ಈಜಲು ಹೋಗಿದ್ದ 23 ವರ್ಷದ ಯುವಕನನ್ನು ಕೊಂದ ಶಾರ್ಕ್
ದೆಹಲಿ, ಏಪ್ರಿಲ್ 7: ಸ್ನೇಹಿತರ ಜೊತೆ ಈಜಲು ಹೋಗಿದ್ದ 23 ವರ್ಷದ ಯುವಕನನ್ನು ಶಾರ್ಕ್ ಕೊಂದಿರುವ ಘಟನೆ ಪೂರ್ವ ಆಸ್ಟ್ರೇಲಿಯದಲ್ಲಿ ನಡೆದಿದೆ.
Recommended Video
ಪೂರ್ವ ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ಐಸ್‌ಲ್ಯಾಂಡ್‌ನಲ್ಲಿ ಸ್ನೇಹಿತರ ಗುಂಪು ಈಜಲು ತೆರಳಿದ್ದರು. ಸೋಮವಾರ ಸಂಜೆ ಸುಮಾರು 5.30 ಸಮಯಕ್ಕೆ ಶಾರ್ಕ್ ಅವರ ಮೇಲೆ ಅಟ್ಯಾಕ್ ಮಾಡಿದೆ. ಈ ಘಟನೆಯಲ್ಲಿ ಒಬ್ಬ ಯುವಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾರ್ಕ್ ದಾಳಿಯ ಬಳಿಕ ಆ ಯುವಕ ತೀವ್ರವಾಗಿ ಗಾಯಗೊಂಡಿದ್ದ. ಕೈ, ಕಾಲು ಹಾಗೂ ತೋಳಿಗೆ ಬಲವಾಗಿ ಪೆಟ್ಟು ಬಿದ್ದಿತ್ತು. ಅಲ್ಲಿಂದ ಕ್ವೀನ್ಸ್ ಲ್ಯಾಂಡ್‌ನ ಖಾಸಗಿ ಆಸ್ಪತ್ರೆಗೆ ಆತನನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದರು. ಬಲವಾಗಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿದ್ದಾನೆ.

ಕಳೆದ ಎರಡು ವರ್ಷಗಳ ಇತಿಹಾಸ ನೋಡಿದ್ರೆ ಪ್ರವಾಸಿ ಸ್ಥಳಗಳಲ್ಲಿ ಶಾರ್ಕ್ ದಾಳಿ ಮಾಡಿರುವ ಬಗ್ಗೆ ಸರಣಿ ಘಟನೆಗಳಿವೆ. 2019, ನವೆಂಬರ್ ತಿಂಗಳಲ್ಲಿ ಲಂಡನ್‌ನ ರೀಯೂನಿಯನ್ ಐಲ್ಯಾಂಡ್‌ನಲ್ಲಿ ಸ್ನಾರ್ಕೆಲಿಂಗ್ ಮಾಡುತ್ತಿದ್ದ ದಂಪತಿ ಮೇಲೆ ಶಾರ್ಕ್ ದಾಳಿ ಮಾಡಿತ್ತು. ಈ ಘಟನೆಯಲ್ಲಿ 40 ವರ್ಷದ ವ್ಯಕ್ತಿಗೆ ಶಾರ್ಕ್‌ಗೆ ಆಹಾರವಾಗಿದ್ದರು.
ಅಂದ್ಹಾಗೆ, ಈ ಪ್ರದೇಶದಲ್ಲಿ ಯಾವುದೇ ಅಪಾಯಕಾರಿ ಜಲಚರಗಳು ಇಲ್ಲ. ಹೀಗಾಗಿ ಈಜಾಡಲು ಸುರಕ್ಷಿತ ಎಂದು ಅಧಿಕಾರಿಗಳು ಪ್ರವಾಸಿಗರಿಗೆ ಅವಕಾಶ ನೀಡಿದ್ದರು. ಆದರೂ ಅಲ್ಲಿ ಶಾರ್ಕ್ ಕಾಣಿಸಿಕೊಂಡಿದ್ದು ಅಚ್ಚರಿ ತಂದಿತ್ತು.












Click it and Unblock the Notifications