ಕಳ್ಳನ ಹೆಂಡ್ತಿ ಯಾವತ್ತಿದ್ರೂ ಡ್ಯಾಶ್‌.. ಡ್ಯಾಶ್‌: ಸಿ.ಟಿ.ರವಿ ಹೀಗೆ ಹೇಳಿದ್ದೇಕೆ ಮತ್ತು ಯಾರಿಗೆ?

ಚಿಕ್ಕಮಗಳೂರು, ಅಕ್ಟೋಬರ್‌, 19: ಡಿ.ಕೆ.ಶಿವಕುಮಾರ್‌ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಈ ವಿಚಾರಕ್ಕೆ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದು, ಹಾಲಿಂದು ಹಾಲಿಗೆ, ನೀರಿಂದು ನೀರಿಗೆ, ಉಪ್ಪು ತಿಂದೋನು ನೀರು ಕುಡಿಲೇಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಇವೆಲ್ಲ ಹಳೇ ಕಾಲದ ಗಾದೆ ಮಾತುಗಳು. ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು. ಪ್ರಾಮಾಣಿಕರಿಗೆ ತೊಂದರೆ ಆಗಬಾರದು. ಯಾರಾದರೂ ಅಕ್ರಮ ಮಾಡಿದರೆ ಅದು ಇಂದಲ್ಲ ನಾಳೆ ಬಯಲಿಗೆ ಬರಬೇಕು. ಸುಮ್‌ ಸುಮ್ನೆ ಗಾದೆ ಹುಟ್ಟುತ್ತಾ? ತಲ ತಲಾಂತರದ ಸತ್ಯ ಇರುತ್ತದೆ. ಊರಿಗೆ ಬಂದೋಳು ನೀರಿಗೆ ಬರಲ್ವಾ? ಕಳ್ಳನ ಹೆಂಡ್ತಿ ಯಾವತ್ತಿದ್ರು ಡ್ಯಾಶ್....ಡ್ಯಾಶ್‌ ಎಂದು ಡಿ.ಕೆ.ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು.

ct-ravi-speaks-out-against-dk-shivakumar

ಸತ್ಯವನ್ನು ಮುಚ್ಚಿಹಾಕಲು ಆಗಲ್ಲ, ಕೆಲ ಕಾಲ ಮುಚ್ಚಿಡಬಹುದು ಅಷ್ಟೇ. ಯಾರೇ ತಪ್ಪು ಮಾಡಿದರೂ ಇದ್ರೆ ಶಿಕ್ಷೆ ಆಗಬೇಕು. ಕಾನೂನಿಗಿಂತ ಅತಿರಥರಾದವರು ಯಾರಾದರೂ ಇದ್ದೀವಾ? ನಾನು, ಸಿಎಂ, ಡಿಸಿಎಂ, ಪ್ರಧಾನಿ ಯಾರೂ ಕಾನೂನಿಗೆ ಅತಿರಥರಲ್ಲ. ಯಾರಾದ್ರು ನಾವು above the law ಅಂದುಕೊಂಡಿದ್ದರೆ ಅದಕ್ಕೆ ಸಂವಿಧಾನ ಅವಕಾಶ ನೀಡಿಲ್ಲ. ಅಂಬೇಡ್ಕರ್ ಕಾನೂನಿನ ದೃಷ್ಟಿಯಿಂದ ಎಲ್ಲರೂ ಸಮಾನರು ಎಂದರು.

ಇವರಿಗೆ ಕಾನೂನು ಅನ್ವಯ ಆಗಲ್ಲ, ಏನೇ ಮಾಡಿದರೂ ನಡೆಯುತ್ತದೆ ಅನ್ನೋದು ನಮ್ಮ ದೇಶದಲ್ಲಿ ಇಲ್ಲ. ಯಾರು ತಪ್ಪು ಮಾಡಿದರೂ ಶಿಕ್ಷೆ ಆಗಲೇಬೇಕು. ಯಾರು ತಪ್ಪು ಮಾಡಿದ್ದಾರೆಂದು ಹೇಳುವ ಅಧಿಕಾರ ನನಗೆ ಇಲ್ಲ, ನ್ಯಾಯಾಲಯಕ್ಕೆ ಇದೆ. ನಾವು ಮಾಡಿರಬಹುದು ಅಂತಾ ಹೇಳಬಹುದು, ಮಾಡಿದ್ದಾರೆ ಅಂತಾ ಹೇಳುವುದಕ್ಕೆ ಆಗುವುದಿಲ್ಲ ಎಂದು ಮಾಜಿ ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ct-ravi-speaks-out-against-dk-shivakumar

135 ಜನ ಕಾಂಗ್ರೆಸ್ಸಿಗರು ಇದ್ದಾರೆ, ಅವರು ಒಗ್ಗಟ್ಟಿದ್ದರೆ ಯಾರು ಬೀಳಿಸಲು ಆಗುತ್ತದೆ? ಡಿ.ಕೆ.ಶಿವಕುಮಾರ್‌ ಬೆಳಗಾವಿಗೆ ಬಂದಾಗ ಸತೀಶ್ ಜಾರಕಿಹೊಳಿಗೆ ಹೋಗಬೇಡಿ ಅಂತಾ ನಾವು ಹೇಳಿಕೊಟ್ಟಿದ್ದೀವಾ? ಅದು ಅವರು ತೆಗೆದುಕೊಂಡಿರುವ ತೀರ್ಮಾನ. 20 ಹಿರಿಯ ಶಾಸಕರು ಪತ್ರ ಬರೆದಿದ್ದರು. ಮತ್ತೊಂದೆಡೆ ನಾವೇನಾದರೂ ಬರೀರಿ ಅಂತಾ ಹೇಳಿದ್ದೆವಾ? ಬಿಜೆಪಿಯವರು ಬರೆಸಿದ್ದರೆ ಇವೆಲ್ಲಾ ಬಿಜೆಪಿಯವರು ಮಾಡುತ್ತಿದ್ದಾರೆ ಅನ್ನಬಹುದು ಎಂದರು.

ರಾಜಣ್ಣ ಅವರ ಬಳಿ ಐವರು ಡಿಸಿಎಂ ಮಾಡಿ ಅಂತಾ ನಾವು ಹೇಳಿ ಮಾಡಿಸಿಲ್ಲ. 135 ಜನ ಒಟ್ಟಿಗೆ ಇದ್ದರೆ ಯಾರು ಅಲ್ಲಾಡಿಸಲು ಅಗುವುದಿಲ್ಲ.ಅವ್ರು ಅಲ್ಲಾಡ್ತಾ ಇದ್ರೆ ಅದು ನಮ್ಮ ಕೈಯಲ್ಲಿ ಇಲ್ಲ. ಹೀಗೆ ಅಲ್ಲಾಡ್ತಾ ಇದ್ರೆ ಇವತ್ತಲ್ಲ ನಾಳೆ ಬಿದ್ದೇ ಬಿಳುತ್ತದೆ ಕಾಂಗ್ರೆಸ್‌ ಸರ್ಕಾರ. ಜನ ಒಳ್ಳೆಯ ಅಡಳಿತ ಕೊಡಿ ಅಂತಾ ಅಧಿಕಾರ ಕೊಟ್ಟಿದ್ದಾರೆ. ಕಲಾವಿದರ ಬಳಿಯೂ ದುಡ್ಡು ಎತ್ಕೊಂಡು ತಿನ್ನಿ ಅಂತಾ ಅಧಿಕಾರ ಕೊಟ್ಟಿದ್ದಾರಾ.? ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು.

ಎಲ್ಲದರಲ್ಲೂ ಹೆದರಿಸಿ-ಬೆದರಿಸಿ ವಸೂಲಿ ಮಾಡಿ ಅಂತಾ ಅಧಿಕಾರ ಕೊಟ್ಟಿರೋದಾ? ನಾವು ಹೆಚ್ಚು ಅಂದರೆ ಇವರ ಮೇಲೆ ಆರೋಪ ಮಾಡಬಹುದು. ಸರ್ಕಾರದ ಬಗ್ಗೆ ಜನ ಶಾಪ ಹಾಕಬಹುದು, ಅದಕ್ಕಿಂತ ಇನ್ನೇನೂ ಮಾಡೋಕಾಗುತ್ತದೆ. ಸರ್ಕಾರವನ್ನು ಬಿಳಿಸುವ ತಾಕತ್ತು ಹೊರಗಡೆಯ ಯಾರಿಗೂ ಇಲ್ಲ. ಆ ಸಾಮಾರ್ಥ್ಯ ಇರೋದು ಒಳಗಡೆ ಇರುವ ಕಾಂಗ್ರೆಸ್ಸಿಗರಿಗೆ ಮಾತ್ರ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+