Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ
Gold Price Today Latest Update: ಚಿನ್ನದ ಬೆಲೆಯಲ್ಲಿ ಅಸ್ಥಿರತೆ, ನಿರಂತರ ಏರಿಳಿತ ಮುಂದುವರಿದಿದೆ. ವಾರಾಂತ್ಯದಲ್ಲಿ ಏರಿಕೆ ಕಂಡಿದ್ದ ಚಿನ್ನಾಭರಣಗಳ ಬೆಲೆಯು ಇದೀಗ ಮತ್ತೆ ತಕ್ಕಮಟ್ಟಿನ ಇಳಿಕೆ ಕಂಡಿದೆ. ದೇಶದಲ್ಲಿ ದರ ಇಳಿಕೆ ಆಗುತ್ತಿದ್ದಂತೆ ಹೆಚ್ಚಾಗಿದ್ದ ಬೇಡಿಕೆ ಇತ್ತೀಚಿನ ಹೆಚ್ಚಳದಿಂದ ಕೊಂಚ ಕಡಿಮೆ ಆಗಿತ್ತು. ಇದೀಗ ಬೆಲೆಯಲ್ಲಿ ಮತ್ತೆ ಇಳಿಕೆ ಆಗಿದ್ದು, ಗ್ರಾಹಕರಿಗೆ ಚಿನ್ನ ಖರೀದಿಗೆ ಸೂಕ್ತ ಸಮಯ ಎನ್ನಲಾಗುತ್ತಿದೆ. ವಾರದ ಮೊದಲ ದಿನ ಸೋಮವಾರ (ಏಪ್ರಿಲ್ 13) ಎಷ್ಟಿದೆ ಬೆಲೆ?
ಚಿನ್ನ ಮತ್ತು ಬೆಳ್ಳಿ ದರಗಳು ಅತ್ಯಧಿಕ ಗರಿಷ್ಠ ದರ ಮುಟ್ಟುವವರೆಗೆ ಅವುಗಳ ದರ ಏರುಗತಿಯಲ್ಲಿತ್ತು. ನಂತರ ಫೆಬ್ರವರಿ ಮೊದಲ ವಾರ ಗರಿಷ್ಠ ಪ್ರಮಾಣದಲ್ಲಿ ಇಳಿಕೆಯತ್ತ ಸಾಗಿತು. ಅಲ್ಲಿಂದ ಏಪ್ರಿಲ್ 13ರವರೆಗೆ ಬೆಲೆಯಲ್ಲಿ ಹಾವು ಏಣಿ ಆಟ ಮುಂದುವರಿದಿದೆ. ಮದುವೆ, ಇನ್ನಿತರ ಸಮಾರಂಭಗಳಿಗೆ, ಅಕ್ಷಯ ತೃತೀಯದಂತಹ ಸುಸಂದರ್ಭಗಳಲ್ಲಿ ಚಿನ್ನ ಖರೀದಿಗೆ ಹಿಂದು ಮುಂದು ನೋಡುವಂತೆ ಆಗಿದೆ. ವ್ಯಾಪಾರಿಗಳಿಗೆ ಈ ಹಳದಿ ಲೋಹದ ದರ ಬದಲಾವಣೆಗೆ ಸಾಕಾಗಿದ್ದಾರೆ. ಏಕೆಂದರೆ ದಿಢೀರ್ ಏರಿಳಿಗಳು ಅವರ ಆದಾಯ, ಲಾಭ, ಬೃಹತ್ ಖರೀದಿಗೆ ತೊಂದರೆ ಆಗುತ್ತದೆ.

ಇಂದಿನ ಚಿನ್ನ ಬೆಳ್ಳಿ ದರ ನೋಡುವುದಾದರೆ, 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಕುಸಿದಿದೆ. 22 ಕ್ಯಾರಟ್ ಒಂದು ಗ್ರಾಂ ಬಂಗಾರಕ್ಕೆ 35 ರೂಪಾಯಿ, 24 ಕ್ಯಾರಟ್‌ನ ಅಷ್ಟೇ ತೂಕದ ಚಿನ್ನದ 38 ರೂಪಾಯಿ ಕಡಿಮೆ ಆಗಿದೆ. ಕಳೆದ ಎರಡು ದಿನ ಏರಿಕೆ ಆಗಿದ್ದ ಚಿನ್ನ ಕುಸಿಯಲು ತನ್ನದೇ ಆದ ಹಲವು ಕಾರಣಗಳಿವೆ. ಇದೇ ಸ್ಥಿತಿ ಮುಂದುವರಿದರೆ ಹೂಡಿಕೆದಾರರು ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ
* 22 ಕ್ಯಾರಟ್: 10 ಗ್ರಾಂ 22 ಕ್ಯಾರಟ್ ಬಂಗಾರದ ಬೆಲೆ 350 ರೂಪಾಯಿ ಕುಸಿದು 1,39,750 ರೂಪಾಯಿ ಇದೆ. ನೆನ್ನೆ ಭಾನುವಾರ (ಏ.12) 1,40,100 ರೂಪಾಯಿ ಇತ್ತು.
* 24 ಕ್ಯಾರಟ್: 10 ಗ್ರಾಂ 24 ಕ್ಯಾರಟ್ ಚಿನ್ನದ ದರ ಇಂದು 380 ರೂ. ಇಳಿಕೆಯಾಗಿ 1,52,460 ರೂ. ಮುಟ್ಟಿದೆ. ಇದರ ಬೆಲೆ ನೆನ್ನೆ ಭಾನುವಾರ (ಏ.12) 1,52,840 ರೂಪಾಯಿ ಇತ್ತು.
* 18 ಕ್ಯಾರಟ್: 18 ಕ್ಯಾರಟ್ ಹತ್ತು ಗ್ರಾಂ ಬಂಗಾರವು 290 ರೂಪಾಯಿ ಕುಸಿಯುವ ಮೂಲಕ ಅದರ ಬೆಲೆ 1,14,340 ರೂಪಾಯಿ ತಲುಪಿದೆ ಎಂದು ಮಾರುಕಟ್ಟೆ ಮೂಲಗಳು ಮಾಹಿತಿ ನೀಡಿವೆ.
ಬೆಳ್ಳಿ ದರದಲ್ಲೂ ಭಾರೀ ಕುಸಿತ
ವಾರಾಂತ್ಯದಲ್ಲೂ ಇಳಿಕೆ ಕಂಡಿದ್ದ ಬಿಳಿ ಲೋಹ ಬೆಳ್ಳಿಯು ವಾರದ ಮೊದಲ ದಿನ ಸೋಮವಾರವು ಕುಸಿತವಾಗಿದೆ. 100 ಗ್ರಾಂ ಬೆಳ್ಳಿ ದರ 500 ರೂಪಾಯಿಯಂತೆ, 1ಕೆಜಿ ಬೆಳ್ಳಿಗೆ 5000 ರೂಪಾಯಿ ಇಳಿಕೆಯಾಗಿದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಕುಸಿತ ಕಾಣುತ್ತಿದೆ. ಭಾನುವಾರ ಬೆಳ್ಳಿ ದರ ಸ್ಥಿರವಾಗಿತ್ತು. ಕಳೆದ ವಾರ ಏಪ್ರಿಲ್ 8 ಮತ್ತು 10 ರಂದು ಎರಡು ಬಾರಿ ಏರಿಕೆ ಆಗಿದ್ದು ಬಿಟ್ಟರೆ ಬೆಳ್ಳಿ ತನ್ನ ದರದಲ್ಲಿ ಬಹುತೇಕ ಸ್ಥಿರತೆ ಕಾಯ್ದುಕೊಂಡಿದೆ.
ನಗರವಾರು 22 ಕ್ಯಾರಟ್ 10 ಚಿನ್ನದ ಬೆಲೆ
ಚೆನ್ನೈ: 14,060 ರೂಪಾಯಿ
ಮುಂಬೈ: 13,975ರೂಪಾಯಿ
ದೆಹಲಿ: 13,990 ರೂಪಾಯಿ
ಕೊಲ್ಕತ್ತಾ: 13,975 ರೂಪಾಯಿ
ಬೆಂಗಳೂರು: 13,975 ರೂಪಾಯಿ
ಹೈದರಾಬಾದ್: 13,975 ರೂಪಾಯಿ
ಕೇರಳ: 13,975 ರೂಪಾಯಿ
ಪುಣೆ: 13,975 ರೂಪಾಯಿ
ಅಹಮದಾಬಾದ್: 13,980 ರೂಪಾಯಿ












Click it and Unblock the Notifications