ರೆಡ್ಡಿ ವಿರುದ್ಧ FIR ದಾಖಲಿಸಿದ ಬೆಂಗಳೂರು ಸಿಬಿಐ

CEC ವರದಿ ಅನ್ವಯ ಸುಪ್ರೀಂಕೋರ್ಟ್ ಸೂಚನೆಯಂತೆ ಅಕ್ರಮ ಗಣಿಗಾರಿಕೆ ಸಂಬಂಧ ಒಟ್ಟು 15 ಜನರ ವಿರುದ್ಧ ಈ FIR ದಾಖಲಿಸಿದೆ. ನ್ಯಾಯಾಲಯ ವ್ಯಾಪ್ತಿ ಅಡಚಣೆ ಹಿನ್ನೆಲೆಯಲ್ಲಿ ಸಿಬಿಐ ಕೋರ್ಟ್ ಈ ಪ್ರಕರಣವನ್ನು ಧಾರವಾಡ ಸಿಬಿಐ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ರಾಜ್ಯ ಸರಕಾರ ಈ FIRಗೆ ಅನುಮತಿ ನೀಡಿದೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಜನ ಸಂಗ್ರಾಮ ಪರಿಷತ್ ಮುಖಂಡ ಎಸ್.ಆರ್. ಹಿರೇಮಠ ಅವರು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿಗೆ ಅನುಗುಣವಾಗಿ ತನಿಖೆ ನಡೆಸಿ, ವರದಿ ಸಲ್ಲಿಸಲು CECಗೆ ಸೂಚನೆ ನೀಡಿತ್ತು.
ಈ ಪ್ರಕಾರ CEC ರಾಜ್ಯದ ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖಾ ವರದಿಯನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿತ್ತು. ಆ ವರದಿಯಲ್ಲಿನ ಅಂಶಗಳ ಪ್ರಕಾರ ಅಕ್ರಮ ಗಣಿಗಾರಿಕೆ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾದಂತೆ ಕಂಡಿ ಬಂದಿದ್ದು, ಈ ಬಗ್ಗೆ FIR ದಾಖಲಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಿತ್ತು.
ಆ ಪ್ರಕಾರ ರಾಜ್ಯ ಸರಕಾರ RC 18 ಮತ್ತು 19ರ ಅನುಸಾರ FIR ದಾಖಲಿಸಿ, ಕ್ರಮ ತನಿಖೆ ನಡೆಸುವಂತೆ ಸಿಬಿಐಗೆ ವಹಿಸಿದೆ. ಅದರಂತೆ ಬೆಂಗಳೂರು ಸಿಬಿಐ ಸೋಮವಾರ (ಫೆ. 27) ಜನಾರ್ಧನ ರೆಡ್ಡಿ ಸೇರಿದಂತೆ ಒಟ್ಟು 15 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದೆ.












Click it and Unblock the Notifications