ಆಫ್ರಿಕಾ ವಿದ್ಯಾರ್ಥಿಗಳ ರಾತ್ರಿ ರಂಪಾಟವೇನು ಕಡಿಮೆ ಇಲ್ಲ!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಫೆಬ್ರವರಿ, 04: ತಾಂಜೇನಿಯಾ ಯುವತಿ ಮೇಲಿನ ಹಲ್ಲೆ ಪ್ರಕರಣ ಹಲವಾರು ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳ ಸುರಕ್ಷತೆ ಒಂದು ಮುಖವಾದರೆ ಅವರ ಸ್ವೇಚ್ಛಾಚಾರದ ವರ್ತನೆ ಇನ್ನೊಂದು ಮುಖ.

ನಿಜಕ್ಕೂ ಬೆಂಗಳೂರು ಪೊಲೀಸರಿಗೆ ಮತ್ತು ಆಡಳಿತಕ್ಕೆ ಈ ವಿದೇಶಿ ಅದರಲ್ಲೂ ಆಫ್ರಿಕಾದ ವಿದ್ಯಾರ್ಥಿಗಳನ್ನು ಸಂಭಾಳಿಸುವುದು ಕಷ್ಟಸಾಧ್ಯವಾದ ಕೆಲಸವಾಗಿ ಮಾರ್ಪಟ್ಟಿದೆ. ಇದಕ್ಕೆ ಕಾರಣಗಳು ಹಲವಾರು.[ಯುವತಿ ಮೇಲೆ ಹಲ್ಲೆ : ಸಿದ್ದರಾಮಯ್ಯಗೆ ಸುಷ್ಮಾ ಸ್ವರಾಜ್ ಕರೆ]

ಕಳೆದ ವರ್ಷವೇ ಪೊಲೀಸ್ ಇಲಾಖೆ ಸಮಿತಿಯೊಂದನ್ನು ಮಾಡಿಕೊಂಡು 5 ಸಾವಿರ ವಿದ್ಯಾರ್ಥಿಗಳ ಚಲನ ವಲನದ ಮೇಲೆ ದೃಷ್ಟಿ ನೆಟ್ಟಿತ್ತು. ವಿದೇಶಿ ವಿದ್ಯಾರ್ಥಿಗಳಿಗೆ ತೊಂದರೆಯಾದರೆ ನೇರವಾಗಿ ಸಮಿತಿ ಬಳಿ ಬರುವಂತೆಯೂ ಸೂಚಿಸಲಾಗಿತ್ತು. ಆದರೆ ಇದೀಗ ಹೆಸರಘಟ್ಟದ ಬಳಿ ನಡೆದಿರುವ ಪ್ರಕರಣ ಮತ್ತೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.[ವಿಡಿಯೋ : ತಾಂಜಾನಿಯಾ ಮಹಿಳೆ ಮೇಲೆ ದಾಳಿ]

ನಿಧಾನಗತಿಯ ದೂರು

ನಿಧಾನಗತಿಯ ದೂರು

ಭಾನುವಾರ ಯುವತಿಯ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಲಾಗಿದ್ದರೆ ದೂರು ದಾಖಲಾಗಿರುವುದು ಬುಧವಾರ. ಯುವತಿ ಆಘಾತಕ್ಕೆ ಒಳಗಾಗಿದ್ದೆ ಎಂದು ಹೇಳಿದ್ದಾಳೆ. ಆದರೆ ಆಕೆಯನ್ನು ರಕ್ಷಿಸಿದ ಸ್ನೇಹಿತನ ಹೆಸರನ್ನು ಎಲ್ಲಿಯೂ ಹೇಳಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆಫ್ರಿಕಾ ವಿದ್ಯಾರ್ಥಿ ಬಂಧನ

ಆಫ್ರಿಕಾ ವಿದ್ಯಾರ್ಥಿ ಬಂಧನ

ಎಂ ಎಸ್ ರಾಮಯ್ಯ ಕಾಲೇಜಿನ ಬಳಿ ನೈಟ್ ಡ್ಯೂಟಿಯಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಕಾರಣಕ್ಕೆ ಆರು ವರ್ಷದ ಹಿಂದೆ ಆಫ್ರಿಕಾ ಮೂಲಕ ವಿದ್ಯಾರ್ಥಿಯನ್ನು ಬಂಧನ ಮಾಡಲಾಗಿತ್ತು.

ಏರ್ ಪೋರ್ಟ್ ರಸ್ತೆಯಲ್ಲಿ ಹುಚ್ಚಾಟ

ಏರ್ ಪೋರ್ಟ್ ರಸ್ತೆಯಲ್ಲಿ ಹುಚ್ಚಾಟ

ವಿಮಾನ ನಿಲ್ದಾಣ ರಸ್ತೆಯಲ್ಲಿ ಆಫ್ರಿಕಾ ವಿದ್ಯಾರ್ಥಿಗಳ ಹುಚ್ಚಾಟ ಯಾವಾಗಲೂ ಮೀತಿ ಮೀರಿರುತ್ತದೆ. ಡ್ರ್ಯಾಗ್ ರೇಸ್ ಮಾಡುತ್ತ, ಮಾದಕ ವಸ್ತು ಸೇವಿಸಿ ಅಡ್ಡಾದಿಡ್ಡಿ ವಾಹನ ಚಲಾವಣೆ ಮಾಡಿದ ಪ್ರಕರಣಗಳೂ ಕಮ್ಮನಹಳ್ಳಿ ಬಳಿ ದಾಖಲಾಗಿದ್ದು ಇದೆ.

ರಾತ್ರಿ ರಂಪಾಟ

ರಾತ್ರಿ ರಂಪಾಟ

ವಿದೇಶಿ ವಿದ್ಯಾರ್ಥಿಗಳು ಬಾರ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಪ್ರಕರಣಗಳು, ಹೋಟೆಲ್ ನಲ್ಲಿ ಗಲಾಟೆ ಮಾಡಿಕೊಂಡ ಪ್ರಕರಣಗಳು ಕಡಿಮೆ ಇಲ್ಲ. ಇದರಲ್ಲಿ ಆಫ್ರಿಕಾಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಸಮಿತಿ ನೇಮಕ

ಸಮಿತಿ ನೇಮಕ

ವಿದೇಶಿ ವಿದ್ಯಾರ್ಥಿಗಳ ಹಿತ ಕಾಯಲು ಅಥವಾ ಅವರ ದೂರುಗಳನ್ನು ಸ್ವೀಕರಿಸಲು ಪೊಲೀಸ್ ಇಲಾಖೆ ಸಮಿತಿಯಯೊಂದನ್ನು ನೇಮಕ ಮಾಡಿ ನೋಡೆಲ್ ಅಧಿಕಾರಿಯನ್ನು ನೇಮಕ ಮಾಡಿತ್ತು.

ಪರಿಹಾರವೇನು?

ಪರಿಹಾರವೇನು?

ರಾಜಧಾನಿಯಲ್ಲಿ ವಿದೇಶಿ ವಿದ್ಯಾರ್ಥಿಗಳ ಉಪಟಳ ಹೆಚ್ಚಿದೆ ಎಂಬುದಕ್ಕೆ ಅನೇಕ ಘಟನೆಗಳು ಸಾಕ್ಷಿಯಾಗುತ್ತಿದ್ದು ಪೊಲೀಸ್ ಇಲಾಖೆ ಮತ್ತು ವಿದೇಶಾಂಗ ಇಲಾಖೆ ಇವರಿಗೆ ಒಂದು ನಿಯಮಾವಳಿ ರೂಪಿಸಿನೀಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The incident, in which a Tanzanian student was reportedly assaulted by an irate mob protesting an accident, has sent shock waves. The Bengaluru police say that they are committed to investigating the case thoroughly. There are certain aspects to this case and also other incidents relating to African students in Bengaluru that one needs to take into account.
Please Wait while comments are loading...