• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ರಾಜ್ಯದ ಫೇಸ್ ಲೆಸ್ ಬಿಜೆಪಿ ಎಂಪಿಗಳಿಗೆ ಶೇಮ್"

|

ಬೆಳಗಾವಿ, ಸೆಪ್ಟೆಂಬರ್ 17: ನರೇಂದ್ರ ಮೋದಿ ಹೆಸರಲ್ಲಿ ಗೆದ್ದು ಬಂದು, ರಾಜ್ಯದ‌ ಪರ‌ ಮಾತನಾಡಲು ಧೈರ್ಯವಿಲ್ಲದ ಫೇಸ್ ಲೆಸ್ ಎಂಪಿಗಳಿಗೆ ಶೇಮ್ ಆಗಬೇಕು ಎಂದು ಮಾಜಿ ಸಂಸದ ಧ್ರುವನಾರಾಯಣ ವಾಗ್ದಾಳಿ ನಡೆಸಿದರು.

ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಹಣಕಾಸಿನ ಮುಗ್ಗಟ್ಟಿನಿಂದ ಸರ್ಕಾರ ದಿವಾಳಿಯಾಗಿದೆ. ರಾಜ್ಯಕ್ಕೆ ಬರಬೇಕಿದ್ದ ಜಿಎಸ್ ಟಿ ಹಣವನ್ನು ಕೇಂದ್ರ ಸರ್ಕಾರ‌ ನೀಡುತ್ತಿಲ್ಲ. ಸಾಲ ಪಡೆಯುವಂತೆ ಹೇಳುತ್ತಿದೆ. ಆದರೆ ರಾಜ್ಯದ ಸಂಸದರಿಗೆ ಜಿಎಸ್ ಟಿ ಹಣ ಕೇಳಲು ಧೈರ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಬೆಂಬಲಕ್ಕೆ ಧ್ರುವ ನಾರಾಯಣ್‌; ಚಳವಳಿಯ ಎಚ್ಚರಿಕೆ

ಘರ್ಜಿಸದ ರಾಜಾಹುಲಿ!

ಮಾಧ್ಯಮಗಳು ಹಾಗೂ ಬಿಜೆಪಿ ಸಿಎಂ ಯಡಿಯೂರಪ್ಪ ಅವರನ್ನು ರಾಜಾಹುಲಿ ಎನ್ನುತ್ತಿವೆ. ಆದರೆ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ರಾಜಾಹುಲಿ ಘರ್ಜನೆ ಮಾಡುತ್ತಿಲ್ಲ‌. ರಾಜ್ಯದಿಂದಲೇ ಆಯ್ಕೆಯಾದ ನಿರ್ಮಲಾ ಸೀತಾರಾಮ ‌ಅವರ ಕೊಡುಗೆಯೂ ಶೂನ್ಯವಾಗಿದೆ ಎಂದು ಲೇವಡಿ‌ ಮಾಡಿದರು.

English summary
Former MP Dhruva narayan has called states mp's as faceless for not dare to ask for GST money from centre
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X