ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದಾನಂದ ಗೌಡ ಕುಟುಂಬದವರ ಪೋನ್ ಟ್ಯಾಪ್

|
Google Oneindia Kannada News

ಬೆಂಗಳೂರು, ಅ. 10 : 'ನಟಿ ಮೈತ್ರಿಯಾ ಗೌಡ ಪ್ರಕರಣದಲ್ಲಿ ನನ್ನ ಸಂಬಂಧಿಗಳ ಫೋನ್ ಟ್ಯಾಪಿಂಗ್ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಸದಾನಂದ ಗೌಡರ ಐವರು ಕುಟುಂಬ ಸದಸ್ಯರ ಪೋನ್ ಟ್ಯಾಪ್ ಮಾಡಿರುವ ಸಂಗತಿ ಗುರುವಾರ ಸಂಜೆ ಬೆಳಕಿಗೆ ಬಂದಿತ್ತು.

ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡಿದ ಡಿ.ವಿ.ಸದಾನಂದ ಗೌಡ ಅವರು, ಮೈತ್ರಿಯಾ ಗೌಡ ತಮ್ಮ ಪುತ್ರ ಕಾರ್ತಿಕ್ ಗೌಡ ವಿರುದ್ಧ ಮಾಡಿರುವ ಆರೋಪದ ಕುರಿತು ತನಿಖೆ ನಡೆಯುತ್ತಿದೆ. ಆದ್ದರಿಂದ ಈ ವಿಚಾರವಾಗಿ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. [ಕಾರ್ತಿಕ್ ಗೌಡ ಏಕಾಏಕಿ ಪ್ರತ್ಯಕ್ಷ, ಸೀದಾ ಆಸ್ಪತ್ರೆಗೆ]

Sadananda Gowda

ಸದಾನಂದಗೌಡರ ಕುಟುಂಬ ಸದಸ್ಯರ ಐದು ಮಂದಿಯ ಮೊಬೈಲ್​ ಫೋನ್​ಗಳನ್ನು ಟ್ಯಾಪ್​ ಮಾಡಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಆದೇಶ ನೀಡಿದ್ದರು ಎಂಬುದು ವಿವಾದಕ್ಕೆ ಕಾರಣವಾಗಿತ್ತು. ಆರ್‌.ಟಿ.ನಗರ ಪೊಲೀಸರು ಡಿವಿಎಸ್ ಪತ್ನಿ ಡಾಟಿ ಸದಾನಂದ ಗೌಡರ ಸಂಬಂಧಿ ಗೌತಮ್, ಡಿವಿಎಸ್ ಆಪ್ತ ಸಹಾಯಕ ತಮ್ಮೇಗೌಡ, ಕಾರ್ತಿಕ್​ ಸಂಬಂಧಿ ಮುರುಳಿ, ಸದಾನಂದಗೌಡರ ಸಹೋದರ ಭಾಸ್ಕರ್​​ ಗೌಡ ಸೇರಿದಂತೆ ಒಟ್ಟು ಐದು ಜನರ ಪೋನ್ ಟ್ಯಾಪ್ ಮಾಡಿದ್ದಾರೆ ಎಂಬುದು ವಿವಾದಕ್ಕೆ ಕಾರಣವಾಗಿದೆ. [ಮೈತ್ರಿಯಾ ಬಗ್ಗೆ ಡಾಟಿ ಸದಾನಂದ ಗೌಡರು ಹೇಳಿದ್ದೇನು?]

ಸೆಪ್ಟೆಂಬರ್​ 5ರಿಂದ 11 ರವೆರಗೆ ಐದು ಜನರ ಮೊಬೈಲ್‌ಗಳಲ್ಲಿ ಮಾಡಿರುವ ಕರೆಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ. ಪೋನ್ ಟ್ಯಾಪಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ತಮ್ಮೇಗೌಡ ಅವರು ನಾವು ದೇಶ ದ್ರೋಹದ ಕೆಲಸ ಮಾಡಿಲ್ಲ ಪೊಲೀಸರ ಕ್ರಮ ನಮಗೆ ಆಶ್ಚರ್ಯ ಉಂಟುಮಾಡಿದೆ ಎಂದು ಪ್ರತಿಕ್ರಿಯೆ ನೀಡಿದ್ದರು.

English summary
A phone tap ordered by Bangalore commissioner of police MN Reddi on five associates of Union railway minister Sadananda Gowda is threatening to blow up into a political storm. On Friday Sadananda Gowda said he will not react for the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X