Forest Breathing: ಬೆಂಗಳೂರಿನಲ್ಲಿ ಮರ ತಬ್ಬಿಕೊಳ್ಳಲು ₹1500 ಶುಲ್ಕ ವಿಧಿಸಿದ ಕಂಪನಿ; ನೆಟ್ಟಿಗರು ಏನಂದ್ರು?
ಬೆಂಗಳೂರಿನಲ್ಲಿ ದುಡ್ಡಿದ್ರೆ ಜೀವನ ಎನ್ನುವ ಮಾತಿದೆ. ಆದರೂ ಮರವನ್ನು ತಬ್ಬಿಕೊಳ್ಳಲು ಕಾಸು ಕೊಡಬೇಕು ಎಂದರೆ ವಿಚಿತ್ರ ಅನ್ಸುತ್ತೆ ಅಲ್ವಾ? ಹೌದು, ಬೆಂಗಳೂರು ಮೂಲದ ಕಂಪನಿಯೊಂದು ಮರವನ್ನು ತಬ್ಬಿಕೊಳ್ಳಲುಜಿಎಸ್‌ಟಿ ಸೇರಿ ₹1500 ಶುಲ್ಕ ವಿಧಿಸಿದ್ದು ನೆಟ್ಟಿಗರಿಂದ ಟೀಕೆ ವ್ಯಕ್ತವಾಗುತ್ತಿದೆ.
ಕಬ್ಬನ್ ಪಾರ್ಕ್ ಬೆಂಗಳೂರಿನ ಹೃದಯ ಭಾಗದಲ್ಲಿರುವ ಅತ್ಯಂತ ಪ್ರಸಿದ್ಧ ಸಾರ್ವಜನಿಕ ಉದ್ಯಾನವನ. ಬೆಂಗಳೂರಿನ ಸಾವಿರಾರು ನಿವಾಸಿಗಳು ಇಲ್ಲಿಗೆ ಪ್ರತಿನಿತ್ಯ ಭೇಟಿ ನೀಡುತ್ತಾರೆ. 120 ಹೆಕ್ಟೇರ್ ಇರುವ ಉದ್ಯಾನವನ ಜಾಗಿಂಗ್ ಮಾಡುವವರ ಸ್ವರ್ಗವಾಗಿದೆ. ಉದ್ಯಾನವನದಲ್ಲಿ ಗ್ರಂಥಾಲಯ, ವಸ್ತು ಸಂಗ್ರಹಾಲಯ, ಟೆನ್ನಿಸ್ ಅಕಾಡೆಮಿ ಮತ್ತು ಅನೇಕ ಪ್ರತಿಮೆಗಳನ್ನು ಇಲ್ಲಿ ನೋಡಬಹುದು.

@AJayWhy ಎನ್ನುವ ಎಕ್ಸ್ ಖಾತೆಯ ಬಳಕೆದಾರರು ಬೆಂಗಳೂರಿನಲ್ಲಿರುವ ಕಂಪನಿಯೊಂದು ಆಯೋಜಿಸಿದ ಕಾರ್ಯಕ್ರಮದ ವೆಬ್‌ಸೈಟ್‌ನಿಂದ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದ್ದು, ಅನೇಕ ಬಳಕೆದಾರರ ಗಮನ ಸೆಳೆದಿದೆ.
Babe, wake up! There's a new scam in the market. pic.twitter.com/UO4zrJgiUa
— jolad rotti (@AJayAWhy) April 16, 2024
ಕಬ್ಬನ್‌ಪಾರ್ಕ್‌ನಲ್ಲಿ ಮರ ತಬ್ಬಿಕೊಳ್ಳಲು ಕಾಸು
"ದಿ ಹೀಲಿಂಗ್ ಪವರ್ ಆಫ್ ಫಾರೆಸ್ಟ್", "ಅರಣ್ಯ ಸ್ನಾನದ ಅನುಭವ" ಎನ್ನುವ ಕಾರ್ಯಕ್ರಮದ ಅಡಿಯಲ್ಲಿ ಕಬ್ಬನ್ ಪಾರ್ಕ್‌ನಲ್ಲಿ ಮರ ತಬ್ಬಿಕೊಳ್ಳಲು ರೂ. 1,500.00 (ಜಿಎಸ್‌ಟಿ ಸೇರಿದಂತೆ) ವಿಧಿಸಲಾಗಿದೆ. ವಿಶೇಷ ಎಂದರೆ ಅಂದರೆ ಕಾರ್ಯಕ್ರಮದ ಪಾಸುಗಳು ಎಲ್ಲಾ ಮಾರಾಟವಾಗಿವೆ.
ಬಳಕೆದಾರರು ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದು, "ಬೇಬ್, ಎದ್ದೇಳಿ! ಮಾರುಕಟ್ಟೆಯಲ್ಲಿ ಹೊಸ ಹಗರಣ ಬಂದಿದೆ." ಎಂದು ಶೀರ್ಷಿಕೆ ನೀಡಿದ್ದಾರೆ.
ಎರಡೂ ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ
ಪೋಸ್ಟ್ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿತು ಮತ್ತು ಕಂಪನಿಗಳು ಈಗ ಯಾವುದಕ್ಕೆ ಶುಲ್ಕ ವಿಧಿಸುತ್ತವೆ ಮತ್ತು ಜನರು ಯಾವುದಕ್ಕೆ ಪಾವತಿಸಲು ಸಿದ್ಧರಾಗಿದ್ದಾರೆ ಎಂಬುದರ ಕುರಿತು ಚರ್ಚೆಯನ್ನು ಹುಟ್ಟುಹಾಕಿತು.
ಬೆಂಗಳೂರಿನ ಟೆಕ್ಕಿಗಳು ಆಧ್ಯಾತ್ಮಿಕತೆಯತ್ತ ತಮ್ಮ ದಾರಿಯನ್ನು ಖರೀದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಒಬ್ಬ ಬಳಕೆದಾರನು "ನಿಮ್ಮ ದೈನಂದಿನ ಜೀವನವು ಕಚೇರಿ ಮತ್ತು ಮನೆಯ ಗೋಡೆಗಳ ಆಚೆಗೆ ಕಾಣದಿದ್ದಾಗ ಕಬ್ಬನ್ ಪಾರ್ಕ್ ಖಂಡಿತವಾಗಿಯೂ ಕಾಡಿನಂತೆ ಭಾಸವಾಗುತ್ತದೆ" ಎಂದು ಹೇಳಿದರು.
ಏನಿದು ಅರಣ್ಯ ಸ್ನಾನ?
ಶಿನ್ರಿನ್-ಯೋಕು (ಅರಣ್ಯ ಸ್ನಾನ ಅಥವಾ ಕಾಡಿನ ವಾತಾವರಣದಲ್ಲಿ ಕಾಲ ಕಳೆಯುವುದು) 80 ರ ದಶಕದಲ್ಲಿ ಜಪಾನ್‌ನಲ್ಲಿ ಆರಂಭವಾದ ಪರಿಸರ ಚಿಕಿತ್ಸೆಯ ಅಭ್ಯಾಸವಾಗಿದೆ.
ಇದು ಮಾನಸಿಕ ಮತ್ತು ಶಾರೀರಿಕ ವ್ಯಾಯಾಮವಾಗಿದ್ದು, ಪ್ರಕೃತಿಯ ಹತ್ತಿರ ಕಳೆಯುವ ಸಮಯವು ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದು ಎಂಬ ಮೂಲ ತತ್ವವನ್ನು ಆಧರಿಸಿದೆ. ನೈಸರ್ಗಿಕ ಪರಿಸರದಲ್ಲಿ ಸರಳವಾದ ನಡಿಗೆಯಿಂದ ಹಿಡಿದು ಹಲವು ಗಂಟೆಗಳ ಕಾಲ ನಡೆಯುವ ಧ್ಯಾನದ ವಿಹಾರದವರೆಗಿನ ಬಹು ಅಭ್ಯಾಸಗಳನ್ನು ಈ ಕಾರ್ಯಕ್ರಮದಲ್ಲಿ ನೋಡಬಹುದು.
ಆದರೆ ಬೆಂಗಳೂರಿನಲ್ಲಿ ಈ ರೀತಿಯ ಕಾರ್ಯಕ್ರಮಕ್ಕೆ ಜನ ಕಾಸು ಕೊಡುತ್ತಾರೆ ಎನ್ನುವುದು. ಮತ್ತು ಕೆಲವು ಕಂಪನಿಗಳು ಇಂತಹ ಕಾರ್ಯಕ್ರಮ ಆಯೋಜಿಸಿ ದುಡ್ಡು ಮಾಡುತ್ತಿವೆ ಎನ್ನುವುದು ಚರ್ಚೆಯನ್ನು ಹುಟ್ಟುಹಾಕಿದೆ.












Click it and Unblock the Notifications