ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕರ ದಿನ: ಮಕ್ಕಳ ಜತೆ ಮೋದಿ ಸಂವಾದ ಮುಖ್ಯಾಂಶ

By Mahesh
|
Google Oneindia Kannada News

ಬೆಂಗಳೂರು, ಸೆ.5: ಶಿಕ್ಷಕರ ದಿನಾಚರಣೆಯನ್ನು ಭಾರತದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕೂಡಾ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಕೊಡುಗೆಯನ್ನು ಸ್ಮರಿಸುತ್ತಾ, ಶಿಕ್ಷಕರ ದಿನಾಚರಣೆಯ ಶುಭ ಹಾರೈಕೆ ತಿಳಿಸಿದ್ದಾರೆ.

ಭಾರತ ಪ್ರಥಮ ಉಪರಾಷ್ಟ್ರಪತಿ ಹಾಗೂ ನಂತರ ರಾಷ್ಟ್ರಪತಿಯಾಗಿದ್ದ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತಾ ಬಂದಿರುವುದು ಎಲ್ಲರಿಗೂ ತಿಳಿದ ವಿಷಯ. ಡಾ. ರಾಧಾಕೃಷ್ಣನ್ ಅವರಿಗೆ ನನ್ನ ನಮನ ಸಲ್ಲಿಸಿ ಶಿಕ್ಷಕರ ದಿನಾಚರಣೆ ಶುಭ ಕೋರುತ್ತೇನೆ ಎಂದು ಸಾಮಾಜಿಕ ಜಾಲ ತಾಣ ಟ್ವಿಟರ್ ನಲ್ಲಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಫೇಸ್ ಬುಕ್ ನಲ್ಲಿ ಮೋದಿ ಅವರ ಪುಟದಲ್ಲೂ ಇದು ಕಾಣಿಸಿದೆ.

ಪ್ರತಿ ವರ್ಷದಂತೆ ಈ ವರ್ಷ ಕೂಡಾ ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸಲಾಗುವುದು ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಜತೆಗೆ ಸಾವಿರಾರು ಜನ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ನಡೆಸಲಾಗುವುದು ಎಂದು ಮೋದಿ ಪುಟ ಪ್ರಕಟಿಸಿದೆ. ವಿಶೇಷವೆಂದರೆ ಶಿಕ್ಷಕರ ದಿನಾಚರಣೆ ಶುಭ ಕೋರಿ ಮೋದಿ ಹಾಕಿರುವ ಸಂದೇಶಕ್ಕೆ ಭರಪೂರ ಪ್ರತಿಕ್ರಿಯೆಗಳು ಲೈಕ್ ಗಳು ಬಂದಿವೆ.

ವಿದ್ಯಾರ್ಥಿಗಳ ಜತೆ ಸಂವಾದ ನಡೆಸುವುದೇ ಆನಂದ anything under sun ಎನ್ನುವಂತೆ ಅವರು ಕೇಳದೇ ಇರುವ ಪ್ರಶ್ನೆಗಳೇ ಇಲ್ಲ. ನಾನು ಏನು ಊಟ ಮಾಡುತ್ತ್ತೇನೆ. ಯಾವ ಸಿನಿಮಾ ನೋಡುತ್ತೇನೆ. ಕಾರ್ಯಕ್ರಮಕ್ಕೆ ಯಾವ ಡ್ರೆಸ್ ಹಾಕುತ್ತೇನೆ ಹೀಗೆ ವಿವಿಧ ಪ್ರಶ್ನೆಗಳನ್ನು ಕೇಳುತ್ತಾರೆ ಎಂದಿದ್ದ ಮೋದಿಗೆ ಕುತೂಹಲದ ಪ್ರಶ್ನೆಗಳು ಎದುರಾಗಿದೆ. ನೀವು ಪ್ರಧಾನಿಯಾಗುತ್ತೀರಾ ಎಂಬ ಪ್ರಶ್ನೆಗೂ ಉತ್ತರ ನೀಡಿದ್ದಾರೆ[ಉತ್ತರ ಇಲ್ಲಿದೆ ಓದಿ]. ಮಕ್ಕಳ ಜತೆ ನಡೆಸಿದ ಸಂವಾದದ ಮುಖ್ಯಾಂಶ ಮುಂದೆ ಇದೆ ಓದಿ...

ಸಂವಾದಕ್ಕೂ ಮುನ್ನ ಹೇಳಿದ್ದು

ಸಂವಾದಕ್ಕೂ ಮುನ್ನ ಹೇಳಿದ್ದು

ಮುಗ್ಧ ಮನಸ್ಸಿನ ಮಕ್ಕಳಲ್ಲಿ ಮುಂದಿನ ಶಿಕ್ಷಕರನ್ನು ಕಾಣುವುದು ನನ್ನ ಉದ್ದೇಶ. ಗುಜರಾತಿನಲ್ಲಿ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶ್ವ ವಿದ್ಯಾಲಯ ತೆರೆಯುವ ಉದ್ದೇಶವೂ ಇದೇ ಆಗಿದೆ. ಶಿಕ್ಷಕ ವೃತ್ತಿಗೆ ಇರುವ ಗೌರವ ಮತ್ತೆ ಮರುಕಳಿಸಬೇಕು. ದೇಶದ ಸತ್ಪ್ರಜೆಗಳ ನಿರ್ಮಾಣ ಕಾರ್ಯಕ್ಕೆ ಮನೆಯಲ್ಲಿ ಅಮ್ಮಂದಿರು, ಶಾಲೆಯಲ್ಲಿ ಶಿಕ್ಷಕರ ನೆರವು ಅಗತ್ಯ ಎಂದು ಮೋದಿ ಹೇಳಿದ್ದಾರೆ.

Array

ಮೋದಿ ಟ್ವೀಟ್

ಶಿಕ್ಷಕರ ದಿನಾಚರಣೆ ಶುಭ ಹಾರೈಕೆ ಮಾಡಿದ ಮೋದಿ

ಗರೀಬಿ ಹಟಾವೋ

ಗರೀಬಿ ಹಟಾವೋ

ದೇಶದಿಂದ ಬಡತನ ಹೇಗೆ ನಿರ್ಮೂಲನಾ ಮಾಡಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ ಶಿಕ್ಷಣದಿಂದ ಮಾತ್ರ ಬಡತನ ನಿರ್ಮೂಲನೆ ಸಾಧ್ಯ. ಶಿಕ್ಷಣ ಸಮಾಜವನ್ನು ಶಕ್ತಿಗೊಳಿಸುತ್ತದೆ ಎಂದರು.

ಗ್ರಾಮವೋ, ನಗರವೋ

ಗ್ರಾಮವೋ, ನಗರವೋ

ನೀವು ಗ್ರಾಮದಲ್ಲಿ ನೆಲೆಸಲು ಇಷ್ಟಪಡುತ್ತೀರೋ ಅಥವಾ ಹಳ್ಳಿಯಲ್ಲೋ ಎಂದು ವಿದ್ಯಾರ್ಥಿನಿಯೊಬ್ಬಳು ಪ್ರಶ್ನಿಸಿದಳು. ನಗರಗಳಲ್ಲಿ ಒಬ್ಬ ವಿದ್ಯಾರ್ಥಿ ಮೊದಲಿಗನಾಗಿ ಬಂದರೆ ಜನ ಆತನನ್ನು ಗುರುತಿಸುವ ಬಗೆಯೇ ಬೇರೆ.. ಆದರೆ, ಹಳ್ಳಿಗಳಲ್ಲಿ ಇಂಥವನ ಮಗ ಮೊದಲಿಗನಾಗಿದ್ದಾನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಹಳ್ಳಿಯಲ್ಲಿ ಇರುವ ಹೆಮ್ಮೆಯೇ ಬೇರೆ

ಯೋಗ ಕಲಿಕೆ

ಯೋಗ ಕಲಿಕೆ

ಪರ್ಮಾರ್ ಸಾಹೀಬ್ ಎಂಬ ಗುರುವಿನಿಂದ ನಾನು ಯೋಗಾಭ್ಯಾಸ ಕಲಿತೆ. ನಾನು ವಿದ್ಯಾರ್ಥಿಯಾಗಿದ್ದಾಗ ಪ್ರತಿನಿತ್ಯ ಅವರು ಮುಂಜಾನೆ 5 ಗಂಟೆಗೆ ನನಗೆ ಯೋಗ ಕಲಿಸುತ್ತಿದ್ದರು. ಅಂದಿನಿಂದ ಇಂದಿನವರೆಗೂ ಯೋಗ ನನಗೆ ಸಾಕಷ್ಟು ವಿಷಯಗಳನ್ನು ಜೀವನದಲ್ಲಿ ಕಲಿಸಿದೆ. ಯೋಗ ವಿಶ್ವ ವಿದ್ಯಾಲಯ ಸ್ಥಾಪನೆಗೆ ಮುಂದಾಗಿರುವುದು, ಕ್ರೀಡಾ ವಿವಿ ಎಲ್ಲವೂ ಅಂದು ಗುರುಗಳು ಹೇಳಿಕೊಟ್ಟ ಪಾಠದ ಫಲವಾಗಿದೆ.

ಪೂಜೆ ಪುನಸ್ಕಾರ

ಪೂಜೆ ಪುನಸ್ಕಾರ

ಪಟಾನ್ ನಿಂದ ಬಂದಿದ್ದ ವಿದ್ಯಾರ್ಥಿನಿಯೊಬ್ಬಳು ಮೋದಿ ಅವರೇ ನೀವು ಯಾರನ್ನು ಪೂಜಿಸುತ್ತೀರಾ? ಎಂದು ಪ್ರಶ್ನಿಸಿದರು. ಭಾರತದಲ್ಲಿ ವಿವಿಧತೆಯಲ್ಲಿ ಏಕತೆ ಕಾಣಲಾಗುತ್ತದೆ. ತನ್ನ ವ್ಯಕ್ತಿತ್ವಕ್ಕೆ ತಕ್ಕಂತೆ ಪೂಜೆ ಕೈಗೊಳ್ಳುತ್ತಾನೆ.

ಉದಾಹರಣೆಗೆ ಕುಸ್ತಿಪಟುಗಳು ಹನುಮಾನ್ ಆರಾಧಿಸುತ್ತಾರೆ. ಹಣ ಬೇಕು ಎನ್ನುವವರು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ನಾನು ಶಕ್ತಿ ಸ್ವರೂಪಳಾದ ದುರ್ಗೆಯನ್ನು ನವರಾತ್ರಿಯಲ್ಲಿ ವಿಶೇಷವಾಗಿ ಪೂಜಿಸುತ್ತೇನೆ ಎಂದರು.

ಭದ್ರತಾ ಪಡೆ ಜತೆ ದಿನವಿಡಿ

ಭದ್ರತಾ ಪಡೆ ಜತೆ ದಿನವಿಡಿ

VIII ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆ: ದಿನವಿಡಿ ಬೆಂಗಾವಲು, ಭದ್ರತಾ ಪಡೆ ಜತೆ ಪ್ರಯಾಣಿಸುವುದು ನಿಮಗೆ ಬೋರ್ ಎನಿಸುವುದಿಲ್ಲವೇ?

ನಾನು ಕೂಡಾ ಈ ಬಗ್ಗೆ ಅನೇಕ ಸಲ ಯೋಜಿಸಿದ್ದೇನೆ. ಬುಲೆಟ್ ಪ್ರೂಫ್ ಕಾರುಗಳು ಕಂಫರ್ಟ್ ಪ್ರೂಫ್ ಆಗಿರುತ್ತದೆ ನಿಜ ಅದರೆ, ಇದು ವೃತ್ತಿಯಲಿರುವ ಅಪಾಯ, ಅನಾಹುತ ಎಂದು ಮೋದಿ ಹೇಳಿದ್ದಾರೆ
ಸೋದರರ ಜತೆ ಜಗಳ

ಸೋದರರ ಜತೆ ಜಗಳ

ಸೋದರ, ಸೋದರಿಯರ ಜತೆ ಜಗಳವಾಡುತ್ತಿದ್ರಾ? ಎಂದು ಹುಡುಗಿಯೊಬ್ಬಳು ಕೇಳಿದ ಪ್ರಶ್ನೆ ಮೋದಿ ಅವರಿಗೆ ನಗೆ ತರೆಸಿತು.

ಇಬ್ಬರು ಹಿರಿಯರು ಹಾಗೂ ಇಬ್ಬರು ಕಿರಿಯ ಸೋದರರು ಓರ್ವ ಸೋದರಿಯರ ಜತೆ ಬಾಲ್ಯದಲ್ಲಿ ಎಲ್ಲರಂತೆ ನಾನು ಕೂಡಾ ಕಿತ್ತಾಟವಾಡುತ್ತಿದೆ. ಆದರೆ, ಎಲ್ಲವೂ ಸಂತಸದ ಒಂದು ಭಾಗವಾಗುತ್ತಿತ್ತು. ಕುಟುಂಬದ ವ್ಯವಸ್ಥೆಯಲ್ಲಿ ನೋವು ನಲಿವು ಸಮಾನವಾಗಿ ಹಂಚಿಕೊಂಡು ಬಾಳುವುದನ್ನು ಇದು ಕಲಿಸಿದೆ.

English summary
India celebrates teacher's day on Sept 5 showing gratitude and appreciation to all teachers. Gujarat Chief Minister Narendra Modi too wished the country on this special day remembering Dr Sarvepalli Radhakrishnan, the first vice president of India and the second President of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X