RCB Vs LSG: ಬೆಂಗಳೂರಿನಲ್ಲಿ ಆರ್‌ಸಿಬಿ-ಎಲ್‌ಎಸ್‌ಜಿ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು?

RCB VS LSG IPL 2026: ಐಪಿಎಲ್‌ 2026ರ 23ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಮೈದಾನ ಎಂ.ಚಿನ್ನಸ್ವಾಮಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಎದುರಿಸಲಿದೆ. ಸತತ ಎರಡನೇ ಜಯದ ಮೇಲೆ ಕಣ್ಣಿಟ್ಟಿರುವ ಆರ್‌ಸಿಬಿ, ಈ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವ ಗುರಿ ಹೊಂದಿದೆ. ಹಾಗಾದ್ರೆ, ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು ಸದ್ಯ ಭರ್ಜರಿ ಫಾರ್ಮ್‌ನಲ್ಲಿದೆ. ತಂಡದ ಬ್ಯಾಟಿಂಗ್ ವಿಭಾಗವು ಅತ್ಯಂತ ಬಲಿಷ್ಠವಾಗಿದ್ದು, ಪ್ರತಿ ಪಂದ್ಯದಲ್ಲೂ ಎದುರಾಳಿ ತಂಡದ ಬೌಲಿಂಗ್ ದಾಳಿಯನ್ನು ಧೂಳೀಪಟ ಮಾಡುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿರುವುದು ತಂಡ ಹೆಚ್ಚಿನ ಆತ್ಮವಿಶ್ವಾಸದಲ್ಲಿದೆ. ಸತತವಾಗಿ ರನ್ ಮಳೆ ಹರಿಸುತ್ತಿರುವ ಆರ್‌ಸಿಬಿ ಬ್ಯಾಟರ್‌ಗಳು, ಲಕ್ನೋ ವಿರುದ್ಧವೂ ಅದೇ ರೀತಿ ಆಕ್ರಮಣಕಾರಿ ಆಟ ಪ್ರದರ್ಶಿಸಲು ಸಜ್ಜಾಗಿದ್ದಾರೆ.

RCB vs LSG IPL 2026 Weather Report M Chinnaswamy Pitch Details and Virat Kohli Fitness Update

ತವರಿನಲ್ಲಿ ಮತ್ತೊಮ್ಮೆ ಆರ್ಭಟಿಸಲು ಆರ್‌ಸಿಬಿ ಸಜ್ಜು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮತ್ತೊಮ್ಮೆ ತನ್ನ ಪ್ರಚಂಡ ಬ್ಯಾಟಿಂಗ್ ಶಕ್ತಿಯ ಮೇಲೆ ನಂಬಿಕೆ ಇಟ್ಟಿದೆ. ಈ ಮೂಲಕ, ಈ ಸೀಸನ್‌ನಲ್ಲಿ ಇನ್ನೂ ಲಯ ಕಂಡುಕೊಳ್ಳದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಲು ಸಜ್ಜಾಗಿದೆ. ಇನ್ನೂ ಆರ್‌ಸಿಬಿ ಈವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿದರೆ, ಬೆಂಗಳೂರು ತಂಡವು ಒಟ್ಟು 8 ಅಂಕಗಳನ್ನು ಪಡೆಯುವುದಲ್ಲದೆ, ರಾಜಸ್ಥಾನ್ ರಾಯಲ್ಸ್ ತಂಡವನ್ನು ಕೆಳಗಿಳಿಸಿ ಅಗ್ರಸ್ಥಾನಕ್ಕೇರಲಿದೆ. ಎಲ್ಲರ ಕಣ್ಣು ಈಗ ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಮೇಲಿದೆ. ಕಳೆದ ವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮುಗಿಸಿದ ನಂತರ ಅವರು ಫೀಲ್ಡಿಂಗ್ ಮಾಡಲು ಮೈದಾನಕ್ಕೆ ಬಂದಿರಲಿಲ್ಲ, ಇದು ಅವರ ಲಭ್ಯತೆಯ ಬಗ್ಗೆ ಕುತೂಹಲ ಮೂಡಿಸಿದೆ.

ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಆಡ್ತಾರಾ ಕೊಹ್ಲಿ?

ಮುಂಬೈ ಇಂಡಿಯನ್ಸ್ ವಿರುದ್ಧದ ನಿಧಾನಗತಿಯ ಇನಿಂಗ್ಸ್ ಬಳಿಕ ವಿರಾಟ್ ಕೊಹ್ಲಿ ಸಣ್ಣ ಪ್ರಮಾಣದ ಗಾಯಕ್ಕೆ ಒಳಗಾಗಿದ್ದರು ಮತ್ತು ಬ್ಯಾಟಿಂಗ್ ವೇಳೆ ಸಾಕಷ್ಟು ಹತಾಶರಾಗಿ ಕಾಣುತ್ತಿದ್ದರು. ಆದರೆ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಅವರು ಬೆಂಗಳೂರಿನಲ್ಲಿ ಕಠಿಣ ತರಬೇತಿ ನಡೆಸಿದ್ದು, ಆರ್‌ಸಿಬಿ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಸ್ಥಿರ ಪ್ರದರ್ಶನ ನೀಡಲು ಪರದಾಡುತ್ತಿದ್ದಾರೆ. ಆದರೆ, ತಂಡದ ಬಲಿಷ್ಠ ಬೌಲಿಂಗ್ ವಿಭಾಗ ಹಾಗೂ ಬ್ಯಾಟಿಂಗ್‌ನಲ್ಲಿ ಮುಕುಲ್ ಚೌಧರಿ ಮತ್ತು ಐಡೆನ್ ಮಾರ್ಕ್ರಮ್ ಅವರ ಭರ್ಜರಿ ಫಾರ್ಮ್ ಲಕ್ನೋ ತಂಡಕ್ಕೆ ಆಸರೆಯಾಗಿದೆ. ಆದರೂ, ಮೊಹಮ್ಮದ್ ಶಮಿ ನೇತೃತ್ವದ ಲಕ್ನೋ ಬೌಲಿಂಗ್ ಪಡೆಗೆ ಬೆಂಗಳೂರಿನ ರನ್ ಸ್ನೇಹಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಬ್ಯಾಟರ್‌ಗಳನ್ನು ಕಟ್ಟುಹಾಕುವುದು ಒಂದು ಕಠಿಣ ಸವಾಲಾಗಿದೆ.

ಆರ್‌ಸಿಬಿ-ಎಲ್‌ಎಸ್‌ಜಿ ಮುಖಾಮುಖಿ ಸಾಧನೆಗಳು

* ಒಟ್ಟು ಪಂದ್ಯಗಳು: 6

* ಆರ್‌ಸಿಬಿ ಗೆಲುವು: 4

* ಎಲ್‌ಎಸ್‌ಜಿ ಗೆಲುವು: 2

ಈ ಅಂಕಿಅಂಶಗಳ ಪ್ರಕಾರ ಲಕ್ನೋ ವಿರುದ್ಧ ಬೆಂಗಳೂರು ತಂಡವು ಪ್ರಾಬಲ್ಯ ಹೊಂದಿದೆ. ಈ ಬಲವಾದ ದಾಖಲೆಯೊಂದಿಗೆ ಬುಧವಾರದ ಪಂದ್ಯಕ್ಕೆ ಸಜ್ಜಾಗಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ತನ್ನ ತವರು ಮೈದಾನದಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ವಿರುದ್ಧ ಮತ್ತೊಂದು ಜಯ ದಾಖಲಿಸುವ ವಿಶ್ವಾಸದಲ್ಲಿದೆ.

ಎಂ.ಚಿನ್ನಸ್ವಾಮಿ ಪಿಚ್ ರಿಪೋರ್ಟ್‌

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಮತ್ತು ಚಿಕ್ಕ ಬೌಂಡರಿಗಳು ಸಾಂಪ್ರದಾಯಿಕವಾಗಿ ಟಿ20 ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತವೆ. ಬುಧವಾರದ ಪಂದ್ಯದಲ್ಲೂ ಇದು ಮುಂದುವರಿಯುವ ನಿರೀಕ್ಷೆಯಿದೆ. ಈ ಸೀಸನ್‌ನಲ್ಲಿ ಇಲ್ಲಿ ನಡೆದ ಕಳೆದ ಎರಡು ಪಂದ್ಯಗಳಲ್ಲಿ ಎರಡೂ ತಂಡಗಳು 200ಕ್ಕೂ ಹೆಚ್ಚು ರನ್ ಗಳಿಸಿವೆ. ಹೀಗಾಗಿ, ಆರ್‌ಸಿಬಿ ಮತ್ತು ಲಕ್ನೋ ನಡುವಿನ ಈ ಪಂದ್ಯವೂ ಕೂಡ ಮತ್ತೊಂದು ಹೈ-ಸ್ಕೋರಿಂಗ್ ಹಣಾಹಣಿಯಾಗುವ ಸಾಧ್ಯತೆಯಿದೆ.

ಬೆಂಗಳೂರಿನ ಹವಾಮಾನ ವರದಿ

ಬುಧವಾರ (ಏಪ್ರಿಲ್ 15) ಬೆಂಗಳೂರಿನಲ್ಲಿ ತಾಪಮಾನ ಪ್ರಮಾಣ ಹೆಚ್ಚಿರಲಿದೆ. ಮಳೆಯ ಮುನ್ಸೂಚನೆ ಇಲ್ಲದ ಕಾರಣ ಪಂದ್ಯಕ್ಕೆ ಯಾವುದೇ ಅಡೆತಡೆ ಉಂಟಾಗುವುದಿಲ್ಲ. ಹಗಲಿನಲ್ಲಿ ಗರಿಷ್ಠ ತಾಪಮಾನ 36°C, ಕನಿಷ್ಠ ತಾಪಮಾನ 22°C ದಾಖಲಾಗುವ ಸಾಧ್ಯತೆಯಿದೆ. ಸಂಜೆ ತಾಪಮಾನವು ಸಂಜೆಯ ವೇಳೆಗೆ ಗಮನಾರ್ಹವಾಗಿ ಇಳಿಕೆಯಾಗಲಿದೆ. ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಟ್ಟಿನಲ್ಲಿ ಸಂಪೂರ್ಣ 20 ಓವರ್‌ಗಳ ರೋಚಕ ಪಂದ್ಯವನ್ನು ಯಾವುದೇ ಮಳೆ ಅಡ್ಡಿಯಿಲ್ಲದೆ, ಅಭಿಮಾನಿಗಳು ಸವಿಯಬಹುದು.

ನೇರಪ್ರಸಾರ, ಸಮಯದ ವಿವರ

* ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಹಾಗೂ ಜಿಯೋ ಹಾಟ್‌ಸ್ಟಾರ್ ಆಪ್ ಮತ್ತು ವೆಬ್‌ಸೈಟ್‌ಗಳಲ್ಲಿ ವೀಕ್ಷಣೆ ಮಾಡಬಹುದು.

* ಸಮಯ: ಸಂಜೆ 7:30ಕ್ಕೆ (ಭಾರತೀಯ ಕಾಲಮಾನ).

* ಸ್ಥಳ: ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+