ಡಿ.17, 18 ಬೆಂಗಳೂರು ಸಾಹಿತ್ಯ ಹಬ್ಬದಲ್ಲಿ ಅತಿರಥ, ಮಹಾರಥರು ಭಾಗಿ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 14: ಐದನೇ ಆವೃತ್ತಿಯ ಬೆಂಗಳೂರು ಸಾಹಿತ್ಯ ಹಬ್ಬದ ಆರಂಭಕ್ಕೆ ಇನ್ನೇನು ಮೂರೇ ದಿನ ಬಾಕಿ ಇದೆ. ಎರಡು ದಿನಗಳ ಈ ಕಾರ್ಯಕ್ರಮ ಡಿಸೆಂಬರ್ 17, 18ರಂದು ನಡೆಯಲಿದೆ. ಹೆಸರಾಂತ ಲೇಖಕರು, ಕನ್ನಡ ಸಾಹಿತಿಗಳು, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರದವರು ಭಾಗವಹಿಸಲಿದ್ದಾರೆ.

ಈ ವರ್ಷ ಹಲವು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಅಪನಗದೀಕರಣ, ಸಾಂಸ್ಕೃತಿಕ ಸಂಘರ್ಷವೂ ಸೇರಿದಂತೆ ವಿವಿಧ ವಿಚಾರಗಳ ಮೇಲೆ ಚರ್ಚೆ-ಸಂವಾದಗಳು ನಡೆಯಲಿವೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ 'ಆನ್ ಎರಾ ಆಫ್ ಡಾರ್ಕ್ ನೆಸ್: ದ ಬ್ರಿಟಿಷ್ ಎಂಪೈರ್ ಇನ್ ಇಂಡಿಯಾ' ಪುಸ್ತಕದ ಬಗ್ಗೆ ಸಂವಾದದಿಂದ ಕಾರ್ಯಕ್ರಮ ಆರಂಭವಾಗಲಿದೆ.[ಡಿಸೆಂಬರ್ 24, 25ರಂದು ಮಂಗಳೂರಲ್ಲಿ 'ಜನನುಡಿ' ಸಾಹಿತ್ಯ ಸಮಾವೇಶ]

bangalore literature festival on December 17th, 18th

ಶತುಘ್ನ ಸಿನ್ಹಾ, ಚೇತನ್ ಭಗತ್, ಸುಧಾ ಮೂರ್ತಿ, ಅಡೂರ್ ಗೋಪಾಲಕೃಷ್ಣ, ಆಶಿಷ್ ವಿದ್ಯಾರ್ಥಿ, ಐಶ್ವರ್ಯಾ ಆರ್.ಧನುಷ್ ಮತ್ತಿತರರು ಕೂಡ ಓದುಗರೊಂದಿಗಿನ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬೆಜವಾಡ ವಿಲ್ಸನ್, ಕನ್ಹಯ್ಯಾ ಕುಮಾರ್, ರಾಜೀವ್ ಮಲ್ಹೋತ್ರಾ, ಟಿ.ವಿ.ಮೋಹನ್ ದಾಸ್ ಪೈ, ರಾಮಚಂದ್ರ ಗುಹಾ ಸಹ ಪಾಲ್ಗೊಳ್ಳಲಿದ್ದಾರೆ. ಇನ್ನು ಕನ್ನಡದ ವಿವೇಕ್ ಶಾನ್ ಭಾಗ್, ಎಸ್.ದಿವಾಕರ್, ವಸುಧೇಂದ್ರ ಭಾಗವಹಿಸುತ್ತಾರೆ.

ಸಾಹಿತ್ಯ ಹಬ್ಬ ನಡೆಯುವ ಸ್ಥಳ: ರಾಯಲ್ ಆರ್ಕಿಡ್ ಹೋಟೆಲ್, ಹಳೆ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರು. ನೋಂದಣಿಗೆಕ್ಲಿಕ್ ಮಾಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The countdown to the fifth edition of Bangalore Literature Festival has begun, with the organisers publishing the schedule for the two-day event starting December 17.
Please Wait while comments are loading...