ಚಿತ್ರದುರ್ಗದಲ್ಲಿ ಬೆಟ್ಟದ ಮೇಲೆ ಕಾಣಿಸಿಕೊಂಡ ಚಿರತೆ; ಜನರಲ್ಲಿ ಆತಂಕ
ಚಿತ್ರದುರ್ಗ, ಜುಲೈ 25: ಕೆಲ ದಿನಗಳಿಂದ ಚಿತ್ರದುರ್ಗದ ಸುತ್ತಮುತ್ತ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಜನರು ಭಯಭೀತರಾಗಿದ್ದಾರೆ.
ಈಚೆಗೆ ಕುರುಮರುಡಿ ಕೆರೆ ಗ್ರಾಮದ ಬಳಿ ಚಿರತೆಯೊಂದು ನಾಯಿ ಮೇಲೆ ದಾಳಿ ಮಾಡಿದ್ದು, ನಾಯಿಯ ಕಿರುಚಾಟಕ್ಕೆ ಹೆದರಿ ಚಿರತೆ ಕಾಲ್ಕಿತ್ತ ದೃಶ್ಯವನ್ನು ಜನರು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು.

ಚಿತ್ರದುರ್ಗ ತಾಲೂಕಿನ ಕುರುಮರುಡಿಕೆರೆ ಹಾಗೂ ಚಂದ್ರವಳ್ಳಿ ಗುಹೆ ಬಳಿ ಬಂಡೆಯ ಮೇಲೆ ಚಿರತೆ ಪ್ರತ್ಯಕ್ಷವಾಗಿದ್ದು, ವಾಯು ವಿಹಾರಿಗಳು ಮೊಬೈಲ್ ನಲ್ಲಿ ಚಿರತೆ ಕಂಡ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಚಿತ್ರದುರ್ಗ ತಿಮ್ಮಣ್ಣ ನಾಯಕನ ಕೆರೆ, ಬಾಳೆಕಾಯಿ ಸಿದ್ದೇಶ್ವರ ಬೆಟ್ಟದ ಮೇಲೂ ಚಿರತೆ ಕಾಣಿಸಿಕೊಂಡಿದೆ. ಹೀಗೆ ಚಿರತೆಗಳು ಅಲ್ಲಲ್ಲಿ ಕಂಡುಬರುತ್ತಿರುವುದರಿಂದ ಗ್ರಾಮಸ್ಥರಲ್ಲೂ ಆತಂಕ ಮನೆ ಮಾಡಿದೆ.












Click it and Unblock the Notifications