E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು
E-Khata: ಬೆಂಗಳೂರಿನ ಆಸ್ತಿದಾರರಿಗೆ ಮತ್ತೊಂದು ಗುಡ್‌ನ್ಯೂಸ್ ಕೊಡುವುದಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ. ಈ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲಾ ಆಸ್ತಿಗಳಿಗೂ ಇ ಖಾತಾ - ಡಿಜಿಟಲ್ ರೂಪಾದ ಆಸ್ತಿ ನೀಡುತ್ತಿದೆ. ಬೆಂಗಳೂರಿನಲ್ಲಿ ಇದನ್ನು ಮೊದಲು ಪ್ರಾಯೋಗಿಕವಾಗಿ ಪ್ರಾರಂಭ ಮಾಡಿದರೂ ಸಹ ಮುಂದೆ ಇದನ್ನು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಗೆ ವಿಸ್ತರಣೆ ಮಾಡಲಾಗಿದೆ. ಆದರೆ ಪ್ರಾರಂಭಿಕವಾಗಿ ಪ್ರಾರಂಭಿಸಿದ ಬೆಂಗಳೂರಿನಲ್ಲಿಯೇ ಲಕ್ಷಾಂತರ ಜನರಿಗೆ ಇಲ್ಲಿಯ ವರೆಗೆ ಇ ಖಾತಾ ಸೇವೆ ಸಿಕ್ಕಿಲ್ಲ. ಇದೀಗ ಇ ಖಾತಾದಲ್ಲಿ ಇರುವ ಗೊಂದಲಗಳು ಹಾಗೂ ಸಮಸ್ಯೆಯನ್ನು ತಪ್ಪಿಸುವ ಉದ್ದೇಶದಿಂದ ಇ ಖಾತಾ ಜನಸೇವಕ ಎನ್ನುವ ಯೋಜನೆಯನ್ನು ಪರಿಚಯಿಸಿದೆ.
E-Khata: ಏನಿದು ಇ ಖಾತಾ - ಜನ ಸೇವಕ ಯೋಜನೆ
ಬೆಂಗಳೂರಿನ ಆಸ್ತಿದಾರರಿಗೆ ಅನುಕೂಲವಾಗುವಂತೆ ಹಾಗೂ ಸುಲಭವಾಗಿ ಇ ಖಾತಾ ಮಾಡಿಕೊಳ್ಳುವುದಕ್ಕೆ ಅನುಕೂಲವಾಗುಂತೆ ಕರ್ನಾಟಕ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಇ ಖಾತಾದಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಅದರಲ್ಲಿ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯಲ್ಲಿ ಪರಿಚಯಿಸಲಾಗಿರುವ ಇ ಖಾತಾ - ಜನ ಸೇವಕ ಯೋಜನೆಯು ಸಹ ಪ್ರಮುಖವಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಪರಿಚಯಿಸಿರುವ ಜನಸೇವಕ ಯೋಜನೆಯ ಮೂಲಕ ನೀವು ಇನ್ಮುಂದೆ ನಿಮ್ಮ ಮನೆಯಲ್ಲಿಯೇ ಇ-ಖಾತಾ ಪಡೆದುಕೊಳ್ಳುವುದಕ್ಕೆ ಅವಕಾಶ ಇಲಿದೆ.

E-Khata: ಮನೆಯಲ್ಲೇ ಇ ಖಾತಾಗೆ ಇರುವ ಆಯ್ಕೆಗಳು
ಜನಸೇವಕರಿಗಾಗಿ ನೀವು ದೂರವಾಣಿ ಸಂಖ್ಯೆ 080-49203888ಕ್ಕೆ ಕರೆ ಮಾಡಬಹುದಾಗಿದೆ.
ಆನ್‌ಲೈನ್ ಮೂಲಕ ಬುಕ್ ಮಾಡಿಕೊಳ್ಳುವುದಕ್ಕೆ: https://Janasevaka.karnataka.gov.in ಎನ್ನುವ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.
ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸುವ ಇ ಖಾತಾಗೆ ಎಷ್ಟು ಹಣ
ಕರ್ನಾಟಕ ಸರ್ಕಾರವು ಜನಸೇವಕರನ್ನು ತಮ್ಮಮನೆಗೆ ಕಳುಹಿಸಲಿದ್ದು, ನೀವು ನಿಮ್ಮ ಮನೆಯಲ್ಲಿಯೇ ಕುಳಿತು ಇ-ಖಾತಾಗೆ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸಲು 160 ರೂಪಾಯಿ ಆಗಲಿದೆ.
ವೈಬ್‌ಸೈಟ್: https://bbmpeAasthi.karnataka.gov.in ಮೂಲಕ ಇ ಖಾತಾ ಡೌನ್‌ಲೋಡ್ ಮಾಡಿಕೊಳ್ಳಲು 125 ರೂಪಾಯಿ ಪಾವತಿ ಮಾಡಬೇಕು.
ಬೆಂಗಳೂರು ಒನ್ ಕೇಂದ್ರದಲ್ಲಿ ಈ ಹಿಂದೆ ನೀಡಲಾದ ಇ-ಖಾತಾ ಮುದ್ರಣಕ್ಕೆ 45 ರೂಪಾಯಿ ಮತ್ತು ಇತ್ತೀಚಿನ ಇ-ಖಾತ ಮುದ್ರಣಕ್ಕೆ 170 ರೂಪಾಯಿ.
ಮನೆಗೆ ಭೇಟಿ ನೀಡುವ ಮೂಲಕ ಜನಸೇವಕರಿಂದ ಇ-ಖಾತಾ ಮಾಡಿಸಲು 125 ರೂಪಾಯಿ + ಆನ್‌ಲೈನ್ ಶುಲ್ಕ 45 ರೂಪಾಯಿ+ 115 ರೂಪಾಯಿ ಸೇರಿ ಒಟ್ಟು 160 ರೂಪಾಯಿ ಆಗಲಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಮನೆಯಿಂದಲೇ ಇ ಖಾತಾ ಬೇಕಾಗುವ ದಾಖಲೆಗಳು
1. ಮಾಲೀಕರ ಆಧಾರ್ ಕಾರ್ಡ್
2. ಆಸ್ತಿ ತೆರಿಗೆ SMS ಅರ್ಜಿ ಸಂಖ್ಯೆ
3. ಆಸ್ತಿ ಮಾರಾಟ/ನೋಂದಣಿ ಡೀಡ್ ಸಂಖ್ಯೆ - ಕಾವೇರಿ ತಂತ್ರಾಂಶದಿಂದ ವಿದ್ಯುನ್ಮಾನವಾಗಿ ಪಡೆದುಕೊಳ್ಳುವುದು.
4. ಬೆಸ್ಕಾಂ ಅರ್ಜಿ ಸಂಖ್ಯೆ - ಖಾಲಿ ನಿವೇಶನಗಳಿಗೆ ಐಚ್ಛಿಕ
5. ಆಸ್ತಿಯ ಫೋಟೋ
ಇ-ಖಾತಾ ಸಾರ್ವಜನಿಕರಿಗೆ ಸಹಾಯವಾಣಿ ಸಂಖ್ಯೆ: 94806 83695












Click it and Unblock the Notifications