Rain Alert: ಮಳೆ.. ಮಳೆ.. ಅಡಕೆ ಬೆಳೆದ ರೈತರ ತೋಟಗಳಿಗೆ ಭಾರಿ ನೀರು!

ಮಳೆ ಇಲ್ಲದೆ ಕನ್ನಡಿಗರು ನರಳಾಡಿ ಹೋಗಿದ್ದರು, ಅದ್ರಲ್ಲೂ ಅಡಕೆ ತೋಟ ಕಟ್ಟಿದ್ದವರಿಗೆ ಮಳೆಯ ಕೊರತೆ ಚಿಂತೆ ತರಿಸಿತ್ತು. ಯಾಕಂದ್ರೆ ಮಳೆ ಇಲ್ಲದೆ ಅಡಕೆ ತೋಟಗಳು & ತೆಂಗಿನ ತೋಟಗಳು ಒಣಗುತ್ತಿದ್ದವು. ಇದೇ ಕಾರಣಕ್ಕೆ ರೈತರು ನೀರಿನ ಟ್ಯಾಂಕರ್ ಮಾಲೀಕರ ಬಳಿ ಮನವಿ ಮಾಡಿ, ಸಾವಿರ ಸಾವಿರ ರೂಪಾಯಿ ಹಣ ಕೊಟ್ಟು ತೋಟ ಉಳಿಸಿಕೊಳ್ಳುತ್ತಿದ್ದರು. ಹೀಗಿದ್ದಾಗಲೇ ಕರ್ನಾಟಕದಲ್ಲಿ ಭರ್ಜರಿ ಮಳೆ ಬಂದು, ಅಡಕೆ & ತೆಂಗಿನ ತೋಟಕ್ಕೂ ಭಾರಿ ಪ್ರಮಾಣದಲ್ಲಿ ಮಳೆ ನೀರು ಹರಿದು ಬಂದಿದೆ.

ಮಳೆ.. ಮಳೆ.. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಈ ಹಿನ್ನೆಲೆ ಕನ್ನಡ ನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಭಾರಿ ನೀರು ಹರಿದು ಬಂದಿದೆ. ಈ ಪೈಕಿ ಅಡಕೆ ತೋಟ ಇರುವ ಬಹುತೇಕ ಜಿಲ್ಲೆಗಳಿಗೂ ಮಳೆ ಬಂದಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿದಂತೆ ಅಡಕೆ ತೋಟಗಳು ಒಣಗುತ್ತಿದ್ದ ಪ್ರದೇಶದಲ್ಲಿ ಈಗ ಹೊಸ ಮನ್ವಂತರ ಶುರುವಾಗಿದೆ. ಅದರಲ್ಲೂ ಇನ್ನೇನು ತಮ್ಮ ಅಡಕೆ ತೋಟಗಳು ಪೂರ್ತಿ ಒಣಗಿ ಹೋದವು ಅಂತಾ ತಲೆಮೇಲೆ ಕೈಹೊತ್ತು ಕುಳಿತ ರೈತರು ನೆಮ್ಮದಿಯ ನಿಟ್ಟುಸಿರನ್ನ ಬಿಟ್ಟಿದ್ದಾರೆ.

Heavy Rain Gives Big Relief To Karnataka Arecanut Farmers

ಮಳೆ ಬರದೇ ಇದ್ದಿದ್ದರೆ...

ಕರ್ನಾಟಕದ ರೈತರು ಬರದಿಂದ ಬೆಳೆ ನಷ್ಟ ಅನುಭವಿಸಿದ್ದು, ಈಗ ತೋಟಗಾರಿಕೆ ಬೆಳೆಗಳನ್ನೂ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ನೀರಿನ ಸಮಸ್ಯೆ ಬಿಗಡಾಯಿಸಿದ್ದು ತೋಟಕ್ಕೂ ಟ್ಯಾಂಕರ್‌ ಮೊರೆ ಹೋಗಿದ್ದರು. ಕಳೆದ ಎರಡು ಮೂರು ವರ್ಷದಿಂದ ನೀರಿನ ಸಮಸ್ಯೆ ಇರಲಿಲ್ಲ. ಉತ್ತಮ ಮಳೆಯಾದ ಕಾರಣ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕರೆ & ಕಟ್ಟೆಗಳು ತುಂಬಿ ತುಳುಕುತ್ತಿದ್ದವು.

ಆದರೆ ಈಗ ಪರಿಸ್ಥಿತಿ ಬಿಗಡಾಯಿಸಿ ಹೋಗಿದ್ದು, ಮಳೆ ಇಲ್ಲದೆ ಭೀಕರ ಬರ ಎದುರಾಗಿದೆ. ಇದೇ ಕಾರಣಕ್ಕೆ, ಬೆಳೆ ಉಳಿಸಿಕೊಳ್ಳಲು ಅಡಕೆ ಬೆಳೆಗಾರರು ಸಾವಿರ ಸಾವಿರ ಕೊಟ್ಟು ಟ್ಯಾಂಕರ್ ನೀರು ಹಾಕಿಸಿಕೊಳ್ಳುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಇದೀಗ ಮಳೆರಾಯ ಕರುಣೆ ತೋರಿಸಿದ್ದು ಭರ್ಜರಿ ಮಳೆಯಿಂದ ಅಡಕೆ & ತೆಂಗಿನ ತೋಟಗಳು ಇದೀಗ ಒದ್ದೆ ಆಗಿವೆ. ರೈತರು ತಮ್ಮ ಬೆಳೆಯನ್ನ ಉಳಿಸಿಕೊಂಡ ಖುಷಿಯಲ್ಲಿ ಕುಣಿದಾಡಿದ್ದಾರೆ.

1000 ರೂಪಾಯಿ ಒಂದು ಟ್ಯಾಂಕರ್‌ ನೀರಿಗೆ

ಅಡಕೆ ಬೆಳೆಗಾರರು ತಮ್ಮ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರು ಹಾಕಿಸಿಕೊಳ್ಳುತ್ತಿದ್ದರು ಹೀಗೆ ನೀರು ಹಾಕಿಸಿಕೊಳ್ಳಲು ಭರ್ಜರಿ 1000 ರೂಪಾಯಿ ಪ್ರತಿ ಟ್ಯಾಂಕರ್‌ಗೆ ಕೊಡಬೇಕಾಗಿ ಬಂದಿತ್ತು. ಒಂದು ಎಕರೆ ಅಡಕೆ ತೋಟ ಇದ್ದರೆ ಭರ್ಜರಿ 5 ಟ್ಯಾಂಕರ್ ನೀರು ಒಮ್ಮೆಗೆ ಬೇಕಾಗಿತ್ತು. ಈ ರೀತಿ ತಿಂಗಳಿಗೆ ಸುಮಾರು 4 ಅಥವಾ 5 ಬಾರಿ ಟ್ಯಾಂಕರ್ ನೀರು ಹಾಕಿಸಬೇಕಿತ್ತು. ಈ ಮೂಲಕ ರೈತ, ತನ್ನ ತೋಟ ಉಳಿಸಿಕೊಳ್ಳಲು ಪ್ರತಿ ತಿಂಗಳು 25 ರಿಂದ 30 ಸಾವಿರ ರೂಪಾಯಿ ಖರ್ಚು ಪ್ರತಿ ಎಕರೆಗೆ ಮಾಡಬೇಕಿತ್ತು. ಅಡಕೆ ಬೆಳೆದ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮಳೆರಾಯ ಕೈಹಿಡಿದಿದ್ದಾನೆ.

ಮಳೆಯಿಂದ ಸಿಕ್ಕಿದೆ ಬಿಗ್ ರಿಲೀಫ್!

ಹೀಗೆ ಕರ್ನಾಟಕದ ರೈತರು ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಗಳನ್ನ ಎದುರಿಸುತ್ತಿದ್ದು, ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕಲು ಪ್ರಯತ್ನ ಮುಂದುವರಿಸಿದ್ದಾರೆ. ಅದ್ರಲ್ಲೂ ಅಡಕೆ ಬೆಳೆಯುವ ರೈತರ ಬಗ್ಗೆ ಊಹಾಪೋಹ ಹೆಚ್ಚಾಗಿದೆ. ಅದರಲ್ಲೂ, ಅಡಕೆ ಬೆಳೆಯುವ ರೈತರಿಗೆ ಲಕ್ಷ ಲಕ್ಷ ಲಾಭ ಬರುತ್ತೆ ಅನ್ನೋ ನಂಬಿಕೆ ಕೂಡ ಇದೆ. ಆದ್ರೆ ಅಡಕೆ ಬೆಳೆಯು ಒಲಿದರೆ ಕೈತುಂಬಾ ಕಾಸು ಬರುತ್ತೆ, ಅಕಸ್ಮಾತ್ ಕೈಕೊಟ್ಟರೆ ಅಡಕೆ ಬೆಳೆದ ರೈತರ ಸ್ಥಿತಿ ಸೀದಾ ಸೀದಾ ಬೀದಿಗೆ ಬಿದ್ದಂತೆ ಆಗುತ್ತೆ. ಹೀಗೆ ನೂರಾರು ಕಷ್ಟ ಎದುರಿಸುತ್ತಿರುವ ಅಡಕೆ ಬೆಳೆಗಾರರು ಪರದಾಡುತ್ತಿದ್ದು, ಅವರಿಗೆ ಮಳೆ ಕೊರತೆ ಆತಂಕ ಮೂಡಿಸಿತ್ತು. ಅಲ್ಲದೆ ತಮ್ಮ ಅಡಕೆ ತೋಟ ಉಳಿಸಿಕೊಳ್ಳುವುದೇ ಸವಾಲಾಗಿ, ಪರದಾಟ ಮುಂದುವರಿದಿತ್ತು. ಆದರೆ ಇದೀಗ ಬಿದ್ದಿರುವ ಮಳೆ ಅಡಕೆ ಮತ್ತು ತೆಂಗು ಬೆಳೆದಿದ್ದ ರೈತರಿಗೆ ಬಿಗ್ ರಿಲೀಫ್ ನೀಡಿದೆ.

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಕೂಡ ಮಳೆರಾಯನ ಅಬ್ಬರ ಮುಂದುವರಿದಿದ್ದು, ಈ ಪೈಕಿ ಕನ್ನಡಿಗರ ಜೀವನದಿ ಕಾವೇರಿ ತಾಯಿ ತವರು, ಕೊಡಗು ಜಿಲ್ಲೆಯಲ್ಲಿ ವರುಣ ತನ್ನ ಅಬ್ಬರ ಮುಂದುವರಿಸಿದ್ದಾನೆ. ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿದ್ದು, ಜನರಿಗೂ ಫುಲ್ ಖುಷಿಯಾಗುತ್ತಿದೆ. ಇನ್ನು ಮತ್ತೊಂದು ಕಡೆ ವಿದ್ಯಾಕಾಶಿ ಧಾರವಾಡ & ಹುಬ್ಬಳ್ಳಿಗೂ ಭಾರಿ ಮಳೆಯ ಸಿಂಚನವಾಗುತ್ತಿದೆ. ನಿನ್ನೆ ಕೂಡ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ ಆದರೆ ಬೆಂಗಳೂರಿನ ಬಗ್ಗೆಯೇ ಚಿಂತೆ ಶುರುವಾಗಿದೆ. ಹಾಗಾದರೆ, ಬೆಂಗಳೂರಿನಲ್ಲಿ ಭರ್ಜರಿ ಮಳೆ ಸುರಿಯುವುದು ಯಾವಾಗ? ಮುಂದೆ ಓದಿ.

2023 ರಲ್ಲಿ ಭೀಕರ ಬರ ಬಂದಿತ್ತು

ಮುಂಗಾರು ಮಳೆ ಕೈಕೊಟ್ಟ ಕಾರಣ 2023 ರಲ್ಲಿ ಬರದ ಬೇಗೆಯಲ್ಲಿ ಕರ್ನಾಟಕ ಬೆಂದು ಹೋಗಿ ಜನ ಪರದಾಡಿದ್ದಾರೆ. ಇದೇ ಕಾರಣಕ್ಕೆ ಈ ಬಾರಿಯ ಬೇಸಿಗೆಯಲ್ಲಿ ಪರದಾಟ ಶುರುವಾಗಿ ಹನಿ ಹನಿ ನೀರು ಬಂಗಾರವಾಗಿದೆ. 2024 ಬೇಸಿಗೆ ಆರಂಭಕ್ಕೆ ಮೊದಲೇ, ತಲೆನೋವು ಶುರುವಾಗಿತ್ತು. ಕುಡಿವ ನೀರು ಒದಗಿಸಲು ರಾಜ್ಯ ಸರ್ಕಾರ ಪರದಾಡುತ್ತಿದೆ. ಈ ಸಮಯದಲ್ಲೇ ನಮ್ಮ ರಾಜ್ಯದ ಹಲವು ಪ್ರದೇಶದಲ್ಲಿ ಟ್ಯಾಂಕರ್ ಮಾಫಿಯಾ ಕೂಡ ಶುರುವಾಗಿದೆ ಹೀಗಿದ್ದಾಗ ಮಳೆರಾಯ ಕೂಡ ಕನ್ನಡಗರ ಮೇಲೆ ಕರುಣೆ ತೋರಿಸಿ ಮಳೆ ಬರಿಸಿದ್ದಾನೆ. ಆದರೆ ಈಗಿನ ಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಭರ್ಜರಿ ಮಳೆ ಆಗಬೇಕಿದೆ. ಇಲ್ಲವಾದರೆ ಬೆಂಗಳೂರಿನಲ್ಲಿ ಪರದಾಟ ತೀವ್ರವಾಗಲಿದೆ.

ಗದ್ದೆ, ಹೊಲಗಳಿಗೆ ಹೊಸ ಕಳೆ!

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಫೆಬ್ರವರಿ & ಮಾರ್ಚ್ ತಿಂಗಳಲ್ಲಿ ಭಾರಿ ಬಿಸಿಲಿನಿಂದ, ಜನರು ಬೆಚ್ಚಿಬಿದ್ದಿದ್ದರು. ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ ಭಾರಿ ಬಿಸಿಲು ಸಮಸ್ಯೆ ತಂದೊಡ್ಡಿತ್ತು. ಆದರೆ ಕಳೆದ ವಾರ ಪೂರ್ತಿ ವರುಣದೇವ ಒಂದಷ್ಟು ಕರುಣೆ ತೋರಿಸಿದ್ದ. ಈ ಹಿನ್ನೆಲೆಯಲ್ಲಿ ಜನರು ನಿಟ್ಟುಸಿರು ಬಿಟ್ಟರು. ಆದ್ರೆ ಈ ವಾರ ಮತ್ತೆ ಮಳೆ ಕೈಕೊಟ್ಟಿದೆ. ಹೀಗಿದ್ದರೂ ಒಂದಷ್ಟು ಖುಷಿಯಾಗಿರುವ ರೈತರು ಮುಂದಿನ ದಿನಗಳಲ್ಲಿ ಮತ್ತೆ ಮಳೆರಾಯ ಕರ್ನಾಟಕದಲ್ಲಿ ಅಬ್ಬರಿಸಲಿದ್ದಾನೆ ಎಂದು ಕಾಯುತ್ತಿದ್ದಾರೆ. ಹೀಗಾಗಿ ಶೀಘ್ರದಲ್ಲಿಯೇ ಗುಡ್ ನ್ಯೂಸ್ ಸಿಗುವ ನಿರೀಕ್ಷೆ ಕೂಡ ದಟ್ಟವಾಗಿದೆ.

ಈ ಬಾರಿ ಭೀಕರ ಬರ

4-5 ವರ್ಷದಿಂದ ಬೆಂಗಳೂರು & ಕರ್ನಾಟಕದ ಜನರು, ಭಾರಿ ಮಳೆಗೆ ಬೆಚ್ಚಿ ಬಿದ್ದಿದ್ದರು. ತಗ್ಗು ಪ್ರದೇಶದ ಜನಕ್ಕೆ ಮಳೆ ನೀರು ಸಾಕಷ್ಟು ಸಮಸ್ಯೆ ನೀಡಿತ್ತು. ಆದ್ರೂ ಕಳೆದ ವರ್ಷ ಮಳೆ ನಾಪತ್ತೆ ಆಗಿತ್ತು. ಬೇಸಿಗೆ ಸಮಯದಲ್ಲಿ ಬಿದ್ದಿದ್ದ ಒಂದೆರಡು ಮಳೆ ಮಾತ್ರ ಕರ್ನಾಟಕಕ್ಕೆ ತಂಪೆರದಿತ್ತು. ಅದನ್ನ ಬಿಟ್ಟು ಮುಂಗಾರು ಸಮಯ ಜೂನ್ ತಿಂಗಳಲ್ಲೇ ಕರ್ನಾಟಕದಲ್ಲಿ ಮಳೆ ಕೊರತೆ ಆತಂಕ ಹುಟ್ಟಿಸಿತ್ತು. ಇದೀಗ ಕರ್ನಾಟಕದಲ್ಲಿ ನಿಧಾನವಾಗಿ ಜೋರು ಮಳೆ ಬೀಳುತ್ತಿದ್ದು, ಪರಿಸ್ಥಿತಿ ಕೂಡ ಸುಧಾರಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+