Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ
Bengaluru Property: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಪ್ರಾಪರ್ಟಿ ಬೆಲೆಯು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಚಿನ್ನದ ಬೆಲೆಯಲ್ಲಿ ಏರಿಳಿತವಾದರೂ ಸಹ ರಿಯಲ್ ಎಸ್ಟೇಟ್ ಹೂಡಿಕೆಯು ಲಾಭವಾಗಿ ಪರಿಣಮಿಸಿದೆ. ರಿಯಲ್ ಎಸ್ಟೇಟ್ ಹೂಡಿಕೆಯು ಬೆಂಗಳೂರಿನಲ್ಲಿ ಬಹುತೇಕರಿಗೆ ನಷ್ಟವನ್ನು ತಂದೊಡ್ಡಿಲ್ಲ. ಇದೀಗ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಮೆಟ್ರೋ ಕಾಮಗಾರಿಯ ಕಾರಣಕ್ಕೆ ಪ್ರಾಪರ್ಟಿ ಬೆಲೆಯು ಭರ್ಜರಿ ಹೆಚ್ಚಳವಾಗಿದೆ. ವಿವಿಧ ಭಾಗಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಶುರುವಾಗಿದ್ದು, ಬೆಂಗಳೂರು ಮೆಟ್ರೋ ನೀಲಿ (ಬ್ಲೂ ಲೈನ್)ನ 58.19 ಕಿಮೀ ಉದ್ದದ ಯೋಜನೆಯಿಂದಾಗಿ ಈ ಭಾಗಗಳಲ್ಲಿ ಭೂಮಿಗೆ ಚಿನ್ನದ ಬೆಲೆ ಬರುವುದಕ್ಕೆ ಕಾರಣವಾಗಿದೆ.
ಬೆಂಗಳೂರು ನಮ್ಮ ಮೆಟ್ರೋ ನೀಲಿ (ಬ್ಲೂ ಲೈನ್)ನ 58.19 ಕಿಮೀ ಉದ್ದದ ಕಾರಿಡಾರ್ ಯೋಜನೆ ಇದಾಗಿದ್ದು, ಬೆಂಗಳೂರು ದಕ್ಷಿಣ ಪ್ರದೇಶವನ್ನು ಬೆಂಗಳೂರು ಉತ್ತರದ ವಿಮಾನ ನಿಲ್ದಾಣದೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಯೋಜನೆಯು ಎರಡು ಹಂತಗಳಲ್ಲಿ ನಡೆಯುತ್ತಿದೆ. ಫೇಸ್ 2A (ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಂವರೆಗೆ) ಮತ್ತು ಫೇಸ್ 2B (ಕೃಷ್ಣರಾಜಪುರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ). ಈ ಮಾರ್ಗವು ಮುಖ್ಯವಾಗಿ ಔಟರ್ ರಿಂಗ್ ರೋಡ್ ಮೂಲಕ ಸಾಗುತ್ತಿದ್ದು, ನಗರದಲ್ಲಿನ ಪ್ರಮುಖ ಐಟಿ ಮತ್ತು ವ್ಯವಹಾರ ಕೇಂದ್ರಗಳನ್ನು ಸಂಪರ್ಕಿಸುತ್ತದೆ.

ಈ ಯೋಜನೆ ವ್ಯಾಪ್ತಿಯಲ್ಲಿ ಎಚ್‌ಎಸ್‌ಆರ್ ಲೇಔಟ್, ಬೆಳ್ಳಂದೂರು, ಮಾರತಹಳ್ಳಿ, ಮಹದೇವಪುರ, ಕೃಷ್ಣರಾಜಪುರ, ಹೆಬ್ಬಾಳ, ಯಲಹಂಕ ಪ್ರದೇಶಗಳು ಸೇರಿವೆ. ಒಟ್ಟು 29 ರಿಂದ 32 ಮೆಟ್ರೋ ನಿಲ್ದಾಣಗಳು ಬರಲಿವೆ. ಫೇಸ್ 2Aಯಲ್ಲಿ ಸುಮಾರು 13 ನಿಲ್ದಾಣಗಳು, ಫೇಸ್ 2Bಯಲ್ಲಿ ಸುಮಾರು 16 ನಿಲ್ದಾಣಗಳು ಇರಲಿವೆ. ಯೋಜನೆಯ ಒಟ್ಟು ವೆಚ್ಚ ಸುಮಾರು 14,700 ರಿಂದ 15,000 ಕೋಟಿ ರೂ. ಇದೆ.
ಈ ಮೆಟ್ರೋ ಮಾರ್ಗವು ಐಟಿ ಹಬ್‌ಗಳನ್ನು ವಿಮಾನ ನಿಲ್ದಾಣದೊಂದಿಗೆ ನೇರವಾಗಿ ಸಂಪರ್ಕ ಕಲ್ಪಿಸುವುದರಿಂದ ಉದ್ಯೋಗ ಮತ್ತು ವ್ಯಾಪಾರಕ್ಕೆ ಮಹತ್ವದ್ದಾಗಿದೆ.
ಇದರಿಂದ ರಿಯಲ್ ಎಸ್ಟೇಟ್‌ನಲ್ಲಿ ಒಳ್ಳೆಯ ಲಾಭವನ್ನು ತಂದುಕೊಡುತ್ತಿದೆ. ಇದರಿಂದ ಸಹಜವಾಗಿಯೇ ಮನೆ ಮತ್ತು ವಾಣಿಜ್ಯ ಆಸ್ತಿಗಳ ಬೇಡಿಕೆ ಹೆಚ್ಚುತ್ತಿದೆ.
ಬೆಳ್ಳಂದೂರು: ಬೆಳ್ಳಂದೂರು ಬೆಂಗಳೂರಿನ ಪ್ರಮುಖ ಐಟಿ ಮತ್ತು ಕಮರ್ಷಿಯಲ್ ಪ್ರದೇಶವಾಗಿದೆ. 2021ರಲ್ಲಿ ಪ್ರತಿ ಚದರ ಅಡಿಗೆ 6,800 ರೂಪಾಯಿಯಿಂದ ಇದೀಗ 8,000 ರೂಪಾಯಿ ಆಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಪ್ರಾಪರ್ಟಿ ಬೆಲೆಯು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಮಾರತಹಳ್ಳಿ ಮತ್ತು ಮಹದೇವಪುರ: ಬೆಂಗಳೂರಿನ ಮಾರತಹಳ್ಳಿ ಮತ್ತು ಮಹದೇವಪುರ ಸೇರಿದಂತೆ ವಿವಿಧ ಪ್ರದೇಶದಲ್ಲಿ ಮೆಟ್ರೋ ಯೋಜನೆಯಿಂದ ಭೂಮಿ / ಪ್ರಾಪರ್ಟಿ ಬೆಲೆ ಹೆಚ್ಚಳವಾಗುತ್ತಿದೆ. ಈ ಭಾಗಗಳಲ್ಲಿ ಮನೆಗಳ ಬೇಡಿಕೆ ಹಾಗೂ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ. ಕಳೆದ 2ರಿಂದ 3 ವರ್ಷಗಳಲ್ಲಿ ಶೇ 15% ರಿಂದ 30% ರವರೆಗೆ ಆಸ್ತಿ ಮೌಲ್ಯ ಏರಿಕೆ ಕಂಡಿದೆ.
ಕೃಷ್ಣರಾಜಪುರ: ಕೃಷ್ಣರಾಜಪುರ ಪ್ರದೇಶವು ಇಂಟರ್‌ಚೇಂಜ್ ಸೌಲಭ್ಯದಿಂದ ಪ್ರಮುಖ ರಿಯಲ್ ಎಸ್ಟೇಟ್ ಕೇಂದ್ರವಾಗುತ್ತಿದೆ. ಇಲ್ಲಿ 22% ರಿಂದ 30%ರವರೆಗೆ ಬೆಲೆ ಏರಿಕೆಯಾಗುವ ಸಾಧ್ಯತೆಯೂ ಇದೆ.
ಹೆಬ್ಬಾಳ: ಬೆಂಗಳೂರಿನ ಪ್ರಮುಖ ಪ್ರದೇಶವಾಗಿರುವ ಹೆಬ್ಬಾಳದಲ್ಲೂ ರಿಯಲ್ ಎಸ್ಟೇಟ್ ಚುರುಕು ಪಡೆದುಕೊಂಡಿದೆ. ಈ ಭಾಗದಲ್ಲಿ ಐಷಾರಾಮಿ ನಿವಾಸ ಮತ್ತು ಕಮರ್ಷಿಯಲ್ ಪ್ರದೇಶವಾಗಿ ಬೆಳೆಯುತ್ತಿದೆ. ಮುಂದಿನ 2 ರಿಂದ 3 ವರ್ಷಗಳಲ್ಲಿ ಶೇ 15% ರಿಂದ 20% ಮೌಲ್ಯ ಏರಿಕೆ ನಿರೀಕ್ಷೆ ಇದೆ.
ಯಲಹಂಕ ಮತ್ತು ವಿಮಾನ ನಿಲ್ದಾಣ ಕಾರಿಡಾರ್: ಭವಿಷ್ಯದಲ್ಲಿ ದೊಡ್ಡ ರೆಸಿಡೆನ್ಷಿಯಲ್ ಹಾಗೂ ಲಾಜಿಸ್ಟಿಕ್ಸ್ ಹಬ್ ಆಗುವ ಸಾಧ್ಯತೆ. ದೀರ್ಘಕಾಲಿಕ ಹೂಡಿಕೆಗಾಗಿ ಈ ಪ್ರದೇಶವು ಅತ್ಯಂತ ಸೂಕ್ತವಾಗಿದೆ.
ಎಚ್‌ಎಸ್‌ಆರ್ ಲೇಔಟ್ - ಸಿಲ್ಕ್ ಬೋರ್ಡ್: ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಎಚ್‌ಎಸ್‌ಆರ್ ಲೇಔಟ್ - ಸಿಲ್ಕ್ ಬೋರ್ಡ್ ಸಹ ಒಂದಾಗಿದೆ. ಇವು ಈಗಾಗಲೇ ಅಭಿವೃದ್ಧಿಯಾಗಿರುವ ಪ್ರದೇಶಗಳಾಗಿವೆ. ಮೆಟ್ರೋ ಸಂಪರ್ಕದಿಂದ ಬಾಡಿಗೆ ಬೇಡಿಕೆಯು ಸಹ ಹೆಚ್ಚಾಗಿದೆ.
Bengaluru Property: ಬೆಂಗಳೂರು ಪ್ರಾಪರ್ಟಿ ಬೆಲೆ ಹೇಗಿದೆ ?
1. ಬೆಂಗಳೂರು ಮೆಟ್ರೋ ನಿರ್ಮಾಣದ ಮೊದಲೇ ಆಸ್ತಿ ಬೆಲೆಗಳು ಶೇ15% ರಿಂದ ಶೇ30% ಏರಿಕೆ ಆಗಿತ್ತು.
2. ಮುಂದಿನ ಹಂತದಲ್ಲಿ ಈ ಭಾಗದಲ್ಲಿ ಪ್ರಾಪರ್ಟಿ ಬೆಲೆಯು ಶೇ. 20% ರಿಂದ 30% ಹೆಚ್ಚಳವಾಗುವ ಸಾಧ್ಯತೆ
3. ಯೋಜನೆ ಪೂರ್ಣವಾದ ಬಳಿಕ ಬಾಡಿಗೆ ಆದಾಯವು ಅಂದಾಜು ಶೇ 10% ರಿಂದ 15% ಏರಿಕೆ ಆಗುವ ನಿರೀಕ್ಷೆ ಇದೆ.
4. ಮೆಟ್ರೋ ಘೋಷಣೆಯಿಂದ ಕಾರ್ಯಾಚರಣೆವರೆಗೂ ಆಸ್ತಿ ಮೌಲ್ಯ 50% ರಿಂದ 70% ಏರಿಕೆಯಾಗಿದೆ ಎಂದು ವರದಿಯಾಗಿದೆ.
ಒಟ್ಟಿನಲ್ಲಿ, ಬೆಂಗಳೂರು ಬ್ಲೂ ಲೈನ್ ಮೆಟ್ರೋ ಯೋಜನೆ ನಗರ ಅಭಿವೃದ್ಧಿಗೆ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ ನೀಡಲಿದೆ.












Click it and Unblock the Notifications