RCB Playing 11 Prediction: ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿ ಪ್ಲೇಯಿಂಗ್ 11 ಭವಿಷ್ಯ
RCB Playing 11: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2026ರ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರುವ ಗುರಿ ಹೊಂದಿದೆ. ಬುಧವಾರ (ಏಪ್ರಿಲ್ 15) ತವರು ಮೈದಾನ ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಹಾಗಾದ್ರೆ, ಪ್ಲೇಯಿಂಗ್ 11 ಹೇಗಿರಲಿದ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಒಂದು ಸೋಲನ್ನು ಹೊರತುಪಡಿಸಿ, ಹಾಲಿ ಚಾಂಪಿಯನ್ ಆರ್‌ಸಿಬಿ ಈ ಬಾರಿಯ ಐಪಿಎಲ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಹಾದಿಯಲ್ಲಿ ಅತ್ಯಂತ ಯಶ್ವಿಯಾಗಿ ಮುನ್ನುಗ್ಗುತ್ತಿದೆ. ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಅವರ ಆರಂಭಿಕ ಜೋಡಿಯು ಸತತವಾಗಿ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಡುತ್ತಿದೆ.

ಬಲಿಷ್ಠ ಬ್ಯಾಟಿಂಗ್, ಬೌಲಿಂಗ್ ಪಡೆ ಹೊಂದಿರುವ ಆರ್‌ಸಿಬಿ
ಆರಂಭಿಕರ ಅಬ್ಬರದ ನಂತರ ದೇವದತ್ ಪಡಿಕ್ಕಲ್ ಮತ್ತು ನಾಯಕ ರಜತ್ ಪಾಟಿದಾರ್ ಅವರು ಜವಾಬ್ದಾರಿಯುತ ಆಟದ ಮೂಲಕ ಇನಿಂಗ್ಸ್ ಮುಂದುವರಿಸುತ್ತಿದ್ದಾರೆ. ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ, ಬೌಲಿಂಗ್ ವಿಭಾಗದಲ್ಲೂ ಸ್ಪಿನ್ನರ್‌ಗಳು ಮತ್ತು ವೇಗಿಗಳು ಮಿಂಚುತ್ತಿದ್ದಾರೆ. ಇದು ತಂಡದ ಸಮತೋಲನವನ್ನು ಹೆಚ್ಚಿಸಿದೆ. ಹೀಗೆ ಆರ್‌ಸಿಬಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಪರ್ಫೆಕ್ಟ್ ಆಗಿ ಕಾಣಿಸುತ್ತಿದೆ. ಪ್ರಸ್ತುತ ಫಾರ್ಮ್ ಗಮನಿಸಿದರೆ, ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ಸಾಲಿನಲ್ಲಿದೆ.
ಮತ್ತೊಂದೆಡೆ, ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲಿಂಗ್ ಪ್ರದರ್ಶನ ಅದ್ಭುತವಾಗಿದ್ದರೂ, ಈ ಸೀಸನ್‌ನಲ್ಲಿ ಇನ್ನೂ 200 ರನ್‌ಗಳ ಗಡಿ ದಾಟದ ಏಕೈಕ ತಂಡ ಎಂಬ ಹಣೆಪಟ್ಟಿ ಹೊತ್ತಿದೆ. ಮೊಹಮ್ಮದ್ ಶಮಿ ಮತ್ತು ಮುಕುಲ್ ಚೌಧರಿ ಅವರಂತಹ ಬೌಲರ್‌ಗಳ ನೆರವಿನಿಂದ ಲಕ್ನೋ ಬೌಲಿಂಗ್ ವಿಭಾಗವು ಉತ್ತಮವಾಗಿದೆ.
ಬ್ಯಾಟಿಂಗ್ ಮುಗ್ಗರಿಸುತ್ತಿರುವ ಎಲ್‌ಎಸ್‌ಜಿ
ಆರಂಭಿಕ ಆಟಗಾರರು ಮತ್ತು ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಲು ವಿಫಲರಾಗುತ್ತಿರುವುದು ಲಕ್ನೋ ತಂಡಕ್ಕೆ ದೊಡ್ಡ ತಲೆನೋವಾಗಿದೆ. ನಾಯಕ ರಿಷಭ್ ಪಂತ್, ನಿಕೋಲಸ್ ಪೂರನ್ ಮತ್ತು ಮಿಚೆಲ್ ಮಾರ್ಷ್ ಅವರಂತಹ ಸ್ಫೋಟಕ ಬ್ಯಾಟರ್‌ಗಳಿದ್ದರೂ, ತಂಡವು ಈವರೆಗೆ ದೊಡ್ಡ ಮೊತ್ತವನ್ನು ಕಲೆಹಾಕಲು ಸಾಧ್ಯವಾಗಿಲ್ಲ. ಇನ್ನೂ ರನ್ ಸ್ನೇಹಿ ಚಿನ್ನಸ್ವಾಮಿ ಮೈದಾನದಲ್ಲಿ ಆಡುವಾಗ ಈ ಬ್ಯಾಟಿಂಗ್ ನ್ಯೂನತೆಗಳನ್ನು ಸರಿಪಡಿಸಿಕೊಂಡು ಆರ್‌ಸಿಬಿ ತಂಡಕ್ಕೆ ಪ್ರಬಲ ಪೈಪೋಟಿ ನೀಡಲು ಲಕ್ನೋ ತಂಡವು ಯೋಜನೆ ರೂಪಿಸುತ್ತಿದೆ.
ಎಲ್‌ಎಸ್‌ಜಿ ತಂಡವು ತನ್ನ ಬೌಲಿಂಗ್ ಶಕ್ತಿಯ ಮೇಲೆ ನಂಬಿಕೆ ಇಟ್ಟಿದ್ದರೂ, ಅಂತಿಮವಾಗಿ ಪಂದ್ಯ ಗೆಲ್ಲಲು ಬ್ಯಾಟಿಂಗ್ ವಿಭಾಗವು ಹೆಚ್ಚಿನ ಕೊಡುಗೆ ನೀಡಬೇಕಿದೆ. ಈ ಸೀಸನ್‌ನ ಮೊದಲ 200+ ಮೊತ್ತವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧವೇ ದಾಖಲಿಸುತ್ತಾರೆಯೇ ಎಂದು ಕಾದುನೋಡಬೇಕಿದೆ.
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಾಕೋಬ್ ಡಫಿ, ಸುಯಶ್ ಶರ್ಮಾ.. ಜೋಶ್ ಹ್ಯಾಜಲ್‌ವುಡ್ (ಇಂಪ್ಯಾಕ್ಟ್ ಪ್ಲೇಯರ್)












Click it and Unblock the Notifications