ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆ ಮಹಾನಗರ ಪಾಲಿಕೆ-ಕಾಂಗ್ರೆಸ್ ವಶ

|
Google Oneindia Kannada News

Davanagere city corporation
ದಾವಣಗೆರೆ, ಮಾ.11 : ದಾವಣಗೆರೆ ಮಹಾನಗರ ಪಾಲಿಕೆಯು ಕಾಂಗ್ರೆಸ್ ವಶವಾಗಿದ್ದು, ಮಾ.7ರಂದು 41 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 36 ಸ್ಥಾನಗಳನ್ನು ಪಡೆದಿದ್ದು, ಬಿಜೆಪಿ ಕೇವಲ 1 ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿದೆ.

ಜಿಲ್ಲೆಯಲ್ಲಿ ಶೇ 78.43 ಮತಗಳು ಚಲಾವಣೆಯಾಗಿತ್ತು. ಕೆಪಿಸಿಸಿ ಖಜಾಂಚಿ ಶಾಮನೂರು ಶಿವಶಂಕರಪ್ಪ ಅವರ ತವರು ನೆಲದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿದ್ದು, ನೂತನವಾಗಿ ಸ್ಥಾಪಿತವಾಗಿರುವ ಯಡಿಯೂರಪ್ಪ ನೇತೃತ್ವದ ಕೆಜೆಪಿ ತನ್ನ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಿ ಜಯಗಳಿಸಿದೆ.

ಬಿಜೆಪಿಗೆ ತೀವ್ರ ಹಿನ್ನೆಡೆ ಉಂಟಾಗಿರುವುದು ತೋಟಗಾರಿಕಾ ಸಚಿವ ಎಸ್.ಎ.ರವೀಂದ್ರನಾಥ್ ನಾಥ್ ಮತ್ತು ಸಂಸದ ಜಿ.ಎಂ.ಸಿದ್ದೇಶ್ ಅವರಿಗೆ ಮುಖಭಂಗ ಉಂಟುಮಾಡಿರುವುದು ಖಂಡಿತ. ಪಕ್ದ ಜಿಲ್ಲೆಯವರಾದ ಯಡಿಯೂರಪ್ಪ ಅವರ ಪ್ರಭಾವ ದಾವಣಗೆರೆ ಮೇಲೆ ಯಾವುದೇ ಪ್ರಭಾವ ಬೀರಿಲ್ಲ.

ಮಹಾನಗರ ಪಾಳಿಕೆ ಕಾಂಗ್ರೆಸ್ ವಶವಾಗಿದ್ದರೂ ಜಿಲ್ಲೆಯ ಉಳಿದ ತಾಲೂಕುಗಳ ಫಲಿತಾಂಶವನ್ನು ಎಲ್ಲಾ ಪಕ್ಷಗಳು ಹಂಚಿಕೊಂಡಿವೆ. ಕೆಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಾಗಿ ಜಿಲ್ಲೆಯಿಂದ ಆಯ್ಕೆಯಾಗಿದ್ದು ಶಾಮನೂರು ಶಿವಶಂಕರಪ್ಪನವರು ಮಾತ್ರ. ಬಿಜೆಪಿಗೆ ಪಾಲಿಕೆ ಫಲಿತಾಂಶ ಸರಿಯದ ಪಾಠವನ್ನೆ ಕಲಿಸಿದೆ. ವಿಧಾನಸಣೆ ಚುನಾವಣೆ ಹತ್ತಿರವಾಗುತ್ತಿರುವಾಗ ಈ ಫಲಿತಾಂಶ ಹೇಗೆ ಪ್ರಭಾವ ಬೀರುತ್ತದೆ ಕಾದು ನೋಡಬೇಕು.

ಫಲಿತಾಂಶದ ಬಲಾಬಲ
ದಾವಣಗೆರೆ ಮಹಾನಗರ ಪಾಲಿಕೆ (41) ವಾರ್ಡ್
ಕಾಂಗ್ರೆಸ್
-36
ಬಿಜೆಪಿ
-1
ಬಿಎಸ್ಆರ್ ಕಾಂಗ್ರೆಸ್
-1

ಹರಪನಹಳ್ಳಿ ಪುರಸಭೆ (27)
ಬಿಜೆಪಿ - 10
ಕಾಂಗ್ರೆಸ್ - 7
ಜೆಡಿಎಸ್ - 1
ಕೆಜೆಪಿ - 1
ಬಿಎಸ್ಆರ್ - 6
ಇತರೆ - 2

ಹೊನ್ನಾಳಿ ಪಟ್ಟಣ ಪಂಚಾಯಿತಿ (16 )
ಬಿಜೆಪಿ - 10
ಕಾಂಗ್ರೆಸ್ - 5
ಇತರೆ -1

ಜಗಳೂರು ತಾಲೂಕು ಪಂಚಾಯಿತಿ (15)

ಬಿಜೆಪಿ - 1
ಕಾಂಗ್ರೆಸ್ - 11
ಜೆಡಿಎಸ್ - 2
ಪಕ್ಷೇತರ - 1

ಹರಪನಹಳ್ಳಿ ಪುರಸಭೆ (27)
ಬಿಜೆಪಿ - 10
ಕಾಂಗ್ರೆಸ್ - 7
ಜೆಡಿಎಸ್ - 1
ಕೆಜೆಪಿ - 1
ಬಿಎಸ್ಆರ್ ಕಾಂಗ್ರೆಸ್ - 6

ಹರಿಹರ ನಗರ ಸಭೆ (31 )
ಬಿಜೆಪಿ - 1
ಕಾಂಗ್ರೆಸ್ - 13
ಜೆಡಿಎಸ್ - 10
ಕೆಜೆಪಿ - 4
ಪಕ್ಷೇತರ - 3

English summary
Davanagere city corporation election result 2013. The city has 41 wards. The part-wise split of winners and losers. BJP,1, Congress 36, BSR 1, finally Congress has won Davanagere city corporation election with full majority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X