• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನಜಾತ್ರೆ ನಡುವೆ ವರುಣ್ ನ್ಯಾಯಾಂಗ ಬಂಧನಕ್ಕೆ

By Staff
|

ಪಿಲಿಭಿತ್, ಮಾ. 28: ವರುಣ್ ಬಂಧನ ಪ್ರಹಸನಕ್ಕೆ ಸರಿಯಾದ ವೇದಿಕೆ ಸಜ್ಜುಗೊಳಿಸಿದ್ದ ಬಿಜೆಪಿ, ವರುಣ್ ಬಂಧನ ಪ್ರಹಸನವನ್ನು ಯಶಸ್ವಿಗೊಳಿಸಿತು. ಪಿಲಿಭಿತ್ ಕ್ಷೇತ್ರಕ್ಕೆ ಆಗಮಿಸಿದ ವರುಣ್ ರನ್ನು ಬಿಜೆಪಿಯ ಕಾರ್ಯಕರ್ತರು, ಸಾವಿರಾರು ಅಭಿಮಾನಿಗಳು ಸ್ವಾಗತಿಸಿದರು. ಪಿಲಿಭಿತ್ ನ ನ್ಯಾಯಲಯಕ್ಕೆ ಶರಣಾದ ನಂತರ ಮಾತನಾಡಿದ ವರುಣ್ ಗಾಂಧಿ, ರಾಜಕೀಯ ಕುತಂತ್ರಕ್ಕೆ ನನ್ನನ್ನು ಬಲಿಪಶು ಮಾಡಿದ್ದಾರೆ ಎಂದು ಕಿಡಿಕಾರಿದರು. ಎರಡು ದಿನಗಳ ಕಾಲ ವರುಣ್ ನ್ಯಾಯಾಂಗ ಬಂಧನದಲ್ಲಿರುತ್ತಾರೆ.

"ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ತಲೆ ಬಾಗುವೆ. ನಾನು ಇಲ್ಲಿ ಬಂದಿರುವುದು ನನ್ನ ಜನರನ್ನು ಹುರಿದುಂಬಿಸಲು, ಯಾವ ಕುತಂತ್ರಕ್ಕೂ ನಾನು ಎದುರುವುದಿಲ್ಲ. ನನ್ನ ಆದರ್ಶವನ್ನು ಪಾಲಿಸುವೆ. ಸತ್ಯದ ಮಾರ್ಗಕ್ಕೆ ಸದಾ ಜಯ ಸಿಗುತ್ತದೆ. ನ್ಯಾಯಾಲಯದ ಮೇಲೆ ನಂಬಿಕೆ ಇದೆ " ಎಂದು ವರುಣ್ ಹೇಳಿದರು.

153(A) ಕೋಮು ಪ್ರಚೋದನೆ ಆರೋಪ, ಸೆಕ್ಷನ್ 188(ಭಾರತೀಯ ನೀತಿ ದಂಡ ಸಂಹಿತೆ ಉಲ್ಲಂಘನೆ), ಸೆಕ್ಷನ್ 125 ನಡಿಯಲ್ಲಿ ಪಿಲಿಭಿತ್ ನ ಬರ್ಖೆರಾ ಹಾಗೂ ಹರ್ಡೊಯಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ವರುಣ್ ಗಾಂಧಿ ಅಭಿಮಾನಿಗಳು ಹಾಗೂ ಸ್ಥಳೀಯ ಪೊಲೀಸರ ನಡುವೆ ಕೊಂಚ ಕಾಲ ಘರ್ಷಣೆ ಉಂಟಾಗಿತ್ತು. ಲಕ್ನೋ ಇಂದ ಸುಮಾರು 50 ಕಿಮೀ ದೂರದಲ್ಲಿರುವ ಪಿಲಿಭಿತ್ ಗೆ ವರುಣ್ ಪ್ರಕರಣದಿಂದ ವಿಶ್ವಭೂಪಟದಲ್ಲಿ ತನ್ನ ಗುರುತನ್ನು ಮೂಡಿಸಿದೆ.

(ಏಜೇನ್ಸೀಸ್)

ವರುಣ್ ಗಾಂಧಿ ಬಂಧನ ಪ್ರಹಸನಕ್ಕೆ ಕ್ಷಣಗಣನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X