರ ದುರಂತ ಸಂಭವಿಸಿದ್ದು, ವಧು - ವರರ ಕುಟುಂಬದವರು ಆಘಾತಕ್ಕೆ ಒಳಗಾಗಿದ್ದಾರೆ. ವಧು ಇದೀಗ ಪ್ರಾಣಾಪಾಯದಿಂದ ಪರಾಗಿದ್ದಾರಾದರೂ, ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ಡೇವ್ ಅವರ ಪೋಷಕರಾದ ಜಾರ್ಜ್ ಹಾಗೂ ಫೆಬಾ ಫಿಜಿ, ಹಲವು ವರ್ಷಗಳ ಹಿಂದೆಯೇ ಕೇರಳದ ಎರ್ನಾಕುಲಂನಿಂದ ಅಮೆರಿಕಕ್ಕೆ ವಲಸೆ ಬಂದಿದ್ದರು. ಡೇವ್‌ ಅವರ ಪತ್ನಿ ಸಹ ಕೇರಳ ಮೂಲದವರಾಗಿದ್ದಾರೆ. ಜೆಸ್ನಿಯವರ ಕುಟುಂಬವು ಕೇರಳದ ಅಲಪ್ಪುಳ ಜಿಲ್ಲೆಯವರಾಗಿದ್ದಾರೆ. ಹೊಸ ಬಾಳಿನ ಹೊಸ್ತಿಲಲ್ಲಿದ್ದ ಜೋಡಿಯು ಭೀಕರ ಅಪಘಾತಕ್ಕೆ ಒಳಗಾಗಿರುವುದಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+