Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್‌ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್
Hardik vs Krunal Pandya: ವಾಂಖೆಡೆಯಲ್ಲಿ ಏಪ್ರಿಲ್ 12ರಂದು ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಪಂದ್ಯವು ಕೇವಲ ಕ್ರಿಕೆಟ್ ಆಟವಾಗಿ ಉಳಿಯಲಿಲ್ಲ. ಬದಲಾಗಿ ಪಾಂಡ್ಯ ಸಹೋದರರ ನಡುವಿನ ಶೀತಲ ಸಮರದ ವೇದಿಕೆಯಾಗಿ ಬದಲಾಯಿತು.
ಟಾಸ್ ಗೆದ್ದ ಮುಂಬೈ ಇಂಡಿಯನಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಆರ್‌ಸಿಬಿ, ಫಿಲ್ ಸಾಲ್ಟ್ (78) ಮತ್ತು ನಾಯಕ ರಜತ್ ಪಾಟಿದಾರ್ (53) ಅವರ ಸ್ಫೋಟಕ ಆಟದ ನೆರವಿನಿಂದ 240/4 ರ ಬೃಹತ್ ಮೊತ್ತ ಪೇರಿಸಿತು. ವಿರಾಟ್ ಕೊಹ್ಲಿ 50 ರನ್, ಟೀಮ್ ಡೇವಿಡ್ ಅಜೇಯ 34 ರನ್ ಸಿಡಿಸಿ ಮಿಂಚಿದರು.

ಹಾರ್ದಿಕ್ vs ಕೃನಾಲ್
ಆರ್‌ಸಿಬಿ ನೀಡಿದ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, ಶೆರ್ಫೇನ್ ರುದರ್ಫೋರ್ಡ್ (71*) ಅವರ ಹೋರಾಟದ ಹೊರತಾಗಿಯೂ 222/5 ರನ್‌ಗಳಿಗೆ ಸೀಮಿತಗೊಂಡು 18 ರನ್‌ಗಳಿಂದ ಹೀನಾಯ ಸೋಲು ಕಂಡಿತು. ಪಂದ್ಯದ ಫಲಿತಾಂಶಕ್ಕಿಂತ ಹೆಚ್ಚಾಗಿ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ನಡುವಿನ ವರ್ತನೆ ಎಲ್ಲರ ಗಮನ ಸೆಳೆಯಿತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ಸಹೋದರರ ನಡುವೆ ಎಲ್ಲವೂ ಸರಿಯಿಲ್ಲ ಎಂಬಂತಾಗಿದೆ.
ಹಾರ್ದಿಕ್ ಔಟಾದಾಗ ಕುಣಿದಾಡಿದ ಕೃನಾಲ್
ಹಾರ್ದಿಕ್ ಬ್ಯಾಟಿಂಗ್‌ಗೆ ಬಂದಾಗ, ಸ್ಪಿನ್ನರ್ ಆಗಿದ್ದರೂ ಕೃನಾಲ್ ತಮ್ಮ ತಮ್ಮನಿಗೆ ಬೌನ್ಸರ್ ಎಸೆದು ಅಚ್ಚರಿ ಮೂಡಿಸಿದರು. ಬಳಿಕ ಹಾರ್ದಿಕ್ ಪಾಂಡ್ಯ ಜೇಕಬ್ ಢಪಿ ಬೌಲಿಂಗ್‌ಲ್ಲಿ ಕ್ಯಾಚ್ ನೀಡಿ ಔಟ್ ಆದಾಗ, ಕೃನಾಲ್ ವಿಕೆಟ್ ಪಡೆದ ಬೌಲರ್‌ಗಿಂತಲೂ ಹೆಚ್ಚು ಸಂಭ್ರಮಿಸಿದ್ದು ಕಂಡುಬಂತು. ಈ ವಿಡಿಯೋ ಇದೀಗ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.
ಅಲ್ಲದೆ, ಪಂದ್ಯ ಮುಗಿದ ನಂತರ ಎರಡೂ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡಿದರು. ಆದರೆ, ಕೃನಾಲ್ ತಮ್ಮ ತಮ್ಮ ಹಾರ್ದಿಕ್ ಅವರ ಕೈಕುಲುಕದೆ ದೂರ ಉಳಿದಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾಮಾನ್ಯವಾಗಿ ಈ ಹಿಂದೆ ಪಂದ್ಯದ ನಂತರ ಸಹೋದರರಿಬ್ಬರು ಮೈದಾನದಲ್ಲಿ ಹರಟೆ ಹೊಡೆಯುತ್ತಿದ್ದರು. ಆದರೆ ಈ ಬಾರಿ ಅಂತಹ ಯಾವುದೇ ದೃಶ್ಯ ಕಂಡುಬರದಿರುವುದು ಅಭಿಮಾನಿಗಳಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನದಲ್ಲಾದ ಬದಲಾವಣೆಗಳು ಮತ್ತು ನತಾಶಾ ಸ್ಟಾಂಕೋವಿಕ್ ಅವರಿಂದ ಬೇರ್ಪಟ್ಟ ನಂತರ ಪಾಂಡ್ಯ ಕುಟುಂಬದ ಒಳಗಿನ ಸಂಬಂಧಗಳಲ್ಲಿ ಬಿರುಕು ಮೂಡಿರಬಹುದು ಎಂಬ ವದಂತಿಗಳಿಗೆ ಈ ಪಂದ್ಯದ ಪುಷ್ಟಿ ನೀಡಿತು. ಕೃನಾಲ್ ಅವರ ಪತ್ನಿ ಪಂಖುರಿ ಶರ್ಮಾ ಅವರು ನತಾಶಾ ಅವರೊಂದಿಗೆ ಕಾಣಿಸಿಕೊಳ್ಳುತ್ತಿರುವುದು ಮತ್ತು ಹಾರ್ದಿಕ್ ತಮ್ಮ ಹೊಸ ಗೆಳತಿಯೊಂದಿಗೆ ಕಾಣಿಸಿಕೊಳ್ಳುತ್ತಿರುವುದು ಈ ಕೌಟುಂಬಿಕ ಕಲಹಕ್ಕೆ ಕಾರಣವಾಗಿರಬಹುದು ಎನ್ನುವ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಒಟ್ಟಿನಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿನ ಪ್ರೇಕ್ಷಕರು ಒಂದು ಹೈ-ಸ್ಕೋರಿಂಗ್ ಪಂದ್ಯವನ್ನು ಆನಂದಿಸಿದರು. ಆದರೂ, ಭಾರತೀಯ ಕ್ರಿಕೆಟ್‌ನ ಈ ಪ್ರೀತಿಯ ಸಹೋದರರ ನಡುವಿನ ಈ ಅಂತರ ಕ್ರೀಡಾಭಿಮಾನಿಗಳಲ್ಲಿ ಅನುಮಾನಗಳನ್ನು ಹುಟ್ಟುಹಾಕಿದೆ.
ನೆಟ್ಟಿಗರು ಹೇಳೋದೇನು?
2025ರ ಅಂತ್ಯದ ವೇಳೆಗೆ ಹಾರ್ದಿಕ್ ಪಾಂಡ್ಯ ಮತ್ತು ಮಾಡೆಲ್ ಮಹೀಕಾ ಶರ್ಮಾ ಮೊದಲ ಬಾರಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದರು. ತದನಂತರ, 2026ರ ಆರಂಭದಲ್ಲಿ ಹಾರ್ದಿಕ್ ತಾವು ಮಹೀಕಾ ಶರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವುದನ್ನು ಖಚಿತಪಡಿಸಿದರು. ಸಾಮಾಜಿಕ ಜಾಲತಾಣಗಳ ಮೂಲಕ ನೆಟ್ಟಿಗರು ಹಾರ್ದಿಕ್ ಅವರ ಈ ಹೊಸ ಸಂಬಂಧವೇ ಅವರ ಮತ್ತು ಅವರ ಅಣ್ಣ ಕೃನಾಲ್ ಪಾಂಡ್ಯ ಕುಟುಂಬದ ನಡುವೆ ಅಂತರಕ್ಕೆ ನೇರ ಕಾರಣ ಎಂದು ಹೇಳುತ್ತಿದ್ದಾರೆ. ಹಾರ್ದಿಕ್ ಅವರ ಈ ನಿರ್ಧಾರಗಳು ಪಾಂಡ್ಯ ಸಹೋದರರ ನಡುವಿನ ಆತ್ಮೀಯತೆ ಕಡಿಮೆಯಾಗಲು ಕಾರಣವಾಗಿರಬಹುದು ಎಂಬ ವದಂತಿಗಳು ಕೂಡ ಹರಿದಾಡುತ್ತಿವೆ.












Click it and Unblock the Notifications