ಮಳೆ.. ಮಳೆ.. ಬೆಂಗಳೂರಿನ ಮಳೆ ಬಗ್ಗೆ ಜನ ಏನಂದ್ರು?

ಮಳೆ.. ಮಳೆ.. ಬೆಂಗಳೂರಿನಲ್ಲಿ ಭರ್ಜರಿ ಮಳೆ ಬಂದಿದೆ. ಬೆಂಗಳೂರಿನ ಜನರಿಗೆ ಹಲವು ದಿನಗಳ ನಂತರ ಭರ್ಜರಿ ಮಳೆ ಖುಷಿ ಕೊಟ್ಟಿದೆ. ಬೆಂಗಳೂರು ನಗರದ ಹಲವು ಏರಿಯಾದ ಜನರಿಗೆ ಮಳೆಯ ಸಿಂಚನ ತೃಪ್ತಿ ಕೊಟ್ಟಿದೆ. ಅದ್ರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಟ್ರೆಂಡ್ ಕ್ರಿಯೇಟ್ ಆಗಿದೆ. ಹಾಗಾದ್ರೆ ಬೆಂಗಳೂರಿನ ಮಳೆಯ ಬಗ್ಗೆ ಜನರು ಏನಂದ್ರು? ಮಳೆ ವಿಡಿಯೋಗಳು ಹೇಗಿವೆ? ಬೆಂಗಳೂರು ಮಳೆಯ ಇಂಚಿಂಚು ಮಾಹಿತಿ ತಿಳಿಯೋಣ & ಮಳೆ ವಿಡಿಯೋಗಳನ್ನ ನೋಡಲು ಮುಂದೆ ಓದೋಣ ಬನ್ನಿ.

ಕರ್ನಾಟಕದ ಕರಾವಳಿ ಜಿಲ್ಲೆಯು ಸೇರಿದಂತೆ ಬೆಂಗಳೂರು ನಗರ & ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಅದ್ರಲ್ಲೂ ಬೆಂಗಳೂರಿನ ಮಳೆ ಜನರಿಗೆ ಭಾರಿ ರಿಲೀಫ್ ಅನ್ನ ನೀಡಿದೆ. ಮಳೆ ವಿಡಿಯೋಗಳನ್ನ ನೋಡಲು ಮುಂದೆ ಓದಿ.

Heavy Rain Gives Big Relief To Karnataka Capital Bengaluru City Residents

ಮಳೆ ಎಲ್ಲೆಲ್ಲಿ ಭರ್ಜರಿಯಾಗಿ ಬಿತ್ತು?

ಬೆಂಗಳೂರು ನಗರದ ಹೃದಯ ಎಂದು ಕರೆಸಿಕೊಳ್ಳುವ ವಿಧಾನಸೌಧ ಸುತ್ತಮುತ್ತಲ ಭಾಗ, ಮೆಜೆಸ್ಟಿಕ್ ಪ್ರದೇಶ, ಮಡಿವಾಳ, ಎಚ್‌ಎಸ್‌ಆರ್ ಲೇಔಟ್, ಬೊಮ್ಮನಹಳ್ಳಿ, ಬಿಟಿಎಂ & ಬನಶಂಕರಿ ಬಡಾವಣೆ ಸುತ್ತಮುತ್ತ ಭರ್ಜರಿ ಮಳೆ ಬಂದಿದೆ. ಇದರ ಜೊತೆಗೆ ರಾಜಾಜಿನಗರ ಹಾಗೂ ಮಾಗಡಿ ರಸ್ತೆಯಲ್ಲೂ ಮಳೆ ಬಂದಿದೆ. ಇನ್ನು ಹೆಬ್ಬಾಳ ಸುತ್ತಮುತ್ತ, ಮಲ್ಲೇಶ್ವರಂ ಕೂಡ ಭರ್ಜರಿ ಮಳೆಯ ಸಿಂಚನ ಪಡೆಯಿತು. ಈ ನಡುವೆ ಬೆಂಗಳೂರು & ತಮಿಳುನಾಡು ಕೂಡಿಸುವ ಹೊಸೂರು ರಸ್ತೆಯ ಸುತ್ತಮುತ್ತಲ ಪ್ರದೇಶದಲ್ಲೂ ಭಾರಿ ಮಳೆಯಾಗಿದೆ. ನಮ್ಮ ಬೆಂಗಳೂರಿನ ಮಳೆಯ ವಿಡಿಯೋ ನೋಡಲು ಮುಂದೆ ಓದಿ.

ಮಳೆಯಿಂದ ಕುಣಿದಾಡಿದ ಜನರು

ಮಳೆ.. ಮಳೆ.. ಹೀಗೆ ಬಿರು ಬೇಸಿಗೆ ನಡುವೆ ಇದೀಗ ಕರ್ನಾಟಕದ ಹಲವು ಜಿಲ್ಲೆಗಳಲ್ಲೀಗ ಭರ್ಜರಿ ಮಳೆ ಶುರುವಾಗಿದೆ. ಹೀಗಿದ್ದರೂ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅಬ್ಬರ ಶುರುವಾಗಿಲ್ಲ ಎಂಬ ಬೇಸರ ಮತ್ತು ಆತಂಕ ಜನರನ್ನು ಕಾಡುತ್ತಿತ್ತು. ಅದರಲ್ಲೂ ಬೆಂಗಳೂರಿನ ಮಂದಿ ಬೇಸಿಗೆ ಬಿಸಿಲಿಗೆ ನರಳಿದ್ದು, ಮುಂದೆ ಏನು ಮಾಡುವುದು? ಅಂತಾ ಚಿಂತೆಯಲ್ಲಿದ್ದರು. ಆದರೆ ಈಗ ಭಾರಿ ಮಳೆ ಶುರುವಾಗಿರುವ ಕಾರಣಕ್ಕೆ ನಿಟ್ಟುಸಿರು ಕೂಡ ಬಿಟ್ಟಿದ್ದಾರೆ.

Heavy Rain Gives Big Relief To Karnataka Capital Bengaluru City Residents

ಒಟ್ನಲ್ಲಿ ಬೆಂಗಳೂರಿನ ಮಳೆ ಜನರಿಗೆ ದೊಡ್ಡ ನೆಮ್ಮದಿ ನೀಡಿದೆ. ಹಾಗೇ ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ವಾತಾವರಣ ಇರಲಿದ್ದು, ಮಳೆಯೂ ಬರಲಿದೆ ಎಂಬ ಸೂಚನೆ ಸಿಕ್ಕಿದೆ. ಹೀಗಾಗಿ ಇನ್ನಷ್ಟು ದಿನಗಳ ಕಾಲ ಬೆಂಗಳೂರು ಕೂಲ್ ಕೂಲ್ ಆಗಿರಲಿದೆ ಅಂತಾ, ಹವಾಮಾನ ಇಲಾಖೆ ಮಾಹಿತಿ ಹೊರಹಾಕಿದೆ.

ಕುಡಿಯುವ ನೀರಿಗೂ ತೀವ್ರ ಪರದಾಟ

ರಾಜ್ಯದಲ್ಲಿ ಮಳೆಯ ಕೊರತೆ ಎಂತಹ ಪರಿಸ್ಥಿತಿ ನಿರ್ಮಾಣ ಮಾಡಿತ್ತು ಎಂದರೆ, ರಾಜ್ಯದಲ್ಲಿರುವ ಬಹುತೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿತ್ತು. ಅತಿಹೆಚ್ಚು ಮಳೆಯಾಗುವ ಮಲೆನಾಡು ಪ್ರದೇಶದಿಂದ ಹಿಡಿದು, ಕರಾವಳಿ ಜಿಲ್ಲೆಗಳ ತನಕ ಇದೇ ಪರಿಸ್ಥಿತಿ ಇತ್ತು. ಹಾಗೂ ಬಯಲು ಸೀಮೆ ಪ್ರದೇಶದಲ್ಲಿ ಇನ್ನೂ ಭಯಾನಕ ಪರಿಸ್ಥಿತಿ ಇತ್ತು. ಹೀಗೆ ಕುಡಿಯುವ ನೀರಿಗಾಗಿ ಜನರು ಪರದಾಡಿದ್ದರು. ರಾಜ್ಯದಲ್ಲಿನ ಬಹುತೇಕ ಕೆರೆಗಳು & ಡ್ಯಾಂಗಳು ಒಣಗಿ ಹೋಗಿರುವಾಗ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಮುಂದಿನ ಕೆಲ ದಿನಗಳ ಕಾಲ ಇದೇ ರೀತಿ ಮಳೆ ಬೀಳುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+