ಭಾರತದಲ್ಲಿ ಇನ್ಫಿ, ಟಾಟಾ ಫಸ್ಟ್; ಜಾಗತಿಕ ಬ್ರಾಂಡ್ಸ್ ನೆಕ್ಸ್ಟ್

ನೂತನ ಟಿಎಲ್ ಜಿ ಎಮರ್ಜಿಂಗ್ ಮಾರ್ಕೆಟ್ ಸೂಚ್ಯಂಕದಲ್ಲಿ ಭಾರತದಲ್ಲಿರುವ ಹತ್ತು ಅಗ್ರ ಬ್ರಾಂಡ್ ಗಳಲ್ಲಿ ಏಳನ್ನು ಭಾರತವೇ ಬಾಚಿಕೊಂಡಿವೆ. ಟಿಎಲ್ ಜಿ ಜಾಗತಿಕ "ಗ್ಲೋಬ್ ಸ್ಕಾನ್" ಸಂಶೋಧನಾ ಕಂಪನಿಯಾಗಿದೆ.
ನೂತನ ಟಾಪ್ ಬ್ರಾಂಡ್ ಗಳಲ್ಲಿ ವಿದೇಶಿ ಕಂಪನಿಗಳಾದ ಗೂಗಲ್ ಮೂರನೇ ಸ್ಥಾನ ಪಡೆದರೆ, ನೋಕಿಯಾ 6ನೇ ಮತ್ತು ಫೇಸ್ ಬುಕ್ ಎಂಟನೇ ಸ್ಥಾನ ಪಡೆದಿವೆ.
ಭಾರತದಲ್ಲಿರುವ ಟಾಪ್ 20 ಕಂಪನಿಗಳಲ್ಲಿ ಎಲ್ ಆಂಡ್ ಟಿ(5ನೇ ಸ್ಥಾನ), ಎಸ್ ಬಿಐ(7ನೇ), ಎಲ್ಐಸಿ(12ನೇ), ಭಾರ್ತಿ ಏರ್ಟೆಲ್(13ನೇ), ಒಎನ್ ಜಿಸಿ(14ನೇ), ಆದಿತ್ಯ ಬಿರ್ಲಾ ಗ್ರೂಪ್(15ನೇ) ಸ್ಥಾನ ಪಡೆದಿವೆ. ಒಬೆರಾಯ್ ಗ್ರೂಪ್(16ನೇ ಸ್ಥಾನ) ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಹದಿನೇಳನೇ ಸ್ಥಾನ ಪಡೆದಿವೆ.
ವಿದೇಶಿ ಸಹಭಾಗಿತ್ವ ಹೊಂದಿದ ಭಾರತೀಯ ಕಂಪನಿಗಳಲ್ಲಿ ಮಾರುತಿ ಸುಜುಕಿ ನಾಲ್ಕನೇ ಸ್ಥಾನ ಮತ್ತು ಹಿಂದೂಸ್ತಾನ್ ಯುನಿಲಿವರ್ 9ನೇ ಸ್ಥಾನ ಪಡೆದಿವೆ.












Click it and Unblock the Notifications