ಇ-ಸಿಟಿ ಟೆಕ್ಕಿಗಳ ರಕ್ಷಣೆಗೆ ಸಿಐಎಸ್ಎಫ್

ಇದುವರೆವಿಗೂ ಇನ್ಫೋಸಿಸ್ ಸಂಸ್ಥೆ ಮಾತ್ರ ಸಿಐಎಸ್ಎಫ್ ಭದ್ರತಾ ವ್ಯವಸ್ಥೆಯನ್ನು ಹೊಂದಿತ್ತು. ಆದರೆ, ಎಲೆಕ್ಟ್ರಾನಿಕ್ ಸಿಟಿಯ ಕೈಗಾರಿಕಾ ಸಂಘದ ಮನವಿಯ ಮೇರೆಗೆ ಸಿಐಎಸ್ಎಫ್ ಭದ್ರತೆಯನ್ನು ಒದಗಿಸಲಾಗಿದೆ. ಕ್ಷಿಪ್ತ ಕಾರ್ಯಾಚರಣೆ ಪಡೆಯನ್ನು ಹೊಂದಿರುವ ಸಿಐಎಸ್ಎಫ್ ಹಗಲು-ರಾತ್ರಿ ಲಕ್ಷಾಂತರ ಟೆಕ್ಕಿಗಳ ಜೀವ ರಕ್ಷಣೆಯ ಕಾಯಕದಲ್ಲಿ ತೊಡಗಿದ್ದಾರೆ. ಸದ್ಯ ಸಿಐಎಸ್ಎಫ್ ಭದ್ರತಾ ಪಡೆಯ 68 ಸದಸ್ಯರು ಕಾರ್ಯನಿರ್ವಹಿಸಲಿದ್ದಾರೆ. ಅಗತ್ಯಬಿದ್ದರೆ ಗಸ್ತು ತಿರುಗಲು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications