ರಾಜೀನಾಮೆ ನೀಡಿದ್ದೇಕೆ? ಅನುಪಮಾ ಶೆಣೈ ಪತ್ರದಿಂದ ಬಹಿರಂಗ

Posted By:
Subscribe to Oneindia Kannada

ಬೆಂಗಳೂರು, ಜೂನ್ 14: ಬಳ್ಳಾರಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ರಾಜೀನಾಮೆ ನೀಡಿದ್ದೇಕೆ? ಶೆಣೈ ಅವರ ರಾಜೀನಾಮೆ ಪತ್ರ ತಿರಸ್ಕರಿಸಿ, ಮತ್ತೊಮ್ಮೆ ಪತ್ರ ಬರೆಸಿಕೊಂಡಿದ್ದೇಕೆ? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಅನುಪಮಾ ಶೆಣೈ ಅವರು ಜೂನ್ 4ರಂದು ತಮ್ಮ ಹುದ್ದೆಗೆ ನೀಡಿದ ರಾಜೀನಾಮೆ ಪತ್ರಗಳು ಈಗ ಮಾಧ್ಯಮಗಳಿಗೆ ಲಭ್ಯವಿದೆ.[ಶೆಣೈ ಕೇಳಿದ ಪ್ರಶ್ನೆ 'ಫೇಸ್ಬುಕ್ ಎಂದ್ರೇನು?']

ಶೆಣೈ ಅವರು ಎರಡು ಬಾರಿ ರಾಜೀನಾಮೆ ಪತ್ರವನ್ನು ಬರೆದಿದ್ದಾರೆ. ಒನ್ ಇಂಡಿಯಾಗೆ ಎರಡು ರಾಜೀನಾಮೆ ಪತ್ರಗಳು ಲಭ್ಯವಿದ್ದು, ಓದುಗರಿಗೆ ಪತ್ರದ ಸಾರಾಂಶವನ್ನು ನೀಡಲಾಗಿದೆ. [ನನಗೆ ಜೀವ ಬೆದರಿಕೆ ಇದೆ: ಅನುಪಮಾ ಶೆಣೈ]

Anupama Shenoy resignation letter Kudligi DYSP

ಶನಿವಾರ (ಜೂನ್ 4) ರಂದು ಅನುಪಮಾ ಶೆಣೈ ಅವರು ರಾಜೀನಾಮೆ ಪತ್ರವನ್ನು ಬರೆದು ಬಳ್ಳಾರಿ ಎಸ್ಪಿ ಚೇತನ್ ಅವರ ಕಚೇರಿಗೆ ಕಳಿಸಿದ್ದಾರೆ.

ಈ ಪತ್ರದಲ್ಲಿ ಜಿಲ್ಲಾ ಉಸ್ತುವಾರಿ, ಕಾರ್ಮಿಕ ಸಚಿವ ಪರಮೇಶ್ವರ್ ಮತ್ತು ಪೊಲೀಸ್ ಇಲಾಖೆಯಿಂದ ಆಗುತ್ತಿರುವ ಕಿರುಕುಳವನ್ನು ಉಲ್ಲೇಖಿಸಿದ್ದರು. ಆದರೆ, ಈ ಅಂಶಗಳಿಗೆ ಎಸ್ಪಿ ಚೇತನ್ ಅವರು ಆಕ್ಷೇಪಿಸಿ, ಈ ರಾಜೀನಾಮೆ ಪತ್ರವನ್ನು ಯಥಾವತ್ತಾಗಿ ಸ್ವೀಕರಿಸಲು ಸಾಧ್ಯವಿಲ್ಲ, ಸಚಿವರ ಹೆಸರು ತೆಗೆದು ರಾಜೀನಾಮೆ ಪತ್ರ ಮತ್ತೊಮ್ಮೆ ಬರೆದುಕೊಡುವಂತೆ ಸೂಚಿಸಿದ್ದಾರೆ. [ಆತ್ಮರಕ್ಷಣೆಗಾಗಿ ಪಿಸ್ತೂಲು ಇಟ್ಟುಕೊಳ್ಳಿ!]

Anupama Shenoy letter

ಅದರಂತೆ, ಶೆಣೈ ಅವರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿ ಮತ್ತೊಮ್ಮೆ ರಾಜೀನಾಮೆ ಪತ್ರವನ್ನು ಬರೆದಿದ್ದಾರೆ. ಇದೇ ಇದು ಈಗ ಅಂಗೀಕಾರವಾಗಿದೆ.

ಶನಿವಾರ ಜೂನ್ 04ರಂದು ಗೃಹ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಸಮುಚಿತ ಮಾರ್ಗದ ಮೂಲಕ ಎಂದು ನಮೂದಿಸಲಾಗಿದೆ. ನೇರವಾಗಿ ಪತ್ರವನ್ನು ನೀಡಿಲ್ಲ ಎಂಬುದು ಇದರರ್ಥ.[ಶೆಣೈ ರಾಜೀನಾಮೆ : ಮೌನ ಮುರಿದ ನಾಯಕ್]

ಮೊದಲ ಪತ್ರದ ಸಾರಾಂಶ:
ನಾನು ಸತತವಾಗಿ ಅಕ್ರಮ ಮದ್ಯವನ್ನು ನಿರ್ಮೂಲನ ಮಾಡುವ ಬಗ್ಗೆ ನನ್ನ ಉಪ ವಿಭಾಗದಲ್ಲಿ ಕಟ್ಟು ನಿಟ್ಟಿನ ಕ್ರಮ ಜರುಗಿಸಿರುತ್ತೇನೆ, ಆದರೆ, ಕೂಡ್ಲಿಗಿಯಲ್ಲಿನ ಲಿಕ್ಕರ್ ಲಾಬಿ ಎಷ್ಟೊಂದು ಪ್ರಬಲವಾಗಿದೆ ಎಂದರೆ ಕೂಡ್ಲಿಗಿ ಪೊಲೀಸು ಠಾಣೆಯ ಸಿಬ್ಬಂದಿಗಳು, ಪಿಎಸ್ ಐ ಹಾಗೂ ಸಿಪಿಐಯವರು ಈ ಲಾಬಿಗೆ ತಲೆಬಾಗಿರುತ್ತಾರೆ. [ರಾಜೀನಾಮೆ ಅಂಗೀಕರಿಸಬಾರದಿತ್ತು : ತಾಯಿ]

ಈ ಲಿಕ್ಕರ್ ಲಾಬಿಯು ತೆರೆಮರೆಯಲ್ಲಿ ನಿಂತು ಈ ದಿನ ಕೂಡ್ಲಿಗಿಯ ಕೆಲವಿ ರಾಜಕೀಯ ಪ್ರಭಾವಿ ವ್ಯಕ್ತಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ನನ್ನ ವಿರುದ್ಧ ಪ್ರತಿಭಟನೆ ಮಾಡಿರುತ್ತಾರೆ. ಇದಕ್ಕೆ ಪಿಎಸ್ ಐ ಹಾಗೂ ಸಿಪಿಐಯವರ ಕುಮ್ಮಕ್ಕು ಇದೆ. ಸದರಿ ಪ್ರತಿಭಟನೆಯನ್ನು ತಡೆಯುವಲ್ಲಿ ನಾನು ಪೂರ್ತಿ ನಿಷ್ಕ್ರಿಯಳಾಗಿರುತ್ತೇನೆ. ಈ ಬಗ್ಗೆ ಇಲಾಖೆ ಯಾವ ಶಿಸ್ತಿನ ಕ್ರಮಕ್ಕೂ ನಾನು ಬದ್ಧಳಾಗಿದ್ದೇನೆ, ನಡೆದಿರುವ ಘಟನೆಗಳಿಂದ ನೊಂದು ರಾಜೀನಾಮೆ ನೀಡುತ್ತಿದ್ದೇನೆ. [ರಾಜೀನಾಮೆ ವಿವಾದ, ಉತ್ತರಗಳು ಬೇಕಾಗಿವೆ]

ಎರಡನೇ ಪತ್ರದ ಸಾರಾಂಶ:
ಎರಡನೇ ಪತ್ರದಲ್ಲಿ ವೈಯಕ್ತಿಕ ಕಾರಣಗಳಿಂದ ಈ ಇಲಾಖೆಯಲ್ಲಿ ನನಗೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಕಾರಣ ನಾನು ನನ್ನ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬರೆಯಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
What is their Anupama Shenoy resignation letter Kudligi DYSP.She had tendered her resignation on June 4 after accusing Labour Minister P T Parameshwar Naik, also the district in-charge minister, of interfering in her work.
Please Wait while comments are loading...