Akshaya Tritiya Special: ಅಕ್ಷಯ ತೃತೀಯ ಸ್ಪೆಷಲ್: ಪುರುಷರ ಚಿನ್ನದ ಆಭರಣಗಳಲ್ಲಿ ಹೊಸ ಟ್ರೆಂಡ್ಸ್ ವಿವರ
Akshaya Tritiya Special: ಅಕ್ಷಯ ತೃತೀಯಕ್ಕೆ ಇನ್ನು ಕೇವಲ ಐದು ದಿನಗಳು ಮಾತ್ರ ಬಾಕಿ ಉಳಿದಿವೆ. ಏಪ್ರಿಲ್ 19ರಂದು ಈ ಬಾರಿಯ ಅಕ್ಷಯ ತೃತೀಯ ಆಚರಣೆ ಇದೆ. ಅಕ್ಷಯ ತೃತೀಯದ ದಿನ ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಲೋಹಗಳನ್ನು ಖರೀದಿ ಮಾಡುವುದು ಒಳ್ಳೆಯದು ಹಾಗೂ ಶುಭವೆಂದು ಪರಿಗಣಿಸಲಾಗುತ್ತದೆ. ಚಿನ್ನದ ಆಭರಣಗಳ ವಿನ್ಯಾಸದಲ್ಲಿ ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಹೆಚ್ಚು ಆಯ್ಕೆಗಳಿರುತ್ತವೆ ಎಂದು ಹೇಳಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪುರುಷರು - ಯುವಕರಿಗೂ ಚಿನ್ನದ ಆಭರಣಗಳಲ್ಲಿ ಹಲವು ಆಯ್ಕೆಗಳಿವೆ. ಗಂಡು ಮಕ್ಕಳಿಗೆ ಯಾವ ಹೊಸ ಮಾದರಿಯ ಚಿನ್ನದ ಆಭರಣಗಳಿವೆ ಹಾಗೂ ಅಕ್ಷಯ ತೃತೀಯದಂದು ಚಿನ್ನಾಭರಣಗಳನ್ನು ಖರೀದಿ ಮಾಡಬಹುದು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಏಪ್ರಿಲ್ 19ರ 2026 ರಂದು ಬರುವ ಅಕ್ಷಯ ತೃತೀಯ, ಪುರುಷರು ಶಾಶ್ವತ ಸಂಪತ್ತು ಮತ್ತು ಅದೃಷ್ಟವನ್ನು ಆಹ್ವಾನಿಸಲು ಅಮೂಲ್ಯ ಲೋಹಗಳಲ್ಲಿ ಹೂಡಿಕೆ ಮಾಡಲು ಸಾಂಪ್ರದಾಯಿಕವಾಗಿ ಶುಭ ದಿನವಾಗಿದೆ. ಚಿನ್ನದ ನಾಣ್ಯಗಳು ಒಂದು ಶ್ರೇಷ್ಠ ಆಯ್ಕೆಯಾಗಿದೆ ಆದರೆ ಧಾರ್ಮಿಕ ಪೆಂಡೆಂಟ್‌ಗಳಿಂದ ಸಮಕಾಲೀನ ಬ್ರ್ಯಾಂಡ್ ಚಿನ್ನದ ಆಭರಣಗಳು ಸೇರಿದಂತೆ ಹಲವು ಆಯ್ಕೆಗಳಿವೆ. ಇತ್ತೀಚಿನ ದಿನಗಳಲ್ಲಿ ಪುರುಷರ ಆಭರಣಗಳಿಗೆ ಡಿಮ್ಯಾಂಡ್ ಹೆಚ್ಚಳವಾಗಿದೆ.

ಧಾರ್ಮಿಕ ಪೆಂಡೆಂಟ್‌ಗಳು: ಈ ಹಬ್ಬದ ಸಮಯದಲ್ಲಿ ತ್ರಿಶೂಲ, ಓಂ, ಹನುಮಾನ್ ಅಥವಾ ಗಣೇಶನ ಮೂರ್ತಿ ಅಥವಾ ಡಿಸೈಲ್ ಹೊಂದಿರುವ ಚಿನ್ನದ ಆಭರಣಗಳನ್ನು ಖರೀದಿ ಮಾಡಬಹುದಾಗಿದೆ. ಈ ಆಭರಣಗಳು ಆಧ್ಯಾತ್ಮಿಕ ಮಹತ್ವಕ್ಕಾಗಿ ಜನಪ್ರಿಯತೆ ಗಳಿಸಿವೆ.
ಉಂಗುರಗಳು ಮತ್ತು ಬ್ಯಾಂಡ್‌ಗಳು: ಸಾಂಪ್ರದಾಯಿಕ 22 ಕ್ಯಾರೆಟ್ ಚಿನ್ನದಲ್ಲಿ ಉಂಗುರಗಳು ಮತ್ತು ಬ್ಯಾಂಡ್‌ಗಳು ಸಹ ಇತ್ತೀಚಿನ ದಿನಗಳಲ್ಲಿ ಫೇಮಸ್ ಆಗಿವೆ. ಆಧುನಿಕ ಚಿನ್ನದ ಆಭರಣದ ವಿನ್ಯಾಸ ಇರುವ ಒಡವೆಗಳು ಮತ್ತು ಪ್ಲಾಟಿನಂ ಉಂಗುರಗಳವರೆಗೆ ಆಯ್ಕೆಗಳಿವೆ, ಇವು ಸಾಮಾನ್ಯವಾಗಿ ಸೂಕ್ಷ್ಮ ವಜ್ರದ ಹರಳುಗಳನ್ನು ಸಹ ಒಳಗೊಂಡಿರುತ್ತವೆ.
ಚೈನ್‌ಗಳು ಮತ್ತು ಬ್ರೇಸ್ಲೆಟ್‌ಗಳು: 22 ಕ್ಯಾರೆಟ್ ಚಿನ್ನದ ಕರಗಳು, ಭಾರವಾದ ಬ್ರೇಸ್ಲೆಟ್‌ಗಳು ಮತ್ತು ಸ್ಟೈಲಿಷ್ ಚಿನ್ನ ಅಥವಾ ಬೆಳ್ಳಿ ಚೈನ್‌ಗಳು ಫ್ಯಾಷನ್‌ಗೂ ಮತ್ತು ಉತ್ತಮ ಹೂಡಿಕೆಯೂ ಆಗಿವೆ.
ಬೆಳ್ಳಿ ಆಭರಣಗಳು: ಕಡಿಮೆ ಖರ್ಚಿನಲ್ಲಿ ಸಿಗುವ ಮತ್ತು ಶುಭಕರವಾಗಿರುವ ಆಯ್ಕೆ ಎಂದರೆ ಬೆಳ್ಳಿ ಒಡವೆಗಳು ಬೆಳ್ಳಿಯ ಚೈನ್ ಅಥವಾ ಉಂಗುರು ಸೇರಿದಂತೆ ವಿವಿಧ ಹೊಸ ವಿನ್ಯಾಸ ಬೆಳ್ಳಿ ಆಭರಗಳು ಸಹ ಇವೆ. ಇದರಲ್ಲಿ ಬೆಳ್ಳಿ ಉಂಗುರಗಳು ಮತ್ತು ಚೈನ್‌ಗಳು ಪ್ರಮುಖವಾಗಿವೆ.
ಇಯರ್ ಸ್ಟಡ್ಸ್ (Ear Studs): ಪುರುಷರಿಗಾಗಿ ಚಿಕ್ಕದಾದ ವಜ್ರದ ಅಥವಾ ಚಿನ್ನದ ಕಿವಿಯೋಲೆಗಳು (Studs) ಈಗ ಫ್ಯಾಷನ್‌ನಲ್ಲಿವೆ. ಇವುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಟ್ರೆಂಡ್ ಸೃಷ್ಟಿ ಮಾಡಿವೆ.
ಚಿನ್ನದ ಕಡಗ (Kara): ಗಡಸಾಗಿರುವ ಸಾಂಪ್ರದಾಯಿಕ ಚಿನ್ನದ ಕಡಗಗಳು ಅಕ್ಷಯ ತೃತೀಯದ ಜನಪ್ರಿಯ ಆಯ್ಕೆಯಾಗಿವೆ. ಸಣ್ಣ ಮತ್ತು ಮಧ್ಯಮದ ಕಡಗಳನ್ನು ಸಹ ಖರೀದಿ ಮಾಡಬಹುದಾಗಿದೆ.
ಗೋಲ್ಡ್ ಬ್ರೇಸ್‌ಲೆಟ್: ವಾಚ್‌ನಂತೆ ಧರಿಸಬಹುದಾದ ಅಗಲವಾದ ಬ್ರೇಸ್‌ಲೆಟ್‌ಗಳು ಅಥವಾ ಸರಳವಾದ ಚೈನ್ ಮಾದರಿಯ ಬ್ರೇಸ್‌ಲೆಟ್‌ಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿವೆ.
ಬಟನ್‌ಗಳು ಮತ್ತು ಕಫ್‌ಲಿಂಕ್‌ಗಳು: ಇನ್ನು ಸ್ವಲ್ಪ ಹಣ ಹೆಚ್ಚಾಗಿದ್ದರೆ ನೀವು ರೇಷ್ಮೆ ಶರ್ಟ್ ಅಥವಾ ಕುರ್ತಾಗಳಿಗೆ ಧರಿಸಲು ಚಿನ್ನದ ಬಟನ್‌ಗಳು ಮತ್ತು ಕಫ್‌ಲಿಂಕ್‌ಗಳನ್ನು ಖರೀದಿಸಬಹುದು. ಇದು ಶ್ರೀಮಂತರು ಖರೀದಿ ಮಾಡುತ್ತಿರುವ ಚಿನ್ನದ ಆಯ್ಕೆಗಳಾಗಿವೆಯಾದರೂ, ಸಣ್ಣ ಕಾಯಿನ್‌ಗಳನ್ನು ಖರೀದಿ ಮಾಡುವಂತೆ ಖರೀದಿ ಮಾಡಬಹುದಾಗಿದೆ.












Click it and Unblock the Notifications