Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ
Career Break: ಕಾಲ ಬದಲಾದಂತೆ ಜನರ ಅಭಿರುಚಿಗಳು ಹಾಗೂ ಆಯ್ಕೆಗಳು ಸಹ ಬದಲಾಗುತ್ತವೆ. ಮೊದಲೆಲ್ಲವು ಜೀವಿತಾವಧಿ ಕೆಲಸ ಮಾಡಬೇಕು ಎನ್ನುವುದು ಜನರ ಗುರಿಯಾಗಿರುತ್ತಿತ್ತು. ನಿವೃತ್ತಿ ಅಥವಾ ಅವಧಿ ಪೂರ್ವ ನಿವೃತ್ತಿ ಎನ್ನುವುದು ದೂರದ ಮಾತಾಗಿತ್ತು. ಆದರೆ ಇದೀಗ ಕಾಲಮಾನ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕರು ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡುವ ಬದಲು ತಮ್ಮ ಕೆಲಸಗಳಿಂದ ವಿರಾಮ ತೆಗೆದುಕೊಳ್ಳಬೇಕು, ಜೀವಿಸಬೇಕು ಅಥವಾ ಜೀವನವನ್ನು ಎಂಜಾಯ್ ಮಾಡಬೇಕು ಎಂದು ಇಚ್ಛಿಸುತ್ತಿದ್ದಾರೆ.
ಸ್ಥಿರ ಕೆಲಸಗಳಿಂದ ಅಥವಾ ನಿರಂತರವಾಗಿ ಕೆಲಸ ಮಾಡುವುದರಿಂದ ದೂರ ಸರಿಯುತ್ತಿದ್ದಾರೆ. ವಿಶ್ರಾಂತಿ ಪಡೆಯಲು, ಪ್ರಯಾಣಿಸಲು ಅಥವಾ ತಮ್ಮ ಇಷ್ಟದ ಕೆಲಸಗಳನ್ನು ಮಾಡುವುದಕ್ಕೆ ಮುಂದಾಗುತ್ತಿದ್ದಾರೆ. ದೊಡ್ಡ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ ಬೆಂಗಳೂರು ಮೂಲದ (Recruiter) ನೇಮಕಾತಿ ದಾರರಾದ ಆಶಿಶ್ ಚೋಪ್ರಾ ಎನ್ನುವವರು ಈ ರೀತಿಯ ಆಯ್ಕೆಯೊಂದನ್ನು ತೆಗೆದುಕೊಂಡಿದ್ದಾರೆ. ಗೂಗಲ್‌ನಲ್ಲಿ 4 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ ಅನುಭವ ಅವರಿಗೆ. ಅಮೆಜಾನ್, ಫಿಲಿಪ್ಸ್ ಮತ್ತು ವಿಪ್ರೋ ಸೇರಿದಂತೆ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದು ದಶಕಕ್ಕೂ ಹೆಚ್ಚು ಅವಧಿ ಕೆಲಸ ಮಾಡಿರುವ ಅನುಭವ ಹೊಂದಿರುವ ಚೋಪ್ರಾ ಅವರು, ಲಿಂಕ್ಡ್‌ಇನ್‌ನಲ್ಲಿ ಮಾಡಿರುವ ಪೋಸ್ಟ್ ಆನ್‌ಲೈನ್‌ನಲ್ಲಿ ಗಮನ ಸೆಳೆಯುತ್ತಿದೆ.

ಆಶಿಶ್ ಚೋಪ್ರಾ ಲಿಂಕ್ಡ್‌ಇನ್ ಪೋಸ್ಟ್‌ನಲ್ಲೇನಿದೆ
ಆಶಿಶ್ ಚೋಪ್ರಾ ಲಿಂಕ್ಡ್‌ಇನ್ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ನಾನು ಸುಮಾರು 4.5 ವರ್ಷಗಳ ನಂತರ ಅಧಿಕೃತವಾಗಿ ಗೂಗಲ್ ಸಂಸ್ಥೆಯನ್ನು ತೊರೆಯುತ್ತಿದ್ದೇನೆ. ತೀರಾ ಅಗತ್ಯವಾದ ವೃತ್ತಿಜೀವನಕ್ಕಾಗಿ ಈ ವಿರಾಮವನ್ನು ತೆಗೆದುಕೊಳ್ಳುತ್ತಿದ್ದೇನೆ. ಒಂದು ದಶಕದಲ್ಲಿ ಮೊದಲ ಬಾರಿಗೆ ಖಾಲಿ ಕ್ಯಾಲೆಂಡರ್ (ಯಾವುದೇ ದಿನಾಂಕಕ್ಕೆ ನಿರ್ದಿಷ್ಟವಾದ ಕೆಲಸ ಮಾಡಬೇಕು ಎನ್ನುವ ಗುರಿ) ಇಲ್ಲದಿರುವುದು ವಿಚಿತ್ರ ಭಾವನೆ, ಆದರೆ ನನ್ನ ಡೈರಿಯಲ್ಲಿ ಮೀಟಿಂಗ್ ಬದಲಿಗೆ ನನ್ನ ಪಾಸ್‌ಪೋರ್ಟ್‌ನಲ್ಲಿ ಅಂಚೆಚೀಟಿಗಳಿಂದ ಅದನ್ನು ತುಂಬುತ್ತಿದ್ದೇನೆ. ಅರ್ಥಾತ್ ವಿದೇಶಿ ಪ್ರವಾಸಗಳಿಗೆ ಮುಂದಾಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಒಂದು ಬ್ರೇಕ್ ಬೇಕು ಕಂಣ್ರಿ
ಆಶಿಶ್ ಚೋಪ್ರಾ ಅವರು ಲೈಫ್‌ನಲ್ಲಿ ವೃತ್ತಿ ಜೀವನದಲ್ಲಿ ಸಣ್ಣದೊಂದು ಬ್ರೇಕ್ ಬೇಕು ಎಂದು ಬರೆದುಕೊಂಡಿದ್ದಾರೆ. ವಿದೇಶಿ ಪ್ರವಾಸಗಳನ್ನು ಮಾಡಿ ಹಿಂದಿರುಗುವ ಸಂದರ್ಭದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಹುಡುಕುವುದಿಲ್ಲ ಎಂದು ಅವರು ಹೇಳಿದ್ದಾರೆ. 10 ವರ್ಷಗಳ ಕಾಲ ನಿದ್ದೆ ಇಲ್ಲದ ರಾತ್ರಿಗಳನ್ನು ನೆನಪಿಸಿಕೊಳ್ಳುತ್ತೇನೆ. ಅಲರಾಮ್‌ಗಳು ಇಲ್ಲದೆ ಇರುವುದು ಆತ್ಮಕ್ಕೆ ಹೊಸ ಅನುಭವ ಕೊಡಬಹುದು ಎಂದೂ ಅವರು ಹೇಳಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು
ಇನ್ನು ಚೋಪ್ರಾ ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅನೇಕರು ವಿಶ್ರಾಂತಿ ಮತ್ತು ತಮ್ಮ ವೈಯಕ್ತಿಕ ಅಭಿರುಚಿಗೆ ಸಮಯ ಕೊಡುತ್ತಿರುವುದು ಒಳ್ಳೆಯ ವಿಚಾರ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನ ಸಂಬಳ ಬಂದರೂ ಕೆಲಸದಿಂದ ದೂರ ಇರುವ ಇವರ ನಿರ್ಧಾರವನ್ನು ಹಲವರು ಶ್ಲಾಘಿಸಿದ್ದಾರೆ. ನಿಮ್ಮ ಅರ್ಹವಾದ ವೃತ್ತಿ ವಿರಾಮಕ್ಕೆ ಅಭಿನಂದನೆಗಳು. ಪ್ರಯಾಣ, ವಿಶ್ರಾಂತಿ ಮತ್ತು ವೈಯಕ್ತಿಕ ಅಭಿರುಚಿಗೆ ಸಮಯ ಕೊಡುವುದು ಒಳ್ಳೆಯ ಸಂಗತಿ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications