ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ವಿಶ್ವ ವನ್ಯಜೀವಿ ದಿನ, ಓದಲಿಕ್ಕೆ ಇಲ್ಲಿವೆ ನಾಲ್ಕು ಉತ್ತಮ ಲೇಖನ

|
Google Oneindia Kannada News

ಇಂದು (ಮಾರ್ಚ್ 3) ವಿಶ್ವ ವನ್ಯಜೀವಿಗಳ ದಿನ ಆ ಹಿನ್ನೆಲೆಯಲ್ಲಿ ಒನ್ ಇಂಡಿಯಾ ಕನ್ನಡ ಅಂಕಣಕಾರ ಗಗನ್ ಪ್ರೀತ್ ಅವರು ಪ್ರಾಣಿ-ಕಾಡುಗಳ ಬಗ್ಗೆ ಬರೆದ ಆಯ್ದ ಲೇಖನಗಳ ಸಂಕ್ಷಿಪ್ತ ಮಾಹಿತಿ ಲಿಂಕ್ ಅನ್ನು ಮತ್ತೆ ಪ್ರಕಟಿಸಲಾಗುತ್ತಿದೆ. ಇವು ಖಂಡಿತಾ ನಿಮಗೆ ಹಿಡಿಸುತ್ತವೆ ಎಂಬ ನಂಬಿಕೆಯಿಂದ.

ಕಾಡೆಂದರೆ ಕುತೂಹಲ. ಕಾಡೆಂದರೆ ಪ್ರಾಣಿ ಸಂಕುಲ. ಕಾಡೆಂದರೆ ಶುದ್ಧ ಆಮ್ಲಜನಕ ಹೊತ್ತುನಿಂತಿರುವ ಮರಗಳ ಸಾಲು. ಕಾಡೆಂದರೆ... ಹೀಗೆ ಬರೆಯುತ್ತಾ ಹೋದರೆ ಇದು ಮುಗಿಯದ ವಿವರಣೆ ಆಗುತ್ತದೆ. ಅಂಥ ಕಾಡಿನ ಗಾಂಭೀರ್ಯ ಹುಲಿಯ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ?

Wilddog

ಆದರೆ, ಹುಲಿಯಂಥ ಹುಲಿಯೇ ಒಂದು ಪ್ರಾಣಿಗೆ ಹೆದರುತ್ತದೆ ಅಂದರೆ ನಂಬ್ತೀರಾ?! ಹೌದು, ಎಂಥ ಹುಲಿಯೂ ಕಾಡು ನಾಯಿ ಅಥವಾ ಇಂಡಿಯನ್ ಡೋಲ್ ಗೆ ಹೆದರುತ್ತದೆ. ಕಾಡುನಾಯಿಗಳ ಬಗ್ಗೆ ಇರುವ ಅಪರೂಪದ ಲೇಖನವನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.

Elephant

ಆನೆ ಅಂದರೆ ನಮಗೆ ಗಣಪ. ಎಲ್ಲ ನಿರ್ವಿಘ್ನವನ್ನು ತೊಡೆದು ಹಾಕುವ ಆದಿ ಪೂಜಿತ. ಆನೆ ಕೂಡ ತುಂಬ ಬುದ್ಧಿವಂತ ಪ್ರಾಣಿ. ಮನುಷ್ಯ ತನ್ನ ಜೀವನವನ್ನು ಆನೆ ಜೊತೆಗೆ, ಅದಕ್ಕೆ ತೊಂದರೆ ಅಗದ ರೀತಿ ಬದುಕೋದು ಹೇಗೆ ಎಂದು ತಿಳಿದುಕೊಂಡಿದ್ದಾನೆ. ಅವುಗಳನ್ನು ಪಳಗಿಸಿ ತನ್ನಿಂದ ಸಾಧ್ಯವಾಗದ ಅಗಾಧ ಕೆಲಸಗಳನ್ನು ಮಾಡಿಸುವುದೇ ಆನೆಗಳಿಂದ. ಆನೆಗಳ ಬಗ್ಗೆ ಕುತೂಹಲ ಎನಿಸುವ ವಿವರಗಳನ್ನು ಒಳಗೊಂಡು ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ.

Red Panda

ಐಯುಸಿಎನ್ ಎಂಬ ವಿಶ್ವ ಸಂಸ್ಥೆಯು ಭಾಗವಾಗಿರುವ ಇಲಾಖೆಯಿಂದ ಮಾಹಿತಿ ಪಡೆದು, ವನ್ಯ ಜೀವಿಗಳ ಸಂತತಿ ಯಾವ ಪ್ರಮಾಣದಲ್ಲಿದೆ ಎಂಬುದನ್ನು ರೆಡ್ ಡೇಟಾ ಬುಕ್ ಎಂಬ ಪುಸ್ತಕದಲ್ಲಿ ಕೊಡುತ್ತಾರೆ. ರೆಡ್ ಅಂದರೆ ಕೆಂಪು. ಕೆಂಪು ಅಪಾಯದ ಸೂಚನೆ. ಯಾವ ಜೀವಿಗಳು ಅಪಾಯದಲ್ಲಿವೆ ಎಂದು ಈ ಪುಸ್ತಕ ತಿಳಿಸುತ್ತದೆ. ಅವುಗಳಿಂದ ಹೆಕ್ಕಿತೆಗೆದ ಮಾಹಿತಿಯನ್ನು ಚೆನ್ನಾಗಿ ಕಟ್ಟಿಕೊಡಲಾಗಿದೆ. ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

Gir Lion

ಭಾರತೀಯರು ನಾವು ಬಹಳ ಅದೃಷ್ಟವಂತರು. ವನ್ಯಜೀವಿಗಳ ವಿಚಾರದಲ್ಲಂತೂ ನಮಗೆ ಗರ್ವ ಪಡುವುದಕ್ಕೆ ಖಂಡಿತ ಕಾರಣಗಳಿವೆ. ಏಕೆಂದರೆ, ಹುಲಿ-ಸಿಂಹ ಎರಡನ್ನೂ ಕಾಣಲು ಸಾಧ್ಯವಿರುವ, ಎರಡೂ ವಾಸಿಸಲು ಯೋಗ್ಯವಾದ ಭೂ ಪ್ರದೇಶ ಇರುವುದು ಭಾರತದಲ್ಲಿ ಮಾತ್ರ. ಗುಜರಾತಿನ ಗಿರ್ ಕಾಡಿನಲ್ಲಿರುವ ಏಶಿಯಾಟಿಕ್ ಸಿಂಹಗಳ ಬಗ್ಗೆ ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ.

English summary
March 3rd is world wild life day. Here is a four articles about wild life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X