ಉರುಳು ಇಟ್ಟಿದ್ದು ಕಾಡುಹಂದಿಗೆ, ಸತ್ತಿದ್ದು ಚಿರತೆ
ಚಿಕ್ಕಮಗಳೂರು, ಜುಲೈ 2: ಕಾಡು ಹಂದಿಯನ್ನು ಬೇಟೆಯಾಡಲು ಹಾಕಿದ್ದ ಉರುಳಿಗೆ ಚಿರತೆ ಸಿಲುಕಿಕೊಂಡು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಬೀರೂರು ಸಮೀಪದ ದೇವರಹಳ್ಳಿಯಲ್ಲಿ ನಡೆದಿದೆ.
ಕಾಡುಹಂದಿ ಬೇಟೆಗಾಗಿ ಉರುಳನ್ನು ಹಾಕಲಾಗಿದ್ದು, ಅದಕ್ಕೆ ಗಂಡು ಚಿರತೆ ಸಿಲುಕಿಕೊಂಡು ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಚಿರತೆಯು ನಾಲ್ಕು ವರ್ಷದ್ದು ಎಂದು ಅಂದಾಜಿಸಲಾಗಿದೆ.

ಚಿರತೆ ಸತ್ತ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರೀಶೀಲನೆ ನಡೆಸಿದ್ದಾರೆ.












Click it and Unblock the Notifications