ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಜರ್ ಸಂದೀಪ್ ಗೆ ಅಶೋಕ್ ಚಕ್ರ ಗೌರವ

By Staff
|
Google Oneindia Kannada News

Sandeep honours with Ashok Chakra
ನವದೆಹಲಿ, ಜ.24: ಮುಂಬೈ ಭಯೋತ್ಪಾದಕರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸೇರಿದಂತೆ 11 ಮಂದಿಯನ್ನು ಆಯ್ಕೆ ಮಾಡಲಾಗಿದೆ.ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶಾಂತಿಕಾಲದಲ್ಲಿ ನೀಡಲಾಗುವ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿ ಇದಾಗಿದ್ದು ದಾಖಲೆಯ 11 ಮಂದಿಗೆ ನೀಡಲಾಗುತ್ತಿದೆ.

ಯಾರ್ಯಾರಿಗೆ ಅಶೋಕ್ ಚಕ್ರ?
1. ಮೇಜರ್ ಸಂದೀಪ್ ಉನ್ನಿಕೃಷ್ಣನ್
2. ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ
3. ಅಶೋಕ್ ಕಾಮ್ಟೆ
4. ವಿಜಯ್ ಸಲಾಸ್ಕರ್
5. ತುಕಾರಾಂ ಒಂಬಳೆ
6. ಗಜೇಂದರ್ ಸಿಂಗ್
(ಇವರೆಲ್ಲಾ ಮುಂಬೈ ಉಗ್ರರ ದಾಳಿ ವೇಳೆ ವೀರಮರಣ ಅಪ್ಪಿದವರು)

ಅಶೋಕ್ ಚಕ್ರ ಪಡೆದ ಇತರರು
7. ದೆಹಲಿ ಬಾಟ್ಲಾ ಹೌಸ್ ಶೂಟಔಟ್ ನಲ್ಲಿ ಮರಣ ಹೊಂದಿದ ಪೋಲಿಸ್ ಇನ್ಸಪೆಕ್ಟರ ಎಂ .ಸಿ. ಶರ್ಮಾ.
8. ಕಾಶ್ಮೀರದ ಕುಪ್ವಾರದಲ್ಲಿ 12 ಮಂದಿ ಉಗ್ರರನ್ನು ಕೊಂದ ಬಳಿಕ ಮರಣ ಹೊಂದಿದ ಕರ್ನಲ್ ಜೋಜಾನ್ ಥಾಮಸ್.
9. ಉಗ್ರರ ವಿರುದ್ಧ ಕಾದಾಟದಲ್ಲಿ ಮರಣಹೊಂದಿದ ಹವಾಲ್ದಾರ್ ಬಹಾದ್ದೂರ್ ಸಿಂಗ್
10. ಮೇಘಾಲಯದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಮರಣಹೊಂದಿದ ಆರ್. ಪಿ .ಡಿಂಗ್ ಡೋ
11. ಒರಿಸ್ಸಾದಲ್ಲಿ ನಕ್ಸಲರ ವಿರುದ್ಧ ಹೋರಾಟದಲ್ಲಿ ಮರಣಹೊಂದಿದ ಪ್ರಮೋದ್ ಕುಮಾರ್ ಸತಪತಿ.

ಗಣರಾಜ್ಯೋತ್ಸವದ ದಿನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ವಿಜೇತರ ಸಂಬಂಧಿಗಳಿಗೆ ಪ್ರತಿ ತಿಂಗಳು ರು.1,400 ಗೌರವಧನ ನೀಡಲಾಗುತ್ತದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X