ಚಾಮರಾಜನಗರದಲ್ಲಿ ಮರುಕಳಿಸಿದ ಆನೆ ಸಾವಿನ ಪ್ರಕರಣಗಳು
ಚಾಮರಾಜನಗರ, ಮೇ 29: ಚಾಮರಾಜನಗರದಲ್ಲಿ ಮತ್ತೆ ಆನೆ ಸಾವಿನ ಪ್ರಕರಣಗಳು ಮರುಕಳಿಸಿದ್ದು, ಇದೀಗ ಹನೂರು ತಾಲ್ಲೂಕಿನಲ್ಲಿ ಮತ್ತೊಂದು ಒಂಟಿಸಲಗ ಮೃತಪಟ್ಟಿದೆ.
Recommended Video
ಫಿಲಂ ಟಿಕೆಟ್ ಗೆ 5 ರೂಪಾಯಿ ಜಾಸ್ತಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ ಫಿಲಂ ಛೇಂಬರ್| Film Chamber | KFI | BSY
ಕಳೆದ ಮೂರು ದಿನದಲ್ಲಿ ಎರಡು ಆನೆಗಳ ಕಳೇಬರ ಪತ್ತೆಯಾಗಿದ್ದಾವೆ. ಆನೆಗಳ ಸಾವಿನಿಂದ ವನ್ಯ ಜೀವಿ ಪ್ರೇಮಿಗಳಲ್ಲಿ ಆತಂಕ ಮೂಡಿದೆ. ಹನೂರು ತಾಲ್ಲೂಕಿನ ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ 45-50 ವರ್ಷದ ಗಂಡಾನೆಯೊಂದು ಮೃತಪಟ್ಟಿದೆ.
ಮೂರು ದಿನಗಳ ಹಿಂದಷ್ಟೇ ಕೌದಳ್ಳಿ ವನ್ಯಜೀವಿ ವಲಯದ ದಂಟೂರು ಕರೇಕನಹಟ್ಟಿ ಹಗ್ಗು ನಾಲಾದಲ್ಲಿ ಒಂದು ಆನೆಯ ಕಳೇಬರ ಪತ್ತೆಯಾಗಿತ್ತು, ಅಲ್ಲದೆ ಕಳೆದ ಮಾರ್ಚ್ ನಲ್ಲಿ 7 ರಿಂದ 8 ಆನೆ ಮೃತಪಟ್ಟ ಪ್ರಕರಣಗಳು ದಾಖಲಾಗಿದ್ದವು.

ಪದೇ ಪದೇ ಆನೆಗಲು ಸಾವಿಗೀಡಾಗುತ್ತಿದ್ದು, ಇದರ ನಿಖರ ಕಾರಣ ತಿಳಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಮರಣೋತ್ತರ ಪರೀಕ್ಷೆ ನಂತರ ಆನೆ ಸಾವಿಗೆ ನಿಜ ಕಾರಣ ತಿಳಿದು ಬರಲಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳುತ್ತಾರೆ.











Click it and Unblock the Notifications