ಸ್ಥಳೀಯ ಚುನಾವಣೆ : ಯಾರಿಗೆ ಎಷ್ಟು ಸ್ಥಾನಗಳು?

Urban Local Bodies election 2013 - total picture
ಬೆಂಗಳೂರು, ಮಾ. 11 : ಆಡಳಿತ ಪಕ್ಷವಾದ ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಿಗೂ ಬೇಡವಾಗಿದ್ದ ಮಹಾನಗರ ಪಾಲಿಕೆ, ನಗರಸಭೆ ಮತ್ತು ಪಟ್ಟಣ ಪಂಚಾಯತಿ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿಯ ವಿಭಜನೆ ಮತ್ತು ಒಳಜಗಳಗಳ ಲಾಭ ಪಡೆದಿರುವ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ.

ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗುಲಬರ್ಗ, ದಾವಣಗೆರೆ, ಬಳ್ಳಾರಿ ಮಹಾನಗರ ಪಾಲಿಕೆಗಳು ಸೇರಿದಂತೆ ಒಟ್ಟು 4,976 ವಾರ್ಡುಗಳಿಗೆ, ಸುಪ್ರೀಂ ಕೋರ್ಟ್ ಆದೇಶದಂತೆ ಮಾರ್ಚ್ 7ರಂದು ಮತದಾನ ನಡೆದಿತ್ತು. ಮತದಾರರ ಪರಿಷ್ಕೃತ ಪಟ್ಟಿ ಒದಗಿಸದ ಕಾರಣ 2007ರ ಪಟ್ಟಿಯಂತೆ ಮತದಾನ ನಡೆದಿತ್ತು.

ಬಿಜೆಪಿಯ ನಿರೀಕ್ಷೆಗಳನ್ನು ಧೂಳಿಪಟ ಮಾಡಿರುವ ಮತದಾರರು ಕಾಂಗ್ರೆಸ್ಸಿಗೆ ಭರ್ಜರಿ ಜಯ ದೊರಕಿಸಿಕೊಟ್ಟಿದ್ದಾರೆ. 4,976ರಲ್ಲಿ 1,960 ವಾರ್ಡುಗಳಲ್ಲಿ ಜಯಭೇರಿ ಬಾರಿಸಿರುವ ಕಾಂಗ್ರೆಸ್ ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಭಾರೀ ವೇದಿಕೆ ನಿರ್ಮಿಸಿಕೊಂಡಿದೆ.

ಯಡಿಯೂರಪ್ಪ ಪಕ್ಷ ತೊರೆದ ನಂತರ ಅಕ್ಷರಶಃ ನಾಯಕನಿಲ್ಲದ ದೋಣಿಯಂತಾಗಿರುವ ಭಾರತೀಯ ಜನತಾ ಪಕ್ಷ ಮತದಾರ ಕೊಟ್ಟ ಹೊಡೆತಕ್ಕೆ ನಲುಗಿಹೋಗಿದೆ. ಬಿಜೆಪಿಗೆ ಸಖತ್ ಪೈಪೋಟಿ ನೀಡಿರುವ ಜೆಡಿಎಸ್ 906 ಸ್ಥಾನಗಳನ್ನು ಗಳಿಸಿ ಎರಡನೇ ಸ್ಥಾನ ಆಕ್ರಮಿಸಿಕೊಂಡಿದೆ. ಮೊದಲ ಬಾರಿ ಕಣಕ್ಕೆ ಇಳಿದಿರುವ ಕೆಜೆಪಿ 274 ಸ್ಥಾನ ಗಳಿಸಿದ್ದರೆ, ಬಿಎಸ್ಆರ್ ಕಾಂಗ್ರೆಸ್ ಕೇವಲ 86 ಸ್ಥಾನ ಗಳಿಸಿ ಲಿಸ್ಟಿಗೆ ಇಲ್ಲದಂತಾಗಿದೆ.

ಇದು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲು ಮತದಾರ ಕಲಿಸಿದ ಪಾಠ ಎಂದು ನಾಯಕರು ಹೇಳಿಕೊಳ್ಳುತ್ತಿದ್ದರೆ, ವಿಧಾನಸಭೆ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿ ಎಂದು ಎದೆತಟ್ಟಿಕೊಂಡು ಹೇಳಲು ಕಾಂಗ್ರೆಸ್ ಹಿಂಜರಿಯುತ್ತಿದೆ. ಅಚ್ಚರಿಯ ಸಂಗತಿಯೆಂದರೆ, 776 ಸ್ಥಾನ ಗಳಿಸಿರುವ ಪಕ್ಷೇತರರು ನಾಡಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಸಿಪಿಎಂ 13 ಸ್ಥಾನ, ಎನ್‌ಸಿಪಿ ಮತ್ತು ಸಿಪಿಐ 1 ಸ್ಥಾನ ಪಡೆದಿವೆ. ಬಿಎಸ್ಪಿ ಒಂದೂ ಸ್ಥಾನ ಪಡೆಯದಿದ್ದರೆ 23 ವಾರ್ಡುಗಳಲ್ಲಿ ಮತದಾನ ನಡೆದಿಲ್ಲ.

ಸಂಖ್ಯೆ ಜಿಲ್ಲೆಗಳು ಒಟ್ಟು ಸೀಟು
ಘೋಷಿತ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಕೆಜೆಪಿ ಬಿಎಸ್ಆರ್ ಪಕ್ಷೇತರ ಇತರೆ
1 ಬೆಂಗಳೂರು ನಗರ
23 23 9 6 5 0 0 3 0
2 ಬೆಂಗಳೂರು ಗ್ರಾಮೀಣ
123 123 18 48 41 0 0 16 0
3 ರಾಮನಗರ 112 112 2 65 40 0 1 4 0
4 ಚಿತ್ರದುರ್ಗ 142 142 4 49 30 14 13 32 0
5 ದಾವಣಗೆರೆ 149 149 23 85 15 8 6 11 0
6 ಕೋಲಾರ 166 166 21 46 58 1 0 34 4
7 ಚಿಕ್ಕಬಳ್ಳಾಪುರ 146 145 7 47 48 5 1 31 0
8 ಶಿವಮೊಗ್ಗ 176 176 24 64 40 34 1 12 1
9 ತುಮಕೂರು 234 234 17 77 93 20 1 26 0
10 ಮೈಸೂರು 204 204 19 90 69 6 1 17 2
11 ಚಾಮರಾಜನಗರ 109 109 11 56 3 19 2 11 7
12 ಚಿಕ್ಕಮಗಳೂರು 148 148 53 57 14 5 0 19 0
13 ದಕ್ಷಿಣ ಕನ್ನಡ
189 189 63 108 6 0 0 4 6
14 ಉಡುಪಿ 95 95 43 49 0 0 0 1 0
15 ಹಾಸನ 180 180 3 55 90 10 0 22 0
16 ಮಂಡ್ಯ 161 161 9 57 62 0 1 25 7
17 ಕೊಡಗು 40 40 19 8 11 0 0 2 0
18 ಬೆಳಗಾವಿ 392 392 104 59 6 2 0 221 0
19 ಬಿಜಾಪುರ 150 150 33 44 25 4 0 43 0
20 ಬಾಗಲಕೋಟೆ 290 267 96 121 18 4 6 22 0
21 ಧಾರವಾಡ 156 156 50 64 29 5 3 5 0
22 ಗದಗ 203 203 61 99 8 3 20 11 0
23 ಹಾವೇರಿ 193 193 41 78 5 51 3 15 0
24 ಉತ್ತರ ಕನ್ನಡ
239 239 50 107 41 1 3 37 0
25 ಬಳ್ಳಾರಿ 246 246 18 137 6 0 0 85 0
26 ಬೀದರ 149 149 22 53 36 23 6 9 0
27 ಗುಲಬರ್ಗ 213 213 28 82 36 46 1 18 2
28 ಯಾದಗಿರಿ 98 98 5 50 12 7 4 20 0
29 ರಾಯಚೂರು 154 154 28 63 34 6 10 13 0
30 ಕೊಪ್ಪಳ 96 96 25 36 25 0 3 7 0
ಒಟ್ಟು : 4976 4952 906 1960 906 274 86 776 29

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+