ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮ್ಯಾಗಿ ಕೆಟ್ಟದ್ದು ಎಂಬ ವಿವಾದದ ಬಗ್ಗೆ ಟ್ವಿಟ್ಟಿಗರು ಏನನ್ನುತ್ತಾರೆ?

By Prasad
|
Google Oneindia Kannada News

ಬೆಂಗಳೂರು, ಜೂ. 02 : ಮಕ್ಕಳಿಂದ ದೊಡ್ಡವರವರೆಗೆ ಅಚ್ಚುಮೆಚ್ಚಿನ ಖಾದ್ಯವಾಗಿರುವ ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್ ನಲ್ಲಿ ಅನಾರೋಗ್ಯಕರ ವಸ್ತು ಇರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಉತ್ಪಾದನೆಯಾಗುವ ಮತ್ತು ಮಾರಾಟವಾಗುವ ಮ್ಯಾಗಿಯನ್ನು ಪರೀಕ್ಷೆಗೆ ಒಳಪಡಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.

ಆರೋಗ್ಯ ಸಚಿವ ಡಾ. ಯು.ಟಿ. ಖಾದರ್ ಅವರು, "ಮ್ಯಾಗಿ ನೂಡಲ್ಸ್ ಉತ್ಪನ್ನವನ್ನು ಉತ್ಪಾದನಾ ಘಟಕ, ಅಂಗಡಿಗಳಿಂದ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲು ಸರಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಪ್ರಯೋಗದ ಫಲಿತಾಂಶ ತೃಪ್ತಿಕರವಾಗಿಲ್ಲದಿದ್ದರೆ ಹೊರ ರಾಜ್ಯಕ್ಕೆ ಕಳುಹಿಸಲಾಗುವುದು" ಎಂದು ಮಂಗಳೂರಿನಲ್ಲಿ ಮಂಗಳವಾರ ನುಡಿದರು.

ಕರ್ನಾಟಕದಲ್ಲಿ ಒಟ್ಟು ನಾಲ್ಕು ಕಡೆಗಳಲ್ಲಿ ಮ್ಯಾಗಿ ಉತ್ಪಾದನಾ ಘಟಕಗಳಿವೆ. ಸಂಗ್ರಹಿಸಲಾಗುವ ಮ್ಯಾಗಿ ಸ್ಯಾಂಪಲ್ ಗಳನ್ನು ಮೈಸೂರಿನಲ್ಲಿರುವ ರಾಷ್ಟ್ರಮಟ್ಟದ ಪ್ರಯೋಗಾಲಯ ಮತ್ತು ಬೆಂಗಳೂರಿನಲ್ಲಿರುವ ಖಾಸಗಿ ಪ್ರಯೋಗಾಲಯಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. [ಮಾಧುರಿ, ಅಮಿತಾಭ್, ಪ್ರೀತಿ ಮೇಲೆ ಕೇಸ್]

ದೆಹಲಿಯಲ್ಲಿ ಈಗಾಗಲೆ ರೆಡಿಮೇಡ್ ಫುಡ್ ಮ್ಯಾಗಿ ಅನಾರೋಗ್ಯಕರ ಮತ್ತು ಅಸುರಕ್ಷಿತ ಎಂದು ದೆಹಲಿ ಸರಕಾರ ಘೋಷಣೆ ಮಾಡಿದೆ. ಕೇರಳದಲ್ಲಿ ಸರಕಾರಿ ಮಳಿಗೆಗಳಿಂದ ಮ್ಯಾಗಿಯನ್ನು ಹಿಂತೆಗೆಯಲು ಸರಕಾರ ನಿರ್ಧರಿಸಿದೆ. ಮ್ಯಾಗಿಯ ಗುಣಮಟ್ಟ ಉತ್ತಮವಾಗಿದೆ ಎಂಬ ವರದಿ ಬರುವವರೆಗೆ ಈ ನಿಷೇಧ ಜಾರಿಯಲ್ಲಿರಲಿದೆ. [ಈ ಕುರಿತು ಪುನೀತ್ ಪ್ರತಿಕ್ರಿಯೆ]

ಮ್ಯಾಗಿಯಲ್ಲಿ ಅನುಮತಿ ಕೊಡಬಹುದಾದ ಮಟ್ಟಕ್ಕಿಂತ ಎಂಟರಷ್ಟು ಸೀಸದ ಪ್ರಮಾಣ ಇದೆ ಎಂದು ಉತ್ತರ ಪ್ರದೇಶದ ಅಧಿಕಾರಿಗಳು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ದೇಶದಾದ್ಯಂತ ನೆಸ್ಲೆ ಉತ್ಪನ್ನದ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಹಾರ ಕೋರ್ಟ್, ಮ್ಯಾಗಿ ಜಾಹೀರಾತಿನಲ್ಲಿ ಕಾಣಿಸಿರುವ ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್, ಪ್ರೀತಿ ಜಿಂಟಾ ಮುಂದಾದವರ ವಿರುದ್ಧ ಎಫ್ಐಆರ್ ಸಲ್ಲಿಸಬೇಕೆಂದು ಆದೇಶಿಸಿದೆ.

ಮ್ಯಾಗಿ ಮೇಲಿನ ಮುನಿಸಿನ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ವರ್ಷಗಳಿಂದ ಮ್ಯಾಗಿ ಸೇವಿಸುತ್ತಿದ್ದೇನೆ, ನನಗೇನೂ ಆಗಿಲ್ಲ ಎಂದು ಮ್ಯಾಗಿ ಪ್ರಿಯರು ಕುದಿಯುತ್ತಿದ್ದರೆ, ಇಷ್ಟು ದಿನ ಕಣ್ಣುಮುಚ್ಚಿಕೊಂಡು ಇದ್ದರಾ ಎಂದು ಕೆಲವರು ಕೆಂಡ ಕಾರಿದ್ದಾರೆ. ಎಂದಿನಂತೆ ಸೆಲೆಬ್ರಿಟಿಗಳು ತಮ್ಮ ಬಾಂಧವರ ಬೆಂಬಲಕ್ಕೆ ನಿಂತಿದ್ದಾರೆ. ಅವರಲ್ಲಿ ಕೆಲವರು ಏನು ಹೇಳುತ್ತಾರೆ ಮುಂದೆ ಓದಿರಿ.

ಟಿವಿ, ರೇಡಿಯೋ, ಹೋರ್ಡಿಂಗ್ ಗಳದ್ದೂ ತಪ್ಪು

ಮ್ಯಾಗಿಯನ್ನು ಮಾಧುರಿ ದೀಕ್ಷಿತ್ ಪ್ರಚಾರ ಮಾಡಿದ್ದೇ ತಪ್ಪೆನ್ನುವುದಾದರೆ, ಇದು ಟಿವಿ ಚಾನಲ್, ರೇಡಿಯೋ, ಹೋರ್ಡಿಂಗ್ ಗಳಿಗೂ ಅನ್ವಯವಾಗುತ್ತದೆ ಎಂದಿದ್ದಾರೆ ಖ್ಯಾತ ಬಾಲಿವುಡ್ ನಟ ರಿಷಿ ಕಪೂರ್.

ವರ್ಷಗಟ್ಟಲೆ ಮ್ಯಾಗಿ ಸವಿಯುತ್ತಿದ್ದೇನೆ

ಇತರ ಭಾರತೀಯರಂತೆ ನಾನು ವರ್ಷಾನುಗಟ್ಟಲೆ ಮ್ಯಾಗಿಯನ್ನು ಸವಿಯುತ್ತ ಬಂದಿದ್ದೇನೆ. ಆದರೆ, ಮ್ಯಾಗಿ ಕುರಿತ ಇತ್ತೀಚೆಗೆ ಕೆಲ ವರದಿಗಳ ಬಂದ ನಂತರ ಕಳವಳಕ್ಕೀಡಾಗಿದ್ದೇನೆ - ಮಾಧುರಿ ದೀಕ್ಷಿತ್.

ಕೋಲಾ ಮೇಲೆ ಶೇಖರ್ ಕಪೂರ್ ಕೆಂಗಣ್ಣು

ಈಗ ಮ್ಯಾಗಿ ಜಾಹೀರಾತು ಮೇಲೆ ತನಿಖೆ ನಡೆಯುತ್ತಿದೆ. ಕೋಲಾ ಬಗ್ಗೆ ಏನು ಹೇಳುತ್ತೀರಿ? ಕೋಲಾ ಎಷ್ಟು ಕೆಟ್ಟದ್ದೆಂದು ಯಾರು ಬೇಕಾದರೂ ಹೇಳುತ್ತಾರೆ.

ರಸ್ತೆಬದಿ ಪಾನಿಪೂರಿ, ವಡಾ ಓಕೆನಾ?

ಮ್ಯಾಗಿ ತಿನ್ನುವುದ ಅನಾರೋಗ್ಯಕರವಾದರೆ ರಸ್ತೆಬದಿ ಸಿಗುವ ಪಾನಿಪೂರಿ, ವಡಾ ಓಕೆನಾ?

ನಟಿ ಪೂಜಾ ಬೇಡಿಯ ಸಿಡಿಮಿಡಿ

ಮ್ಯಾಗಿ ಚೆನ್ನಾಗಿದೆಯೆಂದು ಉಚಿತವಾಗಿ ಉಚಿತವಾಗಿ ಟ್ವೀಟ್ ಮಾಡಿದರೆ ಸರಿ. ಆದರೆ, ದುಡ್ಡು ಪಡೆದು ಚೆನ್ನಾಗಿದೆ ಅಂತ ನಾನು ಹೇಳಿದರೆ ಅಕೌಂಟೆಬಲ್ ಆಗುತ್ತೇನಾ? ಯಾರು ಈ ಪ್ರಶ್ನೆಗೆ ಉತ್ತರಿಸುತ್ತೀರಿ?

ಲೇಖಕ ಚೇತನ್ ಭಗತ್ ಟ್ವೀಟ್

ಸೋಷಿಯಲ್ ಮೀಡಿಯಾ ಯುಗದಲ್ಲಿ ಮ್ಯಾಗಿ ಉತ್ಪನ್ನ ಅತಿ ದೊಡ್ಡ ದುರಂತವನ್ನು ಎದುರಿಸುತ್ತಿದೆ.

ನೆಸ್ಲೆ ಭಾರೀ ಡೇಂಜರಸ್ ಆಟವಾಡಿದೆ

ಅಸುರಕ್ಷಿತ (ವಿಷಕಾರಕ) ಆಹಾರ ತಿನ್ನುತ್ತಿದ್ದೇನೆಂಬ ಅರಿವಿರದೆ ದೇಶದ ಕೋಟ್ಯಂತರ ಮಕ್ಕಳು ಮ್ಯಾಗಿಯನ್ನು ತಿನ್ನುತ್ತಿವೆ. ನೆಸ್ಲೆ ಭಾರೀ ಡೇಂಜರಸ್ ಆಟವಾಡಿದೆ.

English summary
Karnataka government has decided test samples of Maggi after nation wide campaign against the instant food product manufactured by Nestle. Many tests have found excessive lead in Maggi, which not healthy. Bihar court has ordered to file FIR against celebrities who have been endorsing it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X