ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡಿಎಯಿಂದ 12,610 ನಿವೇಶನ ಹಂಚಿಕೆ

By Mahesh
|
Google Oneindia Kannada News

ಬೆಂಗಳೂರು, ನ.23: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ಬೆಂಗಳೂರು ನಗರ ವಾಸಿಗಳಿಗೆ ಈ ವರ್ಷ 12,610 ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ 24 ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದಿಲ್ಲಿ ತಿಳಿಸಿದರು.

ರಾಜರಾಜೇಶ್ವರಿನಗರದ ದ ಐಡಿಯಲ್ ಹೋಂ ಕೋ-ಆಪರೇಟಿವ್ ಬಿಲ್ಡಿಂಗ್ ಸೊಸೈಟಿ ಲಿಮಿಟೆಡ್‌ನ ಸುರ್ವಣ ಮಹೋತ್ಸವ ಉದ್ಘಾಟನಾ ನೆರವೇರಿಸಿ ಮಾತನಾಡಿದ ಅವರು, ಬಿಡಿಎ ಅರಂಭದಿಂದಲೂ 1.50 ಲಕ್ಷ ನಿವೇಶ ಹಂಚಿಕೆ ಮಾಡಿದೆ. ಹಿಂದಿನ ಸರ್ಕಾರ 30 ಸಾವಿರ ನಿವೇಶನ ಹಂಚಿಕೆ ಮಾಡುವುದಾಗಿ ಹೇಳಿದ್ದರೂ ಒಂದೂ ನಿವೇಶವನ್ನು ಹಂಚಿಕೆ ಮಾಡಿಲ್ಲ. ನಮ್ಮ ಸರ್ಕಾರ 12,610 ನಿವೇಶನ ಹಂಚಿಕೆಗೆ ನಿರ್ಧರಿಸಿದ್ದು, ಅರ್ಜಿ ಹಾಕಿದವರಲ್ಲಿ ಹಿರಿತನದ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು.

BDA to invite applications for 12,500 sites this year

ನಿವೇಶನ ಹಂಚಿಕೆಯ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ 24 ಯೋಜನೆಗಳ ಪೈಕಿ ಐದು ಯೋಜನೆಗಳು ಪೂರ್ಣಗೊಂಡಿದ್ದು, ಬಾಕಿ ಯೋಜನೆಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು. ಸಹಕಾರ ಸಂಘಗಳು ಜನರಿಗೆ ನಿವೇಶನ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸರ್ಕಾರವೇ ಎಲ್ಲರಿಗೂ ನಿವೇಶನ ಒದಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.[ಫ್ಲಾಟ್ ಪಡೆಯಲು ಅರ್ಜಿ ಸಲ್ಲಿಸಲು ಸಿದ್ಧವಾಗಿ]

ಬೆಂಗಳೂರು ಬೃಹದಾಕರವಾಗಿ ಬೆಳೆದಿದೆ. ವಿದ್ಯುತ್, ಒಳಚರಂಡಿ, ರಸ್ತೆ ಸೇರಿದಂತೆ ವಿವಿಧ ಸಮಸ್ಯೆಗಳು ವ್ಯಾಪಕವಾಗಿವೆ. ಇದನ್ನು ಬಗೆಹರಿಸುವುದು ತುಂಬ ಕಷ್ಟ. ನಿವೇಶನಗಳ ಬೆಲೆ ಏರಿಕೆ ನಿಯಂತ್ರಣದಲ್ಲಿ ಸಹಕಾರ ಸಂಘಗಳು ಒಟ್ಟಾಗಿ ಶ್ರಮಿಸಬೇಕಿದೆ. ಮೂಲ ಸೌಕರ್ಯ ಒದಗಿಸುವುದು ಮುಖ್ಯ ಎಂದರು.

ಸಮಾರಂಭದಲ್ಲಿ ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಸೋಮಶೇಖರ್, ಮುನಿರತ್ನ, ಐಡಿಯಲ್ ಸಹಕಾರ ಸಂಸ್ಥೆಯ ಅಧ್ಯಕ್ಷ ಸುಬ್ಬಯ್ಯ, ಉಪಾಧ್ಯಕ್ಷ ರಾಜ್‌ಕುಮಾರ್, ಸಹಕಾರ ಇಲಾಖೆ ನಿಬಂಧಕ ಚೆನ್ನಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗೆ ಬಿಡಿಎ ವೆಬ್ ತಾಣಕ್ಕೆ ಭೇಟಿ ನೀಡಬಹುದು. ಬಿಡಿಎ ಕಚೇರಿ ಹಾಗೂ ಸಂಪರ್ಕಕ್ಕಾಗಿ ಕ್ಲಿಕ್ಕಿಸಿ

English summary
Karnataka Chief Minister Siddaramaiah announced that the Bangalore Development Authority (BDA) would call for applications for 12,500 sites this year for upcoming 25 project in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X