• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಮತ್ತು ಇತರ ಭಾಷಿಕರ ದುರುಳತನ

By * ಪ್ರಾ|| ಎಚ್. ಷಿಫ್‌ಮನ್, ಅಮೆರಿಕ
|
ಕರ್ನಾಟಕದ ಮಂತ್ರಿ ಮತ್ತು ಕನ್ನಡಿಗರ ಪ್ರತೀಕವಾದ ರಾಜಕುಮಾರ್ ಅವರನ್ನು ಅಪಹರಿಸಿದ ತಮಿಳು ಮೂಲದ ದರೋಡೆಗಾರ ವೀರಪ್ಪನ್, ತಮಿಳನ್ನು ಕನ್ನಡದ ಜೊತೆ ಕರ್ನಾಟಕದ ಸಹ-ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎನ್ನುವ ಷರತ್ತು ಹಾಕಿದ. ಕರ್ನಾಟಕ ಮೊದಲು ಒಪ್ಪಿ, ವೀರಪ್ಪನ್ ಕತೆ ಮುಗಿದ ನಂತರ ನಿರ್ಲಕ್ಷಿಸಿತು. ಇತ್ತೀಚೆಗೆ, ಜನತೆಯ (ಸರಕಾರದ) ಧನಸಹಾಯ ಪಡೆದು, ಕನ್ನಡದಲ್ಲಿ ಕಲಿಸಬೇಕಾಗಿರುವ, ಆದರೆ ಬರಿ ಇಂಗ್ಲಿಷನ್ನು ಬಳಸುತ್ತಿರುವ ಖಾಸಗಿ ಶಾಲೆಗಳನ್ನು ಸರಕಾರ ತರಾಟೆಗೆ ತೆಗೆದುಕೊಂಡಿದೆ.

ಭಾರತದ ಭಾಷಾ ನೀತಿ : ಭಾರತದ ಭಾಷಾ ನೀತಿಯನ್ನು ಮೊದಲು (1950-68) ಅಳವಡಿಸಿಕೊಂಡಾಗ, ಕಾನೂನು ಕ್ಷೇತ್ರದಲ್ಲಿ ಇಂಗ್ಲಿಷು ಅಧಿಕೃತ ಭಾಷೆಯಾಯ್ತು. ಕೇಂದ್ರ-ರಾಜ್ಯಗಳ ನಡುವಣ ಭಾಷೆ ಹಿಂದಿ ಎಂದು ನಮೂದಿತವಾಯ್ತು. ಆದರೆ, ಹಿಂದಿ ಪೂರ್ಣ ಸನ್ನದ್ಧವಾಗಿರದ್ದರಿಂದ ತಾತ್ಕಾಲಿಕವಾಗಿ ಇಂಗ್ಲಿಷೆ ರಾಜ್ಯ-ರಾಜ್ಯಗಳ ನಡುವಣ ಭಾಷೆಯಾಯ್ತು. 8ನೆ ಪರಿಶಿಷ್ಟದಲ್ಲಿ ನಮೂದಿತ ಹಿಂದಿಯೇತರ ವಿವಿಧ ಭಾಷೆಗಳು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣಕ್ಕೆ ನಿಗದಿಸಲ್ಪಟ್ಟವು. ಈ ಭಾಷಾ ನೀತಿಯಂತೆ, ಇಂಗ್ಲಿಷ್ ಬದಲು ಹಿಂದಿ ರಾಷ್ಟ್ರೀಯ ಭಾಷೆಯಾಗಬೇಕು. ಕೇಂದ್ರ-ರಾಜ್ಯ ಸಂಪರ್ಕದಂತೆ ಒಂದು ದಿನ, ಅಂತರ್‌ರಾಜ್ಯ ವ್ಯವಹಾರಗಳನ್ನೂ ಹಿಂದಿಯಲ್ಲಿ ನಡೆಸುವ ಗುರಿ ಇಟ್ಟುಕೊಳ್ಳಲಾಯಿತು.

ಸಂವಿಧಾನದಲ್ಲಿ ಹೇಳಿದಂತೆ, ಇಂಗ್ಲಿಷನ್ನು ಕೈಬಿಡುವ ಸಮಯ 1965ರಲ್ಲಿ ಬಂದಾಗ ಎದ್ದ ಭಾಷಾ ಗಲಭೆಯನ್ನು ಎದುರಿಸಿ, ಈ ಭಾಷಾ ನೀತಿ ನಿಗದಿ ಪಡಿಸಿದ ವ್ಯವಸ್ಥೆಗೆ ಉಳಿಯಲು ಆಗಲಿಲ್ಲ. ವರ್ಷಗಳ ತುಮುಲದ ನಂತರ ತ್ರಿಭಾಷಾ ಸೂತ್ರ' ಎನ್ನುವ ಇನ್ನೊಂದು ವ್ಯವಸ್ಥೆಯನ್ನು ಒಪ್ಪಿಕೊಳ್ಳಲಾಯಿತು. ಈ ಸೂತ್ರದಂತೆ, ಪ್ರತಿಯೊಬ್ಬ ಭಾರತೀಯನೂ ತನ್ನ ಮಾತೃಭಾಷೆ, ಹಿಂದಿ, ಮತ್ತು ಇಂಗ್ಲಿಷನ್ನು ಕಲಿಯಬೇಕು; ಹಿಂದೀಯರು (ನ್ಯಾಯ ಮತ್ತು ಸಮತೋಲನೆಗಾಗಿ) ಇನ್ನೊಂದು ಭಾರತೀಯ ಭಾಷೆಯನ್ನು ಕಲಿಯಬೇಕು. ಆಡು ಭಾಷೆಯ ಬಳಕೆ ಪ್ರಾಥಮಿಕ ಶಾಲೆಯ ವರೆಗೂ ನಿರ್ಬಾಧಿತವಾಗಿ ನಡೆಯುತ್ತದೆ. ಅಲ್ಲಿಗೆ, ವಿಧದ ಮಾತೃಭಾಷೆಗಳ ಕಲಿಕೆ ಪ್ರಾರಂಭವಾಗುತ್ತದೆ. ಇಂಗ್ಲಿಷು, ಮತ್ತು ಹಿಂದಿ ಕೂಡ, ಆಗಲೆ ಕಲಿಯಲಾಗುತ್ತವೆ. ಹದಿನೆಂಟು ವರ್ಷಕ್ಕೆ ಈ ಭಾಷಾ ಕಲಿಕೆ ಮತ್ತೊಂದು ಘಟ್ಟ ತಲುಪುತ್ತದೆ. ಅಲ್ಲಿ ವಿಶಾಲವಾದ ಬಹುಭಾಷಿಕತೆ ಕಂಡುಬರುತ್ತದೆ. ಕನ್ನಡಿಗರು ಆಕ್ಷೇಪಿಸುವುದು, ಎರಡನೆಯ ಸುತ್ತಿನಲ್ಲಿ ಹಿಂದಿಯ ಕಲಿಕೆಯಲ್ಲ, ಆದರೆ ಮೊದಲ ತರಗತಿಗಳಲ್ಲೆ ಇಂಗ್ಲಿಷಿನ ಪ್ರವೇಶ.

1968ರ ನಂತರ ಬಂದ ಈ ಹೊಸ ನೀತಿಯಂತೆ, ಮೊದಲ ಹಂತದಲ್ಲಿ ಮತೃಭಾಷೆ, ನಂತರ ಹಿಂದಿ ಇಂಗ್ಲಿಷುಗಳು, ಅಮೇಲೆ ಇತರ ಭಾಷೆಗಳು. ಹೀಗೆ ಭಾಷೆಯ ಗರ್ಭಗೃಹ'ದಲ್ಲಿ ಮಾತೃಭಾಷೆಯದೆ ಮೇಲುಗೈ ಆಗುವಂತೆ ರಕ್ಷಣೆ ಕೊಡುವುದು.

ಕರ್ನಾಟಕದ ಸ್ಥಿತಿ : ತನ್ನ ಸೀಮೆಯ ಒಳಗೆ ಅನೇಕ ಇತರ ಭಾಷೆಗಳನ್ನು (35%) ಹೊಂದಿದ ಕರ್ನಾಟಕ, ಇತರ ಭಾಷೆಗಳ ದಾಳಿಗಳನ್ನು ತಡೆಗಟ್ಟಲು ಸಾಧನರಹಿತ ಮತ್ತು ಅಶಕ್ತವಾಗಿದೆ, ಅಥವ ಹಾಗೆ ಗ್ರಹಿಸಲಾಗಿದೆ. ವಾಸ್ತವಾಂಶ ಎಂದರೆ, ಕರ್ನಾಟಕದ ಸುಮಾರು 35% ಜನತೆ ಕನ್ನಡೇತರ ಮಾತೃಭಾಷೆಗಳನ್ನು ಹೊಂದಿದ್ದು, ಕನ್ನಡ ಗರ್ಭಗೃಹದಲ್ಲಿ, ತುಳು ಅಂತಹ, ಇತರ ಭಾಷೆಗಳೂ ಸೇರಿವೆ. ಈ ಇತರ ಭಾಷೆಗಳ ಸಂಖ್ಯಾಬಲವೆ ಸಮಸ್ಯೆ ಅಲ್ಲ, ಆದರೆ ಕೆಲವು ಭಾಷೆಗಳ 'ದುರುಳತನ' ಮೊದಲ ಸಮಸ್ಯೆ ಆಗಿದೆ; ಹಿಂದಿ ಅಥವ ಇಂಗ್ಲಿಷು ಅಲ್ಲ, ಆದರೆ ತಮಿಳು ಮುಖ್ಯ ವೈರಿ ಎಂದು ಗ್ರಹಿಸಲಾಗಿದೆ. ಐ.ಟಿ. ಉದ್ಯಮ ಮತ್ತು ಕೋಟ್ಯಾಧೀಶರು ತುಂಬಿರುವ ರಾಜಧಾನಿಯಲ್ಲಿ, ತಮಿಳು ಮತ್ತು ಇಂಗ್ಲಿಷು ಸೇರಿ ಒಂದು ಸಂಪತ್ಭರಿತ ವೈಭವೋಪೇತ ಬಣವಾಗಿದೆ ಎಂಬುದೂ ಕಟು ಸತ್ಯ.

ಭಾರತದ ಎಲ್ಲ ರಾಜ್ಯಗಳು ಬಹುಭಾಷಿಕ. ಕೆಲವು ರಾಜ್ಯಗಳ ನಡುವಿನ ದ್ವಿಪಕ್ಷೀಯ ಒಪ್ಪಂದಗಳನ್ನು ಬಿಟ್ಟರೆ, ತಮ್ಮ ಭಾಷಾ ಶಾಲೆಗಳನ್ನು ಸ್ಥಾಪಿಸಲು ಅಲ್ಪ ಸಂಖ್ಯಾತರಿಗೆ ರಾಷ್ಟ್ರಪತಿಗಳಿಗೆ ಬೇಡಿಕೊಳ್ಳದೆ ಬೇರೆ ದಾರಿ ಇಲ್ಲ. ಆದ್ದರಿಂದ, ಕನ್ನಡಕ್ಕೆ ಬಡಿದಿವೆ ಎಂದುಕೊಂಡಿರುವ ಅನಿಷ್ಟಗಳನ್ನು ಹಿಡಿತದಲ್ಲಿ ತರಲು, ಆಪದ್ಗ್ರಸ್ತತೆಯ ಕರೆ ಅಂತರ್‌ರಾಷ್ಟ್ರಿಯ ಮಟ್ಟದಲ್ಲಿ ಮಾನ್ಯತೆ ಪಡೆದ ವಿಧಾನವೆ ಆಗಿದೆ. ಮತ್ತೆ, ಎಲ್ಲ ಕನ್ನಡಿಗರಿಗೆ ತಿಳಿದಿರುವಂತೆ, ತಮಿಳುನಾಡಿಗೆ ಹತ್ತಿರವಾದ ಬೆಂಗಳೂರಿನ ಸ್ಥಾನ ಇನ್ನೂ ಹೆಚ್ಚು ಅಭದ್ರವಾಗಿದೆ. ಬೆಂಗಳೂರಿನಲ್ಲಿ ತಮಿಳೆ ಬಹುಸಂಖ್ಯಾಕರ ಭಾಷೆಯಾದರೆ, ತಮಿಳುನಾಡು ಅದು ತನ್ನದು ಎಂದು ಸಾಧಿಸುವುದು ಎನ್ನುವ ಭಯ!

ಕರ್ನಾಟಕದ ನಕಾಶೆಯನ್ನು ನೋಡಿ, ಬೆಂಗಳೂರು(ನಗರ) ಜಿಲ್ಲೆಯು ತಮಿಳುನಾಡಿಗೆ ಮೇರೆಯಲ್ಲಿ ಹೊಂದಿಕೊಂಡಿದೆ. ಅಂದರೆ, ತಮಿಳರು, ಬೆಂಗಳೂರಿಗೆ ಬರಲು, ಭಾಷಾ ಸೀಮೆಯನ್ನು ದಾಟುವ ಅವಶ್ಯಕತೆಯೆ ಇಲ್ಲ. ಆದ್ದರಿಂದ, ಬೆಂಗಳೂರು ಹೇಗೋ ತಮಿಳಿನ ಕಡೆಗೆ ವಾಲಿ, ಕರ್ನಾಟಕದ ರಾಜಧಾನಿ ಆದರೂ, ತಮಿಳುನಾಡು ಅದರ ಮೇಲೆ ತನ್ನ ಹಕ್ಕು ಸಾಧಿಸಬಹುದು ಎನ್ನುವ ಭಯವನ್ನು ಅರ್ಥ ಮಾಡಿಕೊಳ್ಳಬಹುದು. ಆದಾಗ್ಯೂ, ಇತರ ಪ್ರದೇಶಗಳ ಮೇಲೆ ತಮ್ಮ ಹಕ್ಕನ್ನು ಸಾಧಿಸುವಲ್ಲಿ ಕನ್ನಡಿಗರೇನು ಕಡಮೆ ಇಲ್ಲ - ರಾಜ್ಯಗಳ ಪುನಾರಚನೆಯ ನಂತರ, ಮಹಾರಾಷ್ಟ್ರಕ್ಕೆ ಹತ್ತಿದ (ಬೆಳಗಾಂವಿ) ಮತ್ತು ಆಂಧ್ರಕ್ಕೆ ಹತ್ತಿದ (ಎರಡು ತುಂಡಿನ ತುಮಕೂರನ್ನು ನೋಡಿ, ಒಂದು ತುಂಡು ಆಂಧ್ರದಿಂದ ಸಂಪೂರ್ಣವಾಗಿ ಬಳಸಿಕೊಂಡಿದೆ) ಪ್ರದೇಶಗಳು, ರಚನೆಯು 1950ರ ಗಣತಿಯ ಮೇಲೆ ಆಧರಿಸಿತ್ತೆಂದು ಮತ್ತು ಹೊರನಾಡಿನವರನ್ನು ಬಸ್ಸುಗಟ್ಟಲೆ ತುಂಬಿ ತಂದು ಸಂಖ್ಯೆಗಳನ್ನು ಉಬ್ಬಿಸಿದರೆಂದು, ಕೆಲ ವರ್ಷ ಗಲಭೆಗೆ ಈಡಾದವು. ಬಾಂಬೆ ಮತ್ತು ಮದ್ರಾಸುಗಳೂ ಗುಜರಾತಿ ಮತ್ತು ತೆಲುಗು ಭಾಷಿಕರೊಡನೆ ಗಲಭೆಯನ್ನು ಕಂಡವು.

ಮುಕ್ತಾಯ : ಕನ್ನಡದ "ಆಪದ್ಗ್ರಸ್ತ" ಸ್ಥಿತಿ ಕೆಲವು ದಶಕಗಳ ಹಿಂದಿಗಿಂತ ಈಗ ಹೆಚ್ಚೇನು ಇಲ್ಲ, ಆದರೆ, ಬಹುಶ ರಾಜಧಾನಿ ಬೆಂಗಳೂರಿನಲ್ಲಿ ಎದ್ದು ಕಾಣುವ ಕನ್ನಡ ಮಾತಾಡುವವರ ಕೊರತೆಯಿಂದ, ಅದರ ಗ್ರಹಿಕೆ ಹಿಂದಿಗಿಂತ ಬಲವತ್ತರವಾಗಿದೆ. "ಆಪದ್ಗ್ರಸ್ತ ಭಾಷೆ" ಎನ್ನುವ ಪದ ಎಲ್ಲರಲ್ಲಿ ಅನುಕಂಪ ಮೂಡಿಸುವುದರಿಂದ, ಕನ್ನಡದ ಅರೆ-ಅಲ್ಪಸಂಖ್ಯಾ ಸ್ಥಿತಿ (66% ಅಲ್ಪಸಂಖ್ಯೆ ಎನ್ನುವುದಾದರೆ) ಬದುಕು-ಸಾವುಗಳ ಭಾಷಾನೀತಿಯ ಪ್ರಶ್ನೆ ಎನ್ನುವಂತೆ ಹೊಸ ರೂಪ ಕೊಡಲಾಗಿದೆ.

ಈ ಲೇಖನದಲ್ಲಿ ಉಪಯೋಗಿಸಿದ ಅಂಕಿ-ಅಂಶಗಳು 2001ರ ಜನಗಣತಿಯಿಂದ ತೆಗೆದುಕೊಂಡಿದೆ. ಮುಂಬರುವ ಜನಗಣತಿಯ ನಂತರ ಇವುಗಳನ್ನು ಮರು ಪರಿಶೀಲಿಸುವುದು ಅಗತ್ಯ. ಮುಖ್ಯವಾಗಿ, ಈ ವಿಷಯದ ಮೇಲೆ ಬೆಳಕು ಚೆಲ್ಲುವ ಉಪಯುಕ್ತ ಪ್ರಶ್ನೆಗಳನ್ನು ಜನಗಣತಿಯಲ್ಲಿ ಅಳವಡಿಸಿಕೊಳ್ಳುವಂತೆ ಕನ್ನಡಿಗರು ಈಗಿನಿಂದಲೆ ನೋಡಿಕೊಳ್ಳಬೇಕು.

(ಕನ್ನಡಕ್ಕೆ: ವಿಶ್ವೇಶ್ವರ ದೀಕ್ಷಿತ)

[1] http://www.censusindia.net/cedat/datatable26.html
[2] http://www.censusindia.net/data/krn.pdf
[3] ಖೂಬಚಂದಾನಿ, ಲಚ್ಮಣ್ ಎಮ್. Plural Languages, Plural Cultures Communication, Identity, and Socio-political Change in Contemporary India. (1983) Honolulu: East-West Center, U. of Hawaii Press.
[4] http://www.newindpress.com/NewsItems.asp?ID=IEK20050718015611&Topic=0
Title=Southern%20News%20-%20Karnataka&Page=K

About the author : Harold F. Schiffman, Professor of Dravidian Linguistics and Culture Acting Director
Dept. of South Asia Regional Studies Penn Language Center
820 Williams Hall, Box 6305 715-16, Williams Hall Box 6305

University of Pennsylvania, Philadelphia, PA 19104-6305
Phone: (215) 898-5825 (215) 898-6039 Fax: (215) 573-2138 Fax (215) 573-2139 Email: haroldfs@ccat.sas.upenn plc@ccat.sas.upenn.edu
WWW: http://ccat.sas.upenn.edu/~haroldfs/ http://ccat.sas.upenn.edu/~plc/

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more