April 15 Horoscope: ಈ ರಾಶಿಯವರ ವೃತ್ತಿ ಬದುಕಿನಲ್ಲಿ ಪ್ರಮುಖ ಬದಲಾವಣೆ ಸಾಧ್ಯತೆ, ದಿನ ಭವಿಷ್ಯ ಹೀಗಿದೆ
Horoscope April 15: ಬುಧವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಬುಧವಾರ ಸಾಮಾನ್ಯವಾಗಿ ಮಧ್ಯಾಹ್ನ 12:00 ರಿಂದ 1:30 ರವರೆಗೆ ಇರುತ್ತದೆ. ಏಪ್ರಿಲ್ 15 ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.
ಮೇಷ ರಾಶಿ: ವೃತ್ತಿಪರ ಅವಕಾಶಗಳು ಹೊರಹೊಮ್ಮುತ್ತವೆ.ಆದರೆ ಆತುರಕ್ಕೆ ಬಿದ್ದು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸುವತ್ತ ಗಮನಹರಿಸಿದರೆ ವೃತ್ತಿಜೀವನದಲ್ಲಿ ಪ್ರಗತಿ ಸಾಧ್ಯ. ಸಂಗಾತಿಯೊಂದಿಗೆ ಮಾತುಕತೆ ನಡೆಸುವಾಗ ಶಾಂತವಾಗಿರಿ.

ವೃಷಭ ರಾಶಿ: ವೃತ್ತಿ ಬದುಕಿನಲ್ಲಿ ಮಹತ್ತರ ಬದಲಾವಣೆಯಾಗುವುದು. ತಾಳ್ಮೆಯಿಂದ ವ್ಯವಹರಿಸಿ.ನಿಮ್ಮ ಕಟು ಮಾತುಗಳು ಇನ್ನೊಬ್ಬರ ಮನಸ್ಸು ಮುರಿಯುವುದಕ್ಕೆ ಕಾರಣವಾಗಬಹುದು.ಮಾತಿನ ಮೇಲೆ ಹಿಡಿತವಿದ್ದರೆ ಒಳ್ಳೆಯದು. ಆರೋಗ್ಯ ಉತ್ತಮವಾಗಿರುವುದು.
ಮಿಥುನ ರಾಶಿ: ವೃತ್ತಿಜೀವನದ ಜವಾಬ್ದಾರಿಗಳು ಮತ್ತು ಬಾಕಿ ಇರುವ ಕೆಲಸಗಳನ್ನು ಮುಗಿಸುವತ್ತ ಪ್ರಾಮುಖ್ಯತೆ ನೀಡಿ. ಅತಿಯಾಗಿ ಯೋಚಿಸುವುದನ್ನು ಕಡಿಮೆ ಮಾಡಿ. ವಿಶ್ರಾಂತಿಗೆ ಆದ್ಯತೆ ನೀಡಿ.
ಕರ್ಕಾಟಕ ರಾಶಿ: ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಹೊಸ ಮನ್ನಣೆ ಸಿಗುವುದು.ಕಚೇರಿಯಾಗಲಿ, ಮನೆಯಾಗಲಿ ಮಾತನಾಡುವ ವೇಳೆ ತಾಳ್ಮೆ ಬಹಳ ಮುಖ್ಯ.ಆರೋಗ್ಯದ ಬಗ್ಗೆ ಹೇಳುವುದಾದರೆ ದೈಹಿಕ ಆರಾಮಕ್ಕಿಂತ ಮಾನಸಿಕ ವಿಶ್ರಾಂತಿ ಅಗತ್ಯವಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ.
ಸಿಂಹ ರಾಶಿ: ಕಚೇರಿ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಇಂದಿನ ದಿನ ಹೆಚ್ಚು ಭಾವನಾತ್ಮಕವಾಗಿರಲಿದೆ. ಮನಸ್ಸಿನ ಒತ್ತಡ ನಿರ್ವಹಿಸಲು ಸಾಧ್ಯವಾದಷ್ಟು ವಿಶ್ರಾಂತಿ ಮಾಡಿ. ಹಣಕಾಸಿನ ಬಗ್ಗೆ ಎಚ್ಚರಿಕೆಯಿಂದ ಇರುವುದು ಸೂಕ್ತ.
ಕನ್ಯಾ ರಾಶಿ: ಅತಿಯಾಗಿ ಯೋಚಿಸುವುದನ್ನು ತಪ್ಪಿಸಿ.ಆರ್ಥಿಕವಾಗಿಯೂ ಈ ದಿನ ನಿಮ್ಮ ಪರವಾಗಿ ಇಲ್ಲ.ಕೆಲಸ ಕಾರ್ಯಗಳನ್ನು ಮಾಡುವಾಗ ಎಚ್ಚರಿಕೆ ಇರಲಿ. ಪಾಲುದಾರಿಕೆ ಕೆಲಸಕ್ಕೆ ಕೈ ಹಾಕದೆ ಇರುವುದೇ ಒಳ್ಳೆಯದು.
ತುಲಾ ರಾಶಿ: ಕೆಲಸದ ಜವಾಬ್ದಾರಿ ಹೆಚ್ಚಾಗುವುದು. ನಿಮ್ಮ ಅಪೇಕ್ಷೆಯಂತೆ ಎಲ್ಲವೂ ನಡೆಯುವುದಿಲ್ಲ.ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡಿ. ಯಾರ ಮೇಲೂ ಅತಿಯಾಗಿ ನಂಬಿಕೆ ಬೇಡ.
ವೃಶ್ಚಿಕ ರಾಶಿ: ಅರ್ಥಪೂರ್ಣ ಕೆಲಸದಲ್ಲಿ ತೊಡಗಿಸಿಕೊಳ್ಳುವಿರಿ. ಮಾನಸಿಕ ಒತ್ತಡವನ್ನು ನಿರ್ವಹಿಸಲು ಸೃಜನಶೀಲ ಮಾರ್ಗಗಳನ್ನು ಕಂಡುಕೊಳ್ಳುವುದು ಒಳ್ಳೆಯದು. ಊಹಾತ್ಮಕ ಹೂಡಿಕೆಗಳ ಬಗ್ಗೆ ಇರಲಿ.
ಧನು ರಾಶಿ: ಈ ದಿನ ಮನೆ, ಕುಟುಂಬ ಎಂದು ಭಾವನಾತ್ಮಕ ನೆಲೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ.ವೃತ್ತಿಜೀವನದಲ್ಲಿ ಮಹತ್ತರ ಬದಲಾವಣೆಯಾಗುವುದು. ಯಾವುದೇ ಹೊಸ ಯೋಜನೆ ಬಗ್ಗೆ ಜಾಗರೂಕರಾಗಿರಿ.
ಮಕರ ರಾಶಿ: ತಾಳ್ಮೆಯಿದ್ದರೆ ಮಾತ್ರ ಕೆಲಸದಲ್ಲಿ ಜಯ ಗಳಿಸುವುದು ಸಾಧ್ಯವಾಗುವುದು. ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ತೀರ್ಮಾನ ತೆಗೆದುಕೊಳ್ಳುವಾಗ ನಿಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಸರಿಯಾಗಿ ಯೋಚನೆ ಮಾಡಿಕೊಳ್ಳಿ.
ಕುಂಭ ರಾಶಿ: ಚಿಂತನಶೀಲ ಚರ್ಚೆಗಳು ನಡೆಯುವುದು.ಆರೋಗ್ಯ ಉತ್ತಮವಾಗಿರುವುದು.
ಆದರೂ ಅತಿಯಾದ ಒತ್ತಡ ತೆಗೆದುಕೊಳ್ಳಬೇಡಿ.ಅಪಾಯಕಾರಿ ಹೂಡಿಕೆಗಳ ಬಗ್ಗೆ ಎಚ್ಚರ ಇರಲಿ.
ಮೀನ ರಾಶಿ: ಎಲ್ಲಾ ಕೆಲಸಗಳಲ್ಲಿಯೂ ಪ್ರಗತಿಯಾಗುವುದು.ನಾಯಕತ್ವದ ಜವಾಬ್ದಾರಿ ಹೆಗಲೇರುವುದು.ಆರ್ಥಿಕವಾಗಿ ಇಂದಿನ ದಿನ ಸ್ಥಿರವಾಗಿರುವುದು.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications