ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯಪಾಲರ ಪ್ರಶಂಸೆ

ಬೆಂಗಳೂರು : ರಾಜ್ಯ ಸರ್ಕಾರದ ಕಳೆದ ಒಂದು ವರ್ಷದ ಸಾಧನೆಯ ವಿವರಗಳನ್ನು ರಾಜ್ಯಪಾಲ ಟಿ.ಎನ್‌.ಚತುರ್ವೇದಿ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.

ಗುರುವಾರ ಆರಂಭಗೊಂಡ ವಿಧಾನಮಂಡಲದ ಜಂಟಿ ಅಧಿವೇಶ ಉದ್ದೇಶಿಸಿ ಅವರು ತಮ್ಮ 24ಪುಟಗಳ ಭಾಷಣ ಓದಿದರು.

ಬಡವರಿಗಾಗಿ ಆರು ಲಕ್ಷ ಮನೆಗಳ ನಿರ್ಮಾಣ, 4000 ಕೋಟಿ ವೆಚ್ಚದಲ್ಲಿ 3000 ಕಿ.ಮೀ ಉದ್ದದ ರಸ್ತೆ ನಿರ್ಮಾಣ, ಮೂರು ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ಮಂಗಳೂರು ಸಮೀಪ ವಿಶೇಷ ಬೃಹತ್‌ ಆರ್ಥಿಕ ವಲಯ ರಚನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಅವರು ಭಾಷಣದಲ್ಲಿ ಪ್ರಸ್ತಾಪಿಸಿದರು.

ಸಾಮಾನ್ಯ ವ್ಯಕ್ತಿಗಳ ಅವಶ್ಯಕತೆಗಳಿಗೆ ಸರ್ಕಾರ ಸ್ಪಂದಿಸಿದೆ. ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕ ತಂದಿದೆ. ಶೇ.4ರ ಬಡ್ಡಿ ದರಕ್ಕೆ ಕೃಷಿ ಸಾಲ ಸೇರಿದಂತೆ ಅನೇಕ ಯೋಜನೆಗಳು ರೈತಪರವಾಗಿವೆ. ಭಾಗ್ಯಲಕ್ಷ್ಮಿ ಯೋಜನೆ, ಸುವರ್ಣ ಗ್ರಾಮ ಯೋಜನೆ, ಬಾಲಕಿಯರಿಗೆ ಸೈಕಲ್‌ ವಿತರಣೆ, ರಿಯಾಯಿತಿ ದರದಲ್ಲಿ ಬೀಜ, ಈರುಳ್ಳಿ, ಟೊಮೆಟೊ ಮತ್ತಿತರ ಬೆಲೆಗಳಿಗೆ ಬೆಂಬಲ ಬೆಲೆ -ಹೀಗೆ ನಾನಾ ಯೋಜನೆಗಳು ಸಮಾಜಮುಖಿಯಾಗಿವೆ ಎಂದು ರಾಜ್ಯಪಾಲರು ಹೇಳಿದ್ದಾರೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+