• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಜಿ ಉಪಸಭಾಪತಿಗೂ ಕೈಕೊಟ್ಟ ಮಾಹಿತಿ ಹಕ್ಕು ಕಾಯ್ದೆ

By # ಬಿಆರ್ ಪಾಟೀಲ್, ಮಾಜಿ ಉಪಸಭಾಪತಿ
|
ಗುಲ್ಬರ್ಗ, ಜುಲೈ15: ದೇಶದಲ್ಲಿ ಮಾಹಿತಿ ಹಕ್ಕು ಕ್ರಾಂತಿಕಾರ ಕಾಯ್ದೆ ಜಾರಿಯಲ್ಲಿ ಬಂದು ಆ ಮೂಲಕ ಜನರು ಅನೇಕ ಬದಲಾವಣೆಗಳನ್ನು ಕಂಡಿದ್ದಾರೆ. ಆದರೂ ಇದರ ಪೂರ್ಣ ಪ್ರಮಾಣದ ಉಪಯೋಗ ಜನರಿಗೆ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ.

ನಾನು ಮಾಹಿತಿ ಹಕ್ಕು ಕಾನೂನು ಅಡಿ 23.12.2009 ರಲ್ಲಿ ಆಳಂದ ತಾಲ್ಲೂಕಿನ 39 ಗ್ರಾಮ ಪಂಚಾಯತಿಗಳಲ್ಲಿ ನಡೆಯುತ್ತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಪಟ್ಟ 7 ಅಂಶಗಳ ವಿವರಗಳನ್ನು ಕೇಳಿದೆ. ಅದೇ ತರಹ 17.11.2009 ರಲ್ಲಿ ಆಳಂದ ಪುರಸಭೆ ಮುಖ್ಯಾಧಿಕಾರಿಗಳಿಗೆ 13 ಅಂಶಗಳ ವಿವರವನ್ನು ಕೇಳಿದ್ದೆ.

ಸ್ಥಳೀಯ ಮಟ್ಟದಲ್ಲಿ ಮಾಹಿತಿ ಸಿಗದ ಕಾರಣ ಜಿಲ್ಲಾ ಮಟ್ಟದಲ್ಲಿ ನಂತರ ಆಯುಕ್ತರು ಕರ್ನಾಟಕ ಮಾಹಿತಿ ಹಕ್ಕು ಆಯೋಗಕ್ಕೂ ಮೇಲ್ಮನವಿ ಸಲ್ಲಿಸಿ 2010 ವರ್ಷ ಕಳೆದು 2011 ಆರಂಭವಾದರು ಸಕಾಲಕ್ಕೆ ಮಾಹಿತಿ ಸಿಗದಿದ್ದಕ್ಕಾಗಿ ಈ ಕಾಯ್ದೆ ಮೇಲಿನ ವಿಶ್ವಾಸ ಕಡಿಮೆಯಾಗಿದೆ. ಹಲವು ಸಲ ರಾಜ್ಯ ಮಾಹಿತಿ ಹಕ್ಕು ಆಯುಕ್ತರಿಗೆ ಭೇಟಿ ಮಾಡಿದರು ಯಾವುದೇ ಫಲ ಸಿಕ್ಕಿಲ್ಲ ಇದರಿಂದ ನಿರಾಶೆ ಉಂಟಾಗಿದೆ. ಇದೇ ತರಹ ಅನುಭವ ಇನ್ನೂ ಹಲವರಿಗೆ ಆಗಿರುವುದು ಕೂಡಾ ತಿಳಿದುಬಂದಿದೆ. ಅವ್ಯವಹಾರ, ಅನ್ಯಾಯ, ತಡೆಗಟ್ಟಲು ಪ್ರಮುಖ ಅಸ್ತ್ರವಾದಂತಹ ಈ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಮಯಕ್ಕೆ ತಕ್ಕ ಹಾಗೇ ಮಾಹಿತಿ ಸಿಗದಿದ್ದರೆ ಈ ಕಾಯ್ದೆ ಮುಖ್ಯ ಗುರಿ ಮತ್ತು ಉದ್ದೇಶ ವಿಫಲವಾದಂತೆ ಆಗುತ್ತಿದೆ.

ಮಾಹಿತಿ ಪಡೆದು ಅನ್ಯಾಯ, ಅವ್ಯವಹಾರ ತಡೆಗಟ್ಟಲು ತಕ್ಷಣ ಮಾಹಿತಿ ಸಿಗದೆ ಅನೇಕ ಅಧಿಕಾರಿಗಳು ಈ ಅವಧಿಯಲ್ಲಿ ವರ್ಗಾವಣೆಯಾಗಿ ಕೈತೊಳೆದುಕೊಳ್ಳುತ್ತಿದ್ದಾರೆ. ಬರೀ 25 ಸಾವಿರ ದಂಡ ಕೊಡುವುದು ಅಧಿಕಾರಿಗಳಿಗೆ ಮಹಾ ದೊಡ್ಡ ಶಿಕ್ಷೆ ಅಥವಾ ಹಾನಿಯಾಗುವುದಿಲ್ಲ. ಲೂಟಿ ಹೊಡೆಯುವವರು ವಿಳಂಬ ನೀತಿ ಅನುಸರಿಸಿ ಪಾರಾಗುವುದು ಸಾಧ್ಯವಿದೆ ಎಂಬುವುದು ಸಾಬೀತಾಗಿದೆ.

ಅರ್ಜಿದಾರರ ಮೂಲ ಉದ್ದೇಶ ಸಾಧಿಸಲು ಆಗುತ್ತಿಲ್ಲಾ. ಆದ ಕಾರಣ ಈ ಕಾನೂನಿನಲ್ಲಿ ಬದಲಾವಣೆ ತರುವುದು ಅತ್ಯಂತ ಅವಶ್ಯಕ ಮತ್ತು ಅನಿವಾರ್ಯವೆಂಬುದು, ಈ ತರಹದ ಅನುಭವಗಳ ಮುಖಾಂತರ ಗೊತ್ತಾಗುತ್ತದೆ.

ಶಾಸಕಾಂಗ ಮತ್ತು ಆಡಳಿತ ಸೂಕ್ತ ಕ್ರಮಕೈಗೊಳ್ಳಬೇಕು, ಅಧಿಕಾರಿಗಳಿಗೆ ಪಾಠ ಕಲಿಸಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಸಿಗಬೇಕು, ಅರ್ಜಿದಾರರಿಗೆ ಸಕಾಲದಲ್ಲಿ ಕೇಳಿದ ಮಾಹಿತಿ ಸಿಗುವಂತಾಗುವಲ್ಲಿ ಇನ್ನಾದರು ಸಂಬಂಧಿತರು ಕ್ರಮ ಕೈಗೊಳ್ಳುವರೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The former Deputy Chairman of Legislative Council and All India Progressive Janata Dal (AIPJD) leader B.R. Patil is upset with the way in which RTI act is working in Karnataka. He experienced it with his own case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more