Namma Metro Pink Line: ಯಾವಾಗ ಪೂರ್ಣಗೊಳ್ಳಲಿದೆ ಈ ಮಾರ್ಗದ ಸುರಂಗ ಕಾಮಗಾರಿ?
Namma Metro Pink Line: ಬೆಂಗಳೂರು ನಮ್ಮ ಮೆಟ್ರೋದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಲೇ ಇರುತ್ತವೆ. ಹಾಗೆಯೇ ಇದೀಗ ಬಹುನಿರೀಕ್ಷಿತ ಪಿಂಕ್ ಲೈನ್ ಮಾರ್ಗದ ಸುರಂಗ ಮೆಟ್ರೋ ಕಾಮಗಾರಿ ಯಾವಾಗ ಮುಕ್ತಾಯಗೊಳ್ಳಲಿ ಎನ್ನುವ ಮಹತ್ವದ ಮಾಹಿತಿ ಲಭ್ಯವಾಗಿದೆ.
ಬಿಎಂಆರ್‌ಸಿಎಲ್ ಪ್ರಾರಂಭಿಸಿರುವ ಗುಲಾಬಿ ಮಾರ್ಗದ 13 ಕಿ.ಮೀ. ಸುರಂಗ ಮಾರ್ಗವು ಈಗಾಗಲೇ ಮುಗಿಯುವ ಹಂತಕ್ಕೆ ಬಂದು ತತಲುಪಿದೆ. ಇದು ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಹಾಗಾದರೆ ಇದು ಪೂರ್ಣಗೊಂಡರೆ ಏಲೆಲ್ಲ ಪ್ರಯೋಜಗಳಾಗಲಿದೆ ಹಾಗೂ ಇದಕ್ಕೆ ತಗುಲಿದ ವೆಚ್ಚ ಎಷ್ಟು ಎಂದು ಇಲ್ಲಿ ತಿಳಿಯಿರಿ.

ನಮ್ಮ ಮೆಟ್ರೋ ಪಿಂಕ್ ಮಾರ್ಗದಲ್ಲಿ ಭೂಗತ ಸುರಂಗ ಮಾರ್ಗ ಕಾಮಗಾರಿಯು ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದು ತಲುಪಿದ್ದು, ಇದು ಬನ್ನೇರುಘಟ್ಟ ರಸ್ತೆಯಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸುವ ಪಿಂಕ್ ಲೇನ್ ಸುರಂಗ ಮಾರ್ಗ ಆಗಿದೆ. ಇದೀಗ ಸಿವಿಲ್ ಕಾಮಗಾರಿ, ಟ್ರ್ಯಾಕ್ ಹಾಕುವ ಕಾಮಗಾರಿ ನಡೆಯುತ್ತಿದೆ. ಇನ್ನು ಈ ಕಾಮಗಾರಿ ಇದೇ ವರ್ಷದಲ್ಲಿ ಮುಗಿಯಲಿದೆ ಎಂದು ತಿಳಿದುಬಂದಿದೆ.
ಇನ್ನು ಈ ಮಾರ್ಗ 21.26 ಕಿ.ಮೀ ಉದ್ದ ಆಗಿದ್ದು, ಸುಮಾರು 13 ಕಿಲೋ ಮೀಟರ್ ಭೂಗತ ಕಾಮಗಾರಿಯಲ್ಲೇ ರೈಲು ಸಂಚಾರ ಮಾಡುವಂತೆ ಸುರಂಗ ಕೊರೆಯಲಾಗುತ್ತಿದೆ. 7.5 ಕಿಲೋ ಮೀಟರ್ ಎತ್ತರದ ಮಾರ್ಗವನ್ನು ಹೊಂದಿರುವ ಈ ಪಿಂಕ್ ಮಾರ್ಗದಲ್ಲಿ 18 ನಿಲ್ದಾಣಗಳಿವೆ.
ಪಿಂಕ್ ಮಾರ್ಗವನ್ನು ಮೂರು ವಿಭಾಗಗಳಾಗಿ ವಿಂಗಡಣೆ ಮಾಡಲಾಗಿದೆ. ಮೊದಲ ಎರಡು ಹಂತದಲ್ಲಿ ಸುರಂಗ ಕಾಮಗಾರಿ ಮುಗಿದಿದ್ದು, ಮೂರನೇ ಹಂತದಲ್ಲಿ ಸುರಂಗ ಕೊರೆಯುವ ಕಾರ್ಯವೂ ಅಂತಿಮ ಹಂತಕ್ಕೆ ಬಂದು ತಲುಪಿದೆ. ಸದ್ಯ ಇದೀಗ ಶೇಕಡಾ 94ರಷ್ಟು ಕಾಮಗಾರಿ ಮುಕ್ತಾಯವಾಗಿದೆ. ಈ ಹಿಂದೆ ಕೆ.ಜಿ.ಹಳ್ಳಿ ಮತ್ತು ನಾಗವಾರ ನಡುವೆ 935 ಮೀಟರ್ ಸುರಂಗ ಕಾರ್ಯವು ಸುಧಾರಿತ ಟಿಬಿಎಂ ಯಂತ್ರ ಭದ್ರಾ ಸಹಾಯದಿಂದ ಕೊರೆಯಲಾಗಿತ್ತು.
ಇದೀಗ ಪ್ರಸ್ತುತ ಕೊನೆಯ ಹಂತದಲ್ಲಿ ಸುರಂಗ ಕೊರೆಯಲಾಗುತ್ತಿದ್ದು, ಮುಂದಿನ ಅಕ್ಟೋಬರ್ ವೇಳೆ ಕಾರ್ಯ ಮುಗಿಸಿ ಹೊರಬರಲಿದೆ. ಮೆಟ್ರೋ ಮಾರ್ಗದಲ್ಲಿನ ಈ ಸುರಂಗ ಕಾಮಗಾರಿ ಪೂರ್ಣ ಆಗುತ್ತಿದ್ದಂತೆ ಟ್ರ್ಯಾಕ್ ಅಳವಡಿಕೆ ಸೇರಿದಂತೆ ಇನ್ನಿತರ ಸಿವಿಲ್ ಕಾರ್ಯಗಳು ನಡೆಯಲಿವೆ. ಒಟ್ಟಿನಲ್ಲಿ 2024ರ ಅಂತ್ಯದ ವೇಳೆಗೆ ಈ ಗುಲಾಬಿ ಮಾರ್ಗದಲ್ಲಿನ ಟ್ರ್ಯಾಕ್ ಅಳವಡಿಕೆ ಕೆಲಸ ಅಂತಿಮಗೊಂಡು, ಸಿಗ್ನಲಿಂಗ್ ಕೆಲಸ ನಡೆಯುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್‌ನ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.












Click it and Unblock the Notifications